ಜೇವರ್ಗಿಯಲ್ಲಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು- ಡಾ. ಅಜಯ್ ಸಿಂಗ್

0
10

ಕಲಬುರಗಿ; ಜೇವರ್ಗಿ ಮತಕ್ಷೇತ್ರದಡಿ ಬರುವ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕುಗಳಲ್ಲಿ ಶಾಲೆ, ಕಾಲೇಜುಗಳ ಮೂಲ ಸವಲತ್ತು ಅಭಿವೃದ್ಧಿಗೆ ತಾವು ಹೆಚ್ಚಿನ ಆದ್ಯತೆ ನೀಡಿದ್ದಾಗಿ ಶಾಸಸಕರು ವಿರೋಧ ಪP್ಷÀದ ಮುಖ್ಯ ಸಚೆತಕರಾದ್ ಡಾ ಅಜಯ್ ಸಿಂಗ್ ಹೇಳಿದ್ದಾರೆ.

ಅವರು ಜೇವರ್ಗಿ ಕ್ಷೇತ್ರದ ಕಟ್ಟಿಸಂಗಾವಿ ಗ್ರಾಮದಲ್ಲಿ ಕೆ. ಕೆ. ಆರ್. ಡಿ. ಬಿ. ಮೈಕ್ರೋ ಯೋಜನೆ ಅಡಿಯಲ್ಲಿ   ಸುಮಾರು 1 ಕೋಟಿ 20 ಲP್ಷÀ ವೆಚ್ಚದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 12  ಕೋಣೆಗಳಿಗೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಜೇವರ್ಗಿ ಕ್ಷೇತ್ರದಲ್ಲಿ ಶಾಲೆಗಳಲ್ಲಿ ಕೋಣೆಗಳ ಕೊರತೆ ನೀಗಿಸಲು ಹೆಚ್ಚಿನ ಶ್ರಮ ವಹಿಸಲಾಗಿದೆ. ಪದವಿ ಕಾಲೇಜು ಕಟ್ಟಡ ನಿರ್ಮಾ.ಣ, ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಾಣದಂತಹ ಅಭಿಋದ್ಧಿ ಕೆಲಸಗಳನ್ನು ಮಾಡಿದ್ದಾಗಿ ಹೇಳಿದ ಡಾ. ಅಜಯ ಸಿಂಗ್ ಅವರು ತಮ್ಮ ತಂದೆ ದಿ. ಧರಂಸಿಂಗ್ ಅವರ ಹೆಸರಲ್ಲಿನ ಪ್ರತಿಷ್ಠಾನದ ಮೂಲಕ ಅಕ್ಷರ ಅವಿಷ್ಕಾರ ಮಿಶನ್ ಯೋಜನೆಯಲ್ಲಿ ಜೇವರ್ಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ದಿಗೂ ಶ್ರಮಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಪP್ಷÀದ ಹಿರಿಯ ಮುಖಂಡರಾದ ರಾಜಶೇಖರ್ ಸಿರಿ, ನೀಲಕಂಠ ಅವುಂಟಿ, ಮೊಹಮ್ಮದ್ ನೂರಿ, ರವಿ ಕೊಳಕೂರ್ ವಿಜಯ್ ಪಾಟೀಲ್ ಕಲ್ಲಹಂಗಾರಗಾ,ತಿಪ್ಪಣ್ಣ ನಾಡಗಿರಿ ಬಿಎಸ್ ಪಾಟೀಲ್ ಮಹೇಶ್ ಛತ್ರಿ ಬಾಬು ಮಾದರಿ ನಿಂಗಪ್ಪ ಪೂಜಾರಿ ಕಂಕಣ ತಳರ್ವಾ ಬೀರಪ್ಪ ಪೂಜಾರಿ ಸಂತೋಷ್ ಮ್ಯಾಗೇರಿ ಶರಣಪ್ಪ ಮದರಿ ಸಾಯಬಣ್ಣ ಮಳ್ಳಿ ಸಂತೋಷ್ ತಳರ್ವಾ, ಗೌತಮ್ ಕಟ್ಟಿ ಪ್ರತಾಪ್ ಕಟ್ಟೆ ಮನೋಹರ್, ರಿಯಾಜ್ ಪಟೇಲ್ ಜಾವಿದ್ ಪಟೇಲ್ ಗ್ರಾಮಸ್ಥರು ಉಪಸ್ಥಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here