ದಾಸ ಸಾಹಿತ್ಯ ಶ್ರೇಷ್ಠ ವಾದದ್ದು

0
16

ಕಲಬುರಗಿ: ಭಗವಂತ ಮತ್ತು ಭಜ್ತರ ನಡುವೆ ಕೊಂಡಿಯಾಗಿ ಕೆಲಸ ಮಾಡಿದ ದಾಸರಿಂದ ಹುಟ್ಟಿದ ದಾಸ ಸಾಹಿತ್ಯವು ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಮುರಲೀದರ ದೇಶಪಾಂಡೆ ಹೇಳಿದರು.

ನಗರದ ನ್ಯೂರಾಘವೇಂದ್ರ ಕಾಲೋನಿಯ ಶ್ರೀ ವೆಂಕಟೇಶ್ವರ ಮಂದಿರದಲ್ಲಿ ಭಾನುವಾರ ನಡೆದ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ 22 ನೇ ವಾರ್ಷಿಕೋತ್ಸವ ನಿಮಿತ್ಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಗನ್ನಾಥ ವಿಠ್ಠಲ ಪ್ರಶಸ್ತಿ ಹಾಗೂ ವಿಪ್ರಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ದಾಸ ಸಾಹಿತ್ಯ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯನಡೆಬೇಕಿದೆ ಎಂದರು. ದಾಸರ ಮಹಿಮೆಯನ್ನು ಮನೆಮನಗಳಿಗೆ ತಲುಪಿಸುತ್ತಿರುವ ಹರಿದಾಸ ಸಾಹಿತ್ಯ ಪ್ರಚಾರವಾಹಿನಿಯ ಕಾರ್ಯ ಶ್ಲಾಘನೀಯ ಎಂದ ಅವರು. ಮಹಿಳೆಯರನ್ನು ಒಂದು ಕಡೆ ಕೂಡಿಸಿ ದಾಸ ಸಾಹಿತ್ಯ ಪ್ರಚಾರ ಮಾಡುವ ಮೂಲಕ ವಾಹಿನಿಯು ದಾಸ ಆಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಬಣ್ಣಿಸಿದರು. ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ಅಧ್ಯಕ್ಷತೆ ವಹಿಸಿದ್ದರು. ರವಿಲಾತೂರಕರ್, ರಾಘವೇಂದ್ರ ನಾಡಗೌಡ, ಕಲ್ಯಾಣರಾವ ಭಕ್ಷಿ ಉಪಸ್ಥಿತರಿದ್ದರು. ವಾಹಿನಿಯ ಸಂಚಾಲಕ ಬೆಂಕಿ ಭೀಮಭಟ್ಟ ಪ್ರಾರ್ಥಿಸಿದರು. ವ್ಯಾಸರಾಜ ಸಂತೆಕೆಲ್ಲೂರ ಕಾರ್ಯಕ್ರಮ ನಿರೂಪಿಸಿದರು.

ಜಗನ್ನಾಥ ವಿಠ್ಠಲ ಪ್ರಶಸ್ತಿಗೆ ಭಾಜನರಾದವರು; ಕೊಶೋರ ದೇಶಪಾಂಡೆ, ಶಾಂತಿ ದೇಸಾಯಿ, ಹಾ.ಬಿ.ಸುಬ್ಬಾರಾವ ಮೈಸೂರು ಅವರಿಗೆ ಜಗನ್ನಾಥ ವಿಠ್ಠಲ ಹಾಗೂ ರಾಮಾಚಾರ್ಯ ವೈದ್ಯ, ಗುರುನಾಥ ಭಟ್ಟ ಚಿಟಗುಪ್ಪ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿಗೌರವಿಸಲಾಯಿತು. ಮಠ ಮಮಂದಿರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚ ಕರಾದ ಸಂಜೀವಾಚಾರ್ಯ ಜಾಗಿರದಾರ ಮತ್ತು ಸನ್ನತಿಯ ಶ್ರೀನಾಥ ಭಟ್ಟರಿಗೆ ಸನ್ಮಾನಿಸಲಾಯಿತು.

ಸಂಗೀತದಲ್ಲಿ ಅರಳುತ್ತಿರುವ ಯುವ ಪ್ರತಿಭೆ ಐಶ್ವರ್ಯ ಕುಲಕರ್ಣಿಗೆ ನಾಲ್ಕು ಸಾವಿರ ರೂ. ನಗದು ನೀಡಿ ಸನ್ಮಾನಿಸಲಾಯಿತು.
ಗುರುಸಾರ್ವಭಜನಾ ಮಂಡಳಿಗೆ ಅತ್ತುತ್ತಮ ಭಜನಾಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here