ಸುರಪುರ: ನಗರದ ಸರ್ವೇ ನಂಬರ್ 23/7ರ ಬುದ್ಧ ಗವಿಯ ದರ್ಶನ ಭೂಮಿಯ ಜಾಗವನ್ನು ಖಾಸಗಿ ಟ್ರಸ್ಟ್‍ಗೆ ವರ್ಗಾವಣೆ ಮಾಡಿ ಕೊಟ್ಟಿರುವ ಹಿಂದಿನ ಪೌರಾಯುಕ್ತರ ವಿರುಧ್ಧ ಕ್ರಮ ಕೈಗೊಳ್ಳಿ ಎಂದು ಹೋರಾಟಗಾರ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರಸಭೆ ಮುಂದೆ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ನಗರದ ಬುದ್ಧ ವಿಹಾರದ ಜಾಗವನ್ನು ಹಿಂದಿನ ಪೌರಾಯುಕ್ತರಾಗಿದ್ದ ಜೀವನಕುಮಾರ ಕಟ್ಟಿಮನಿಯವರು ಖಾಸಗಿ ಟ್ರಸ್ಟ್ ಒಂದಕ್ಕೆ ವರ್ಗಾವಣೆ ಮಾಡಿ ಕೊಟ್ಟಿದ್ದಾರೆ.ಇದರ ಕುರಿತು ಈ ಹಿಂದೆ ಮನವಿ ಸಲ್ಲಿಸಿ ಖಾಸಗಿ ಟ್ರಸ್ಟ್‍ಗೆ ಕೊಟ್ಟಿರುವುದನ್ನು ವಾಪಸ್ ಪಡೆಯುವಂತೆ ಆಗ್ರಹಿಸಲಾಗಿತ್ತು,ಒಂದು ವಾರದಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು,ಆದರೆ ಏಳು ತಿಂಗಳಾದರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ,ಅಲ್ಲದೆ ಖಾಸಗಿ ಟ್ರಸ್ಟ್‍ನವರ ಜೊತೆಗೆ ಇವರು ಶಾಮಿಲಾಗಿರುವಂತೆ ಕಾಣುತ್ತಿದೆ,ಆದ್ದರಿಂದ ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿರುವ ಹಿಂದಿನ ಪೌರಾಯುಕ್ತರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಖಾಸಗಿ ಟ್ರಸ್ಟ್‍ಗೆ ನೀಡಿರುವ ಭೂಮಿಯನ್ನು ವಾಪಸ್ ಪಡೆದು ಭಾರತೀಯ ಬೌಧ್ಧ ಮಹಾಸಭಾಕ್ಕೆ ನೀಡಬೇಕು.ಈ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಇದೇ ತಿಂಗಳ 28ನೇ ತಾರೀಖಿನಂದು ನಗರಸಭೆಗೆ ಮುಳ್ಳು ಬೇಲಿ ಹಚ್ಚಿ ಬೇಡಿಕೆ ಈಡೇರುವರೆಗೆ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ನಂತರ ಪೌರಾಯುಕ್ತ ಪ್ರೇಮ್ ಚಾಲ್ರ್ಸ ಅವರಿಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮುಖಂಡರಾದ ಮಾನು ಗುರಿಕಾರ,ಚಂದ್ರಶೇಖರ ಹಸನಾಪುರ,ಮಾನಪ್ಪ ಕಟ್ಟಿಮನಿ ಮಾತನಾಡಿದರು.ಪ್ರತಿಭಟನೆಯಲ್ಲಿ ಮಾನಪ್ಪ ಕಟ್ಟಿಮನಿ,ಮಾನಪ್ಪ ಬಿಜಾಸಪುರ,ಹಣಮಂತ ಬಾಂಬೆ,ಜಟ್ಟೆಪ್ಪ ನಾಗರಾಳ,ಮೂರ್ತಿ ಬೊಮ್ಮನಹಳ್ಳಿ,ರಾಮಣ್ಣ ಶೆಳ್ಳಗಿ,ಖಾಜಾ ಹುಸೇನ ಗುಡಗುಂಟಿ,ಭೀಮಣ್ಣ ಕ್ಯಾತನಾಳ,ಆನಂದ ಹೆಮನೂರ,ಮರಿಯಪ್ಪ ಕಾಂಗ್ರೆಸ್,ಶ್ರೀನಿವಾಸ ಅಗ್ನಿ,ಕಾಳಿಂಗಪ್ಪ ಕಲ್ಲದೇವನಹಳ್ಳಿ,ಶರಣಪ್ಪ ಬೊಮ್ಮನಹಳ್ಳಿ,ಬನ್ನಪ್ಪ ಕೋನ್ಹಾಳ,ಮಲ್ಲಪ್ಪ ಬಾದ್ಯಾಪುರ,ಸಂಗಪ್ಪ ಚಿಂಚೋಳಿ,ಹೊನ್ನಪ್ಪ ದೇವಿಕೇರ,ಪರಮಣ್ಣ ಕಕ್ಕೇರ,ಸುರೇಶರಡ್ಡಿ ಕಕ್ಕೇರ,ಮಲ್ಲಪ್ಪ ಕ್ಯಾತನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.