ಕಲಬುರಗಿ: ಮನೆಯ ಗೃಹಲಕ್ಷ್ಮೀಯಾಗಿರುವ ಗೃಹಿಣಿಗೆ ಮಾಸಿಕ 2 ಸಾವಿರ ರುಪಾಯಿ, ಮಾಸಿಕ 200 ಯೂನಿಟ್ ವಿದ್ಯುಚ್ಚಕ್ತಿ ಉಚಿತ, 10 ಕೆಜಿ ಅಕ್ಕಿ ನೀಉವ ಹಲವು ಜನಪರ ಹಾಗೂ ಬಡವರ ಪರವಾಗಿರುವಂತಹ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ರಾಜ್ಯದಲ್ಲಿ ಜಮನ ಸೆಳೆದಿದ್ದ ಕಾಂಗ್ರೆಸ್ ಪಕ್ಷ ಬೆಳಗಾವಿಯಲ್ಲಿ ನಡೆದ ಯುವ ಕ್ರಾಂತಿ ಹಾಗೂ ಯುವ ನಿಧಿಯು ಘೋಷಣೆಗಳೊಂದಿಗೆ ಕರ್ನಾಟಕ ರಾಜ್ಯದ ಯುವಕರ ಭವಿಷ್ಯ ಬದಲಿಸಲಿದೆ ಎಂದು ಕಾಂಗ್ರೆಸ್ ಮುಖಂರು, ಕೆಪಿಸಿಸಿ ಮಾಜಿ ಸದಸ್ಯರಾದ ಹಣಮಂತರಾವ ಭೂಸನೂರ್ ವಿಶ್ವಾಸÀ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಯುವಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡು ದೇಶದ ನಾಯಕ ರಾಹುಲ್ ಗಾಂಧಿಯವರು ಯುವಕರ ಭವಿಷ್ಯ ಬೆಳಗುವಂತಹ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. 18-25 ವಯೋಮಾನದ ಪದವೀಧರ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 3000 ರುಪಾಯಿ, 18-25 ವಯೋಮಾನದ ಡಿಪೆÇ್ಲೀಮಾ ಮಾಡಿರುವ ಯುವಕರಿಗೆ 2 ವರ್ಷಗಳ ಕಾಲ ಪ್ರತಿ ತಿಂಗಳು 1500 ರುಪಾಯಿ ನೀಡೋದಾಗಿ ಘೋಷಿಸಿದ್ದಾರೆ.
5 ವರ್ಷಗಳಲ್ಲಿ 10 ಲP್ಷÀ ಉದ್ಯೋಗ ಭರವಸೆ ನೀಡಿದ್ದಾರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಖಾಲಿ ಇರುವ 2,50,000 ಸರ್ಕಾರಿ ಹುz್ದÉಗಳ ಭರ್ತಿ ಮಾಡುವ ಘೋಷಣೆಯೂ ಮೊಳಗಿದೆ. ಕಲ್ಯಣ ನಾಡಿನ 7 ಜಿಲ್ಲೆಗಳಿಗೂ ಈಗಾಗಲೇ ಘೋಷಿಸಲಾಗಿರುವ ಕಾಂಗ್ರೆಸ್‍ನ 10 ಗ್ಯಾರಂಟಿಗಳೂ ಇಲ್ಲಿನ ಜಮನ ಸೆಳೆದಿವೆ. ಹೀಗಾಗಿ ಈ ಬಾರಿ ಇಂತಹ ವಿನೂತನ ಜನಪರ ಯೋಜನೆಗಳಿಂದಾಗಿ ರಾಜ್ಯದಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹತ್ತೋದು ಗ್ಯಾರಂಟಿ ಎಂದು ಹಣಮಂತರಾವ ಭೂಸನೂರ್ ಹೇಳಿದ್ದಾರೆ.