ಕಲಬುರಗಿಯಲ್ಲಿ ಮಾ. 23ಕ್ಕೆ ಸೆಕ್ಷನ್ 144 ಜಾರಿ

0
605

ಕಲಬುರಗಿ; ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌,ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರದಂದು ನಗರದ ಇಂದಿರಾ ಸ್ಮಾರಕ ಭವನ (ಟೌನ್ಹಾಲ್‌) ಸುತ್ತ ಮುತ್ತ 200 ಮೀಟರ ವರೆಗೆ ಕಲಬುರಗಿ ಉಪ-ಪೊಲೀಸ್‌ ಆಯುಕ್ತ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಐಪಿಎಸ್ ಅಡ್ಡೂರು ಶ್ರೀನಿವಾಸುಲು ಅವರು ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೋರಡಿಸಿದ್ದಾರೆ.

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದು ವರ್ಷ ಗತ್ತಿಸಿದರು, ಪಾಲಿಕೆಯ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಗೆ ಕೊನೆಗೂ ಕಂಗಣ ಭಾಗ್ಯ ಕೂಡಿ ಬಂದಿದ್ದು, ಈ ಚುನಾವಣೆ ರಾಜ್ಯದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಕಲಬುರಗಿ ರಾಜಕೀಯ ವಲದಯದಲ್ಲಿ ಒಂದಿಷ್ಟು ಪ್ರಭಾವ ಸಾಧಿಸಬಹುದೆಂಬ ಲೆಕ್ಕಚಾರ ಹೊಂದಿದೆ.

Contact Your\'s Advertisement; 9902492681

ಪಾಲಿಕೆ ಚುನಾವಣೆ ಮಾ. 23 ರಂದು ಇಂದಿರಾ ಸ್ಮಾರಕ ಭವನ (ಟೌನ್ಹಾಲ್‌)ದಲ್ಲಿ ನಿಗದಿಯಾಗಿರುವ ಪ್ರಯುಕ್ತ ಸಿ.ಆರ್‌.ಪಿ.ಸಿ ಕಾಯ್ದೆ 1973 ರ ಕಲಂ:144 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ಕಲಬುರಗಿ ನಗರದ ಇಂದಿರಾ ಸ್ಮಾರಕ ಭವನ(ಟೌನ್ಹಾಲ್‌)ದಲ್ಲಿ ಸುತ್ತ ಮುತ್ತ 200 ಮೀಟರ ಅಂದು ಬೆಳ್ಳಿಗೆ :06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ 85 ಅಥವಾ ಅದಕ್ಕಿಂತ ಹಚ್ಚು ಜನರ ಗುಂಪು ಸೇರುವುದನ್ನು ನಿಷೇಧಿಸಿದೆ, ಮೆರವಣಿಗೆ, ಪ್ರತಿಭಟನೆ ಮತ್ತು ಸಭೆಗಳನ್ನು ನಡೆಸುವುದನ್ನು, ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ ಚಾಕು ಇನ್ನೂ ಮುಂತಾದ, ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿ೦ಸೆಯನ್ನುಂಟು ಮಾಡುವ ಯಾವುದೇವಸ್ತುಗಳನ್ನು ಒಯ್ಯುವುದನ್ನು, ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನು ನಿಷೇಧಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here