ಶರಣರು ವಿಶ್ವದ ಮೊದಲ ಪ್ರಜಾಪ್ರಭುತ್ವ ಚಿಂತಕರು

0
27

ಕಲಬುರಗಿ: ರಾಜಸತ್ತೆಯ ಆ ಕಾಲದಲ್ಲಿ ಪ್ರಜಾಚಿಂತನೆ, ಪ್ರಜೆಗಳ ಶ್ರೋಯೋಭಿವೃದ್ಧಿ ಬಯಸಿದ್ದ ಬಸವಾದಿ ಶರಣರು ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿಗಳು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ. ಶರಣಪ್ಪ ಸತ್ಯಂಪೇಟೆ ಭಿಪ್ರಾಯಪಟ್ಟರು.

ಬಸವ ಸಮಿತಿ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಆಶ್ರಯದಲ್ಲಿ ಲಿಂ. ನೀಲಮ್ಮ ಮತ್ತು ಲಿಂ. ಶರಣಪ್ಪ ಕಲ್ಲಪ್ಪ ವಾಲಿ ಸ್ಮರಣಾರ್ಥ ಜಯನಗರದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ 746ನೇ ಅರಿವಿನ ಮನೆ ಕಾರ್ಯಕ್ರಮದಲ್ಲಿ ಶರಣರ ಪ್ರಜಾಪ್ರಭುತ್ವ ಚಿಂತನೆಗಳು ವಿಷಯ ಕುರಿತು ಅನುಭಾವ ನೀಡಿದ ಅವರು, ಬಸವಣ್ಣನವರ ಆನು ಒಲಿದಂತೆ ಆಡುವೆ ಎಂಬ ಉದ್ಘೋಷವು ಪ್ರಜಾಪ್ರಭುತ್ವದ ಮೊದಲ ದನಿ ಹಾಗೂ ಪ್ರಜಾಪ್ರಭುತ್ವದ ಆಶಯವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಭಾರತದ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಬರುವ ಸಮಾಜಿಕ ನ್ಯಾಯ, ಸ್ವತಂತ್ರ್ಯ, ಸಮನತೆ ಹಗೂ ಭ್ರಾತೃತ್ವಗಳು ವಚನ ಸಂವಿಧಾನದಲ್ಲಿವೆ. ಸಾಮಾಜಿಕ, ಆರ್ಥಿಕ, ರಾಜಕೀಯ ತಾರತಮ್ಯ ನಿವಾರಿಸಿ ಸಮಾನತೆ ತರುವ ಇರಾದೆ ಹೊಂದಿದ್ದ ಶರಣರು, ಕೇವಲ ಧಾರ್ಮಿಕ ಚಿಂತಕರಾಗಿರದೆ ಭಾರತದ ಮೊದಲ ಸಾಮಾಜಿಕ ಚಿಂತಕರು ಕೂಡ ಆಗಿದ್ದರು ಎಂಬುದು ಅವರ ಅನೇಕ ವಚನಗಳಿಂದ ತಿಳಿದು ಬರುತ್ತದೆ ಎಂದು ಹೇಳಿದರು.

ಭಕ್ತಿ ಆಂದೋಲನದ ಜೊತೆಗೆ ಜಂಗಮ, ಪುರಾತನ, ಪ್ರಮಥರು ಮತ್ತು ಅನುಭವ ಮಂಟಪದ ಪರಿಕಲ್ಪನೆಯನ್ನು ಹುಟ್ಟು ಹಾಕುವ ಮೂಲಕ ವಚನ ಪ್ರಸಾರ ಕರ್ಯ ಕೈಗೊಂಡರು. ಅಂದಿನ ಅನುಭವ ಮಂಟಪ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಕೇತವಾಗಿದೆ. ಸಂವಿಧಾನದಲ್ಲಿರುವ ಅನೇಕ ಅಂಶಗಳನ್ನು ಶರಣರು ತಮಗೆ ಒಲಿದಂತೆ ಆಗಲೇ ರೂಪಿಸಿಕೊಂಡಿದ್ದರು ಎಂದು ಅವರು ಅನೇಕ ವಚನಗಳ ಉದಾಹರಣೆ ನೀಡಿ ವಿವರಿಸಿದರು.

ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾಸೋಹಿ ಡಾ. ಕೆ.ಎಸ್. ವಾಲಿ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಬಸವ ಸಮಿತಿ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ದಂಡೆ, ಬಂಡಪ್ಪ ಕೇಸೂರ, ಗುರುಶಾಂತಮ್ಮ, ಮಲ್ಲಿಕಾರ್ಜುನ ಇತರರಿದ್ದರು.

ಪ್ರಜಾಪ್ರಭುತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಬಸವಾದಿ ಶರಣರ ವಿಚಾರಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿರುವ ಜವಾಬ್ದಾರಿಯನ್ನು ಅನೇಕರು ಮಾಡಿದ್ದಾರೆ. ಅಂಥವರ ಸಾಲಿನಲ್ಲಿ ಬಸವ ಸಮಿತಿಯ ಡಾ. ವಿಲಾಸವತಿ ಖೂಬಾ ಕೂಡ ಒಬ್ಬರು. ಅತ್ತಿಮಬ್ಬೆಯ ರೀತಿಯಲ್ಲಿ ಧರ್ಮ ಪ್ರಸಾರ ಮಾಡುತ್ತಿರುವ ಅವರ ಕಾರ್ಯ ಸ್ತುತ್ಯರ್ಹವಾಗಿದೆ. -ಡಾ. ಬಿ.ಶರಣಪ್ಪ ಸತ್ಯಂಪೇಟೆ, ಕುಲಸಚಿವರು, ಗು.ವಿ.ಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here