ಸುರಪುರ: ಇಲ್ಲಿಯ ನಗರಸಭೆಯ 2023-24 ನೇ ಸಾಲಿನ ರೂಪಾಯಿ 5,45,350 ಗಳ ಉಳಿತಾಯ ಬಜೆಟ್ ನ್ನು ನಗರಸಭೆ ಅಧ್ಯಕ್ಷೆ ಸುಜಾತ ವೇಣುಗೋಪಾಲ್ ಜೇವರ್ಗಿ ಅವರು ಮಂಡಿಸಿದರು.
ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ 2023-24 ನೇ ಸಾಲಿನ ಆಯ-ವ್ಯಯಾ (ಬಜೆಟ್) ಮುಂಗಡ ಪತ್ರ ಅಂದಾಜು ಮಂಡನಾ ಸಭೆಯ ನಗರಸಭೆ ಅಧ್ಯಕ್ಷೆ ಸುಜಾತ ವೇಣು ಗೋಪಾಲ್ ಜೇವರ್ಗಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಪೌರಾಯುಕ್ತ ಪ್ರೇಮಜೀ ಚಾರ್ಲ್ಸ್ ಅವರು ಸಿದ್ಧ ಪಡಿಸಲಾದ ವಾರ್ಷಿಕ ಆದಾಯ 314,938,800 ಹಾಗೂ 314,393,450 ಖರ್ಚುಗಳು ನಿರೀಕ್ಷೆಯೊಂದಿಗೆ 5,45,350 ರೂ.ಉಳಿತಾಯ ಬಜೆಟ್ ವಿವರಗಳನ್ನು ಲೆಕ್ಕಾಧಿಕಾರಿ ರವೀ ರಾಠೋಡ್ ಅವರು ಸವಿಸ್ತಾರವಾಗಿ ವಿವರಣೆ ನೀಡಿದರು.
ಸರ್ಕಾರ ಮೂಲದಿಂದ ಬರುವ ಆದಾಯ 15 ನೇ ಹಣಕಾಸು ಮುಕ್ತ ನಿಧಿ 5.75 ಕೋಟಿ.ರೂ.ಎಸ್.ಎಫ್ ಸಿ ಮುಕ್ತ ನಿಧಿ ಅನುದಾನ 3.2 ಕೋಟಿ ರೂ.ಎಸ್.ಎಫ್.ಸಿ ಇತರೆ ಅನುದಾನ 50 ಲಕ್ಷ ರೂ. ಎಸ್.ಎಫ್.ಸಿ ವೇತನ ಅನುದಾನ 5.1ಕೋಟಿ ರೂ, ಎಸ್.ಎಫ್.ಸಿ ವಿದ್ಯುತ್ ಅನುದಾನ 3,57 ಕೋಟಿ ರೂ,ನಲ್ಮ್ ಅನುದಾನ 20 ಲಕ್ಷ , ಲಕ್ಷ ,ಐ.ಹೆಚ್.ಹೆಚ್.ಎಲ್.ಅನುದಾನ 50 ಲಕ್ಷ, 24.10 ಅನುದಾನ 1.15ಕೋಟಿ ರೂ,7.25 ಅನುದಾನ 30 ಲಕ್ಷ ,5%ಅನುದಾನ 15 ಲಕ್ಷ ರೂ,ಪೌರ ಕಾರ್ಮಿಕ ಗೃಹ ಭಾಗ್ಯ ಅನುದಾನ 50 ಲಕ್ಷ ರೂಪಾಯಿ ಹಾಗೂ ನಗರಸಭೆ ಸ್ವಂತ ಆದಾಯದ ನಗರಸಭೆ ಕಟ್ಟಡಗಳು ಬಾಡಿಗೆ 30 ಲಕ್ಷ ರೂ,ಕಟ್ಟಡ ಪರವಾನಿಗೆ ಶುಲ್ಕ 17 ಲಕ್ಷ ರೂ ಅಭಿವೃದ್ಧಿ ಶುಲ್ಕ 32 ಲಕ್ಷ ರೂ, ವ್ಯಾಪಾರ ಪರವಾನಿಗೆ ಶುಲ್ಕ6.5 ಲಕ್ಷ ರೂ, ನೀರು ಸರಬರಾಜು ಬಳಕೆದಾರರ ಶುಲ್ಕ 1.75 ಕೋಟಿ ರೂ, ಸ್ಟಾಂಪ್ ಡ್ಯೂಟಿ ಚಾರ್ಜ್ ಸ್ 6.50 ಲಕ್ಷ ರೂ, ನಮೂನೆ-3 ಶುಲ್ಕ 8.5ಲಕ್ಷ ರೂ,ಆಸ್ತಿ ತೆರಿಗೆ ಆದಾಯ1,65 ಕೋಟಿ ರೂ.ವರ್ಗಾವಣಿ ಶುಲ್ಕ 40 ಲಕ್ಷ ರೂ.ನಿರೀಕ್ಷೆ ಹೊಂದಲಾಗಿದೆ ಎಂದರು.
ಕಾರಣಾಂತರಗಳಿಂದ ಕಳೆದ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಆಯ-ವ್ಯಯ ಮಂಡನೆ ಸಭೆಯು ಮೂರನೇ ಬಾರಿಗೆ ಯಾವುದೇ ಗದ್ದಲವಿಲ್ಲದೆ ಸುಶೂತ್ರವಾಗಿ ನೆರವೇರಿತು. ಉಪಾಧ್ಯಕ್ಷ ಮಹೇಶ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಶಾಂತಪ್ಪ ಹೊಸೂರು ಅವರು ವೇದಿಕೆಯಲ್ಲಿದ್ದರು.ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಿ,ಜೆಇ ಮಹೇಶ ಮಾಳಗಿ ಉಪಸ್ಥಿತರಿದ್ದರು.
ವಿರೋಧಿ ಪಕ್ಷದ ನಾಯಕ ರಾಜಾ ಪಿಡ್ಡನಾಯಕ (ತಾತಾ),ವೇಣು ಮಾಧವ ನಾಯಕ, ನರಸಿಂಹ ಕಾಂತ ಪಂಚಮಗಿರಿ, ಮಾನಪ್ಪ ಚಳ್ಳಿಗಿಡ,ಜುಮ್ಮಣ್ಣ ಕೆಂಗೂರಿ,ಅಯ್ಯಪ್ಪ, ಶಿವುಕುಮಾರ ಕಟ್ಟೀಮನಿ, ನಾಸೀರ್ ಕುಂಡಾಲೆ, ಮಹ್ಮದ್ ಗೌಸ್ ಕಿಣ್ಣಿ,ಖಮುರಲ್ ನಾರಾಯಣಪೇಠ, ಶರೀಫ್ ಮೆಹಬೂಬ್,ಮಲ್ಲೇಶಿ, ಹೊನ್ನಪ್ಪ ತಳವಾರ, ಚಂದ್ರಾಮಪ್ಪ, ಬಸವರಾಜ ಚಂದನಕೇರಿ, ಸುವರ್ಣ ಎಲಿಗಾರ,ಪಾರ್ವತಿ,ಸಿದ್ದಲಿಂಗಮ್ಮ ಗೌಡಸ್ಯಾನಿ, ಲಕ್ಷ್ಮೀ ಎಂ. ಬಿಲ್ಲವ, ಮುತ್ತಮ್ಮ ಅಯ್ಯಪ್ಪ ಅಕ್ಕಿ , ಲಲೀತಾ ಸತ್ಯಂಪೇಟೆ,ಪಾರ್ವತಿ ಹಾದಿಮನಿ,ಚನ್ನಮ್ಮ ಸೇರಿದಂತೆ ಇನ್ನಿತರ ಸದಸ್ಯರಿದ್ದರು
ನಗರದಲ್ಲಿನ ಪತ್ರಕರ್ತರಿಗಾಗಿ ನಗರಸಭೆಯಿಂದ ಕಲ್ಯಾಣ ನಿಧಿಯನ್ನು ಸ್ಥಾಪಿಸುವಂತೆ ಅನೇಕ ಬಾರಿ ಪತ್ರಕರ್ತರು ಮನವಿ ಮಾಡಿಕೊಂಡಿದ್ದರು.ಈ ಬಾರಿಯ ಬಜೆಟ್‍ನಲ್ಲಿ ಪತ್ರಕರ್ತರಿಗಾಗಿ ಐದು ಲಕ್ಷ ರೂಪಾಯಿಗಳ ಕಲ್ಯಾಣ ನಿಧಿಯನ್ನು ತೆಗೆದಿರಿಸುವ ಮೂಲಕ ಪತ್ರಕರ್ತರ ಬೇಡಿಕೆಗೆ ನಗರಸಭೆಯ ಅಧ್ಯಕ್ಷರಾದಿಯಾಗಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಸ್ಪಂಧಿಸಿದರು.