ಹಿಂದು ಗಾಣಿಗರ ಸಂಘದಿಂದ ಪ್ರತಿಭಟನೆ

0
47

ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜೈಪ್ರಕಾಶ್ ಹೆಗಡೆ ಅವರ ಪತ್ರಿಕಾ ವರದಿ ಅನ್ವಯ ಗಾಣಿಗ ಸಮಾಜವನ್ನು ಹಿಂದುಳಿದ 2(ಎ)ಪಟ್ಟಿಯಿಂದ ತೆಗೆದು 3(ಬಿ)ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಸಲ್ಲಿಸುವ ಶಿಫಾರಸು ವರದಿ ಕೈಬಿಟ್ಟು ಗಾಣಿಗ ಸಮಾಜವನ್ನು ಹಿಂದುಳಿದ ವರ್ಗ 2(ಎ)ನಲ್ಲಿ ಮುಂದುವರಿಸಬೇಕೆಂದು ಗುಲಬರ್ಗಾ ಡಿಸ್ಟ್ರಿಕ್ಟ್ ಹಿಂದು ಗಾಣಿಗರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೆರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಪತ್ರಿಕಾಗೋಷ್ಠಿ ಕರೆದು ಹಿಂದುಳಿದ ಗಾಣಿಗ ಸಮುದಾಯ ಸೇರಿ ಹಲವು ಹಿಂದುಳಿದ ಸಮುದಾಯಗಳನ್ನು ಪ್ರವರ್ಗ 2(ಎ) ನಿಂದ ಕೈಬಿಟ್ಟು 3(ಬಿ) ಪ್ರವರ್ಗಕ್ಕೆ ಸೇರಿಸಲು ಹುನ್ನಾರ ನಡೆಸಿದ್ದು ಪತ್ರಿಕೆಯಲ್ಲಿ ವರದಿಯಾಗಿದೆ.

Contact Your\'s Advertisement; 9902492681

ಕಾರಣ ಮಾನ್ಯ ಅಧ್ಯಕ್ಷರು ಗಾಣಿಗ ಸಮಾಜದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಯಾವುದೇ ಮಾನದಂಡಗಳನ್ನು ಪರಿಗಣಿಸದೆ ಏಕಾಏಕಿ ಹಿಂದುಳಿದ ನಮ್ಮ ಗಾಣಿಗ ಸಮಾಜವನ್ನು 2(ಎ) ಪಟ್ಟಿಯಿಂದ ಕೈ ಬಿಡಲು ಹೊರಟಿರುವುದು ಇಡಿ ಕರ್ನಾಟಕ ಗಾಣಿಗ ಸಮುದಾಯಕ್ಕೆ ಘೋರ ಅನ್ಯಾಯ ಆಗುತ್ತದೆ.

ಈ ನಿಮಿತ್ಯ ಕಲ್ಬುರ್ಗಿ ಜಿಲ್ಲಾ ಹಿಂದೂ ಗಾಣಿಗರ ಸಂಘವು ಸರ್ಕಾರವನ್ನು ಆಗ್ರಹಿಸುತ್ತಾ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅತಿ ಹಿಂದುಳಿದ ಗಾಣಿಗ ಸಮಾಜವನ್ನು ಪ್ರವರ್ಗ 2(ಎ) ಪಟ್ಟಿಯಿಂದ ಕೈಬಿಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಸಂಘದ ಅಧ್ಯಕ್ಷ ಶರಣಕುಮಾರ ಬಿಲ್ಲಡ, ಕಾರ್ಯದರ್ಶಿ ಈಶ್ವರ ಪಾಟೀಲ, ಮಹಾಂತೆಶ ಕೋಣ್ಣೂರ, ಎಸ್.ಬಿ.ಸಂಬಾ, ಬಸವರಾಜ ಪಾಟೀಲ, ಬಿ.ಎಂ.ಪಾಟೀಲ, ತುಕಾರಾಮ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here