ಮಾದಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ತಿಭಟನೆ

0
19

ಕಲಬುರಗಿ: ಮಾದಿಗ ಸಮುದಾಯದ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಡಾ.ಬಾಬು ಜಗಜೀವನರಾಮ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಖಾರಿಗಳ ಮುಖಾಂತರ ಸಿಎಂ ಬಸವರಾಜ ಬೋಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ಬೇಡಿಕೆಗಳಾದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾಸ್ಥಿತಿಯಾಗಿ ಯಾವುದೇ ರೀತಿ ವರದಿಯಲ್ಲಿ ಬದಲಾವಣೆ ಮಾಡಲಾರದೆ, ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿ ಮಾದಿಗ ಜನಾಂಗದವರಿಗೆ ನ್ಯಾಯ ಒದಗಿಸಬೇಕು, ಭಾರತ ದೇಶದ ಉಪ-ಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ದಲಿತ ನೇತಾರರಾದ ಡಾ. ಬಾಬು ಜಗಜೀವನರಾಂ ರವರ ಏಪ್ರಿಲ್ 5 ರಂದು ಜಯಂತಿ ಉತ್ಸವ ದಿನದಂದು ರಾಜ್ಯ ಸರಕಾರ ರಜೆ ಘೋಷಣೆ ಮಾಡಬೇಕು, ಡಾ. ಬಾಬು ಜಗಜೀವನರಾಂ ರವರ ಜೀವನ ಚರಿತ್ರೆ ರಾಜ್ಯ ಸರಕಾರ ಸರಕಾರದ ಪಠ್ಯ ಪುಸ್ತಕದಲ್ಲಿ ಜೀವನ ಚರಿತ್ರೆ ಅಳವಡಿಸಬೇಕು, ಕರ್ನಾಟಕ ಆದಿಜಾಂಬವ ನಿಗಮಕ್ಕೆ ಹೆಚ್ಚಿನ 500 ಕೋಟಿ ಅನುದಾನ ನಿಗದಿಪಡಿಸಬೇಕು. ರಾಜ್ಯದ ಎಲ್ಲಾ ಮತಕ್ಷೇತ್ರಗಳಲ್ಲಿ ಎಲ್ಲಾ ಯೋಜನೆಗಳಲ್ಲಿ “ಗುರಿ” ಹೆಚ್ಚಿಸಬೇಕು, ಡಾ. ಬಾಬು ಜಗಜೀವನರಾಂ ಧರ್ಮ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ (ಲಿಡ್ಕರ್) ಹೆಚ್ಚಿನ ಅನುದಾನ (500 ಕೋಟಿ) ನಿಗದಿಪಡಿಸಬೇಕು. ಎಲ್ಲಾ ಮತಕ್ಷೇತ್ರಗಳಲ್ಲಿ ಎಲ್ಲಾ ಯೋಜನೆಗಳಲ್ಲಿ “ಗುರಿ” ಹೆಚ್ಚಿಸಬೇಕು.

Contact Your\'s Advertisement; 9902492681

ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಮಾದಿಗ ಪರ ಸಂಘಟನೆಗಳು ಸದಾಶಿವ ಆಯೋಗದ ವರದಿ ಬಗ್ಗೆ ಹಾಗೂ ಮಾದಿಗ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಆದ ಸಂದರ್ಭದಲ್ಲಿ ಮಾದಿಗ ಪರ ಸಂಘಟನೆಗಳು ಹೋರಾಟ ಮಾಡಿರುತ್ತವೆ. ಹೋರಾಟ ಮಾಡಿದಕ್ಕೆ ರಾಜ್ಯ ಅಧ್ಯಕ್ಷರ ಮೇಲೆ ಹಾಗೂ ಜಿಲ್ಲಾ ಅಧ್ಯಕ್ಷರ ಮೇಲೆ ಮಾದಿಗ ಪರ ಸಂಘಟನೆಗಳ ಪದಾಧಿಕಾರಿಗಳ ಮೇಲೆ ಕೇಸ್ ದಾಖಲೆ ಮಾಡಿದನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕು.

ಈ ಎಲ್ಲಾ ವಿಷಯಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಮಾದಿಗ ಸಮುದಾಯದ ಎಲ್ಲಾ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಮಾದಿಗ ಜನಾಂಗದವರಿಗೆ ನ್ಯಾಯ ದೊರಕಿಸಿ ಕೊಡಬೇಕು. ನ್ಯಾಯ ದೊರಕಿಸಿ ಕೊಡದಿದ್ದರೆ 2023ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರೋಧ ರಾಜ್ಯಾದ್ಯಂತ ಮತದಾನ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅದಕ್ಕೆ ತಾವುಗಳು ಅವಕಾಶ ಮಾಡಿಕೊಡಲಾರದೆ ಕೂಡಲೇ ಮಾದಿಗ ಸಮುದಾಯದ ಎಲ್ಲಾ ಬೇಡಿಕೆಗಳು ಈಡೇರಿಸಬೇಕೆಂದು ಸಮಾಜದ ವತಿಯಿಂದ ಹಾಗೂ ಸಮಿತಿ ವತಿಯಿಂದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಜಿಲ್ಲಾ ಅಧ್ಯಕ್ಷ ರಾಜು ಎಸ್. ಕಟ್ಟಿಮನಿ, ರಾಜು ವಾಡೆಕಾರ, ಶರಣು ಎಸ್. ಸಗರಕರ್, ಮಲ್ಲಿಕಾರ್ಜುನ ಸರಡಗಿ, ಗುರುರಾಜ ಭಂಡಾರಿ, ಮಲ್ಲಪ್ಪ ಚಿಗಾನೂರ, ಅನಿಲ ಡೊಂಗರಗಾಂವ, ರವಿ ಸಿಂಗೆ, ಕಾಡಸಿದ್ದ, ಮಂಜುನಾಥ, ಸಿದ್ದಣ್ಣ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here