ಸುರಪುರ:ಜೆಸ್ಕಾಂ ನೂತನ ವಿಭಾಗೀಯ ಕಚೇರಿ ಉದ್ಘಾಟಿಸಿದ ಶಾಸಕ ರಾಜುಗೌಡ

0
12

ಸುರಪುರ: ತಾಲೂಕಿಗೆ ನೂತನವಾಗಿ ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.

ನಗರದ ರಂಗಂಪೇಟೆಯ ಜೆಸ್ಕಾಂ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹನಾಯಕ ಮಾತನಾಡಿ,ಸುರಪುರ ಮತ್ತು ಹುಣಸಗಿ ತಾಲೂಕುಗಳು ಬಹಳ ವರ್ಷಗಳಿಂದ ಇದ್ದ ವಿದ್ಯುತ್ ವೋಲ್ಟೇಜ್, ಟ್ರಾನ್ಸಫಾರ್ಮರ ಇನ್ನೀತರ ವಿದ್ಯುತ್ ಇಲಾಖೆಗೆ ಸಂಬಧಪಟ್ಟ ಸಮಸ್ಯೆಗಳ ನಿವಾರಣೆಗೆ ನೂತನವಾಗಿ ಪ್ರಾರಂಭಗೊಂಡ ಜೆಸ್ಕಾಂ ವಿಭಾಗೀಯ ಕಚೇರಿಯು ತುಂಬಾ ಅನುಕೂಲವಾಗಲಿದೆ, ಯಾದಗಿರಿಯ ಜೆಸ್ಕಾಂ ಕಚೇರಿಗೆ ಹುಣಸಗಿ ತಾಲೂಕಿನ ನಾರಾಯಣಪೂರ ದಿಂದ ಬರಲು ರೈತರಿಗೆ ಹಾಗೂ ಗ್ರಾಹಕರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದರು ಆದರೆ ಜೆಸ್ಕಾಂ ವಿಭಾಗೀಯ ಕಚೇರಿಯನ್ನು ಈ ಮೊದಲು ಶಹಾಪುರನಲ್ಲಿ ಆರಂಭಿಸಬೇಕು ಎಂದು ಕೆಲವರು ಅಭಿಪ್ರಾಯವಾಗಿತ್ತು.

Contact Your\'s Advertisement; 9902492681

ಆದರೆ ಶಹಾಪುರ ತಾಲೂಕು ಕೇಂದ್ರ ಯಾದಗಿರಿಗೆ ಹತ್ತಿರದಲ್ಲಿರುವದರಿಂದ ಅಷ್ಟೊಂದು ಅನುಕೂಲವಾಗುವದಿಲ್ಲ ಸುರಪುರಕ್ಕೆ ಅವಶ್ಯಕತೆ ಇದೆ ಎಂದು ನಾರಯಣಪೂರ ದಿಂದ ಯಾದಗಿರಿಗೆ 130-140ಕಿಮೀ ದೂರದಿಂದ ಬರಲು ರೈತರಿಗೆ ಹಾಗೂ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿ ದ ನಂತರ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಪ್ಪಿ ಅನುಮೋದನೆ ನೀಡಿದ್ದರು ಎಂದು ತಿಳಿಸಿದ ಅವರು ಬೋರ್ಡ ಮೀಟಿಂಗ್‍ಗಳಲ್ಲಿ ಪ್ರಸ್ತಾವನೆ ಇಡುವ ಮೂಲಕ ಕಳೆದ 16ತಿಂಗಳುಗಳಿಂದ ಕಚೇರಿಗೆ ಅಲೆದಾಡಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಸುರಪುರದಲ್ಲಿ ವಿಭಾಗೀಯ ಕಚೇರಿ ಮಂಜೂರುಗೊಳ್ಳಲು ಕಾರಣವಾಯಿತು ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಾಣಕ್ಕೆ 3ಎಕರೆ ಜಾಗ ಗುರುತಿಸಿ ನಿರ್ಮಿಸಲಾಗುವುದು ಎಂದರು, ಸುರಪುರ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಆರು 110ಕೆವಿ ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ಎರಡು 33ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಮಂಜೂರಿಗೊಳಿಸಿದ್ದು ಈಗಾಗಲೇ 110ಕೆವಿ ಸ್ಟೇಷನ್‍ಗಳು ಕೆಲವು ಕಾರ್ಯಾರಂಭ ಮಾಡಿದ್ದು ದೇವತ್ಕಲ್ ಹಾಗೂ ಮುದನೂರು ಸಬ್ ಸ್ಟೇಷನ್‍ಗಳ ನಿರ್ಮಾಣಕ್ಕಾಗಿ ಜಾಗ ದೊರಕಿಸಿಕೊಟ್ಟ ನಂತರ ಟೆಂಡರ್ ಕರೆಯಲಾಗುವುದು ತಾಲೂಕಿನಲ್ಲಿ 10ಕಿಮೀ ಅಂತರದಲ್ಲಿ ಸಬ್ ಸ್ಟೇಷನ್‍ಗಳನ್ನು ಸ್ಥಾಪನೆಗೊಳ್ಳಲಿದ್ದು ಮುಂಬರುವ ದಿನಗಳಲ್ಲಿ ಎರಡು ತಾಲೂಕುಗಳ ರೈತರಿಗೆ ಹಾಗೂ ಗ್ರಾಹಕರಿಗೆ ವಿದ್ಯುತ್ ವೋಲ್ಟೇಜ್ ಸಮಸ್ಯೆ ಉದ್ಭವಿಸುವದಿಲ್ಲ ಎಂದು ಹೇಳಿದರು.

ತಾಲೂಕಿನ ದೇವಾಪುರ ಗ್ರಾಮದ ನೂತನ 110ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಮಾ26 ರಂದು ಉದ್ಘಾಟಿಸಲಾಗುವುದು ಎಂದು ಶಾಸಕ ನರಸಿಂಹನಾಯಕ ತಿಳಿಸಿದರು.

ಯಾದಗಿರಿ ಜೆಸ್ಕಾಂ ವಿಭಾಗದ ಇ.ಇ ಡಿ. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ 2020ರಲ್ಲಿ ಸುರಪುರದಲ್ಲಿ ಜೆಸ್ಕಾಂ ವಿಭಾಗೀಯ ಕಚೇರಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಕಡಿಮೆ ಅವಧಿಯಲ್ಲಿ ಮಂಜೂರುಗೊಂಡು ವಿಭಾಗೀಯ ಕಚೇರಿ ಪ್ರಾರಂಭಗೊಂಡಿದ್ದು ಇದರಿಂದ ಜೆಸ್ಕಾಂ ಇಲಾಖೆಯ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದ ರೈತರಿಗೆ ಹಾಗೂ ಗ್ರಾಹಕರಿಗೆ ಟ್ರಾನ್ಸಫಾರ್ಮರ್, ವಿದ್ಯುತ್ ಕಂಬಗಳು ಸೇರಿದಂತೆ ಇನ್ನೀತರ ಸಮಸ್ಯೆಗಳ ನಿವಾರಣೆಗೊಂಡು ತುಂಬಾ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮುಖಂಡರುಗಳಾದ ರಾಜಾ ಹನುಮಪ್ಪ ನಾಯಕ ತಾತಾ, ಡಾ.ಸುರೇಶ ಸಜ್ಜನ್, ಪ್ರಕಾಶ ಸಜ್ಜನ್, ಕಿಶೋರಚಂದ ಜೈನ, ಎಚ್.ಸಿ.ಪಾಟೀಲ, ಬಿ.ಎಂ.ಅಳ್ಳಿಕೋಟಿ, ಯಲ್ಲಪ್ಪ ಕುರಕುಂದಿ, ರಾಜಾ ಮುಕುಂದ ನಾಯಕ, ಸೋಮನಾಥ ಡೊಣ್ಣಿಗೇರಿ, ಭೀಮಾಶಂಕರ ಬಿಲ್ಲವ್, ನರಸಿಂಹಕಾಂತ ಪಂಚಮಗಿರಿ, ಕಲಬುರಗಿ ವಿಭಾಗದ ಜೆಸ್ಕಾಂ ಮುಖ್ಯ ಇಂಜಿನಿಯರ್ ಆರ್.ಡಿ.ಚಂದ್ರಶೇಖರ, ಅಧೀಕ್ಷಕ ಅಭಿಯಂತರ ಸತೀಶಚಂದ್ರ, ನಾಗೇಶ ಹಿಪ್ಪರಗಿ, ಸುರಪುರ ಎಇಇ ಶ್ರೀನಿವಾಸ ಪ್ರಸಾದ, ಹುಣಸಗಿ ಎಇಇ ದೇವಿಂದ್ರಪ್ಪ, ಅಮರೇಶ, ಸುಜಿತಕುಮಾರ, ಶಂಕರ ಗುತ್ತಿ, ಯಮನಪ್ಪ, ವಿರೇಶ, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಹ್ಮದ ನವಾಬ, ಸುರಪುರ ತಾಲೂಕು ಅಧ್ಯಕ್ಷ ಪ್ರಶಾಂತ, ಅಯ್ಯಪ್ಪ ಅಕ್ಕಿ, ಗುರುರಾಜ ಕುಲಕರ್ಣಿ, ಇಮ್ತಿಯಾಜ್ ಇತರರಿದ್ದರು. ಉಮೇಶ ರಾಠೋಡ ಹಾಗೂ ಜಯಶ್ರೀ ಬೂದಿಹಾಳ ನಿರೂಪಿಸಿದರು ಕೆಂಭಾವಿ ಸೆಕ್ಷನ್ ಅಧಿಕಾರಿ ಶ್ರೀಶೈಲ ತಮದೊಡ್ಡಿ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here