ಸುರಪುರ: ದರಬಾರ ಶಾಲೆಯಲ್ಲಿ ನಿವೃತ್ತ ನೌಕರರ 16ನೇ ವಾರ್ಷಿಕ ಸಮಾವೇಶ

0
0

ಸುರಪುರ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ನಗರದ ಸರಕಾರಿ ಕನ್ಯಾ ಮಾದರಿಯ ಪ್ರಾಥಮಿಕ(ದರಬಾರ) ಶಾಲೆಯಲ್ಲಿ ರಾಜ್ಯ ಸರಕಾರಿ ನಿವೃತ್ತ ನೌಕರರ ತಾಲೂಕು ಮಟ್ಟದ 16ನೇ ಸಮಾವೇಶ ಹಾಗೂ ನಿವೃತ್ತ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು

ಸಮಾವೇಶ ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ, ನಿವೃತ್ತ ಸರಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ಸರಕಾರದ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡು ಅಭಿವೃದ್ಧಿಗೆ ಕಾರಣರಾಗಿದ್ದಾರೆ ನಿವೃತ್ತಿಯ ನಂತರವೂ ಅವರ ಸೇವೆ ಅಷ್ಟಕೆ ನಿಲ್ಲಬಾರದು ಸಮಾಜಕ್ಕೆ ಹಾಗೂ ಇಂದಿನ ಯುವ ಪೀಳಿಗೆಗೆ ನಿವೃತ್ತ ಹಿರಿಯರ ಮಾರ್ಗದರ್ಶನ ತುಂಬಾ ಅವಶ್ಯ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ನರಸಿಂಹನಾಯಕ ಹೇಳಿದರು.

Contact Your\'s Advertisement; 9902492681

ಮಕ್ಕಳಿಗೆ ಪ್ರೀತಿ ನೀಡಿ ಬೆಳೆಸಿರುತ್ತಾರೆ ಅಂತಹ ತಂದೆ-ತಾಯಿಂದಿರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ಮಕ್ಕಳು ನಮ್ಮ ಸುತ್ತಮುತ್ತ ಇದ್ದಾರೆ ಇದರಿಂದಾಗಿ ಇಂದು ದೊಡ್ಡ ದೊಡ್ಡ ನಗರಗಳಲ್ಲಿ ವೃದ್ಧಾಶ್ರಮ ಇರುವದನ್ನು ನೋಡುತ್ತೇವೆ ವೃದ್ಧಾಶ್ರಮಗಳು ಇರಲೇಬಾರದು ಎಂದು ಅಭಿಪ್ರಾಯಪಟ್ಟ ಅವರು ತಂದೆ-ತಾಯಿಂದಿರನ್ನು ಮಕ್ಕಳು ಪ್ರೀತಿಯಿಂದ ನೋಡಿಕೊಳ್ಳಬೇಕು ಹಾಗೂ ಯುವಕರು ಹಿರಿಯರಿಗೆ ಗೌರವ ನೀಡಬೇಕು ಹಾಗೂ ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸರಕಾರಿ ನೌಕರರು ತಮ್ಮ ಸೇವೆ ಸಂದರ್ಭದಲ್ಲಿ ಸಾಕಷ್ಟು ಒತ್ತಡ ಹಾಗೂ ತೊಂದರೆ ಅನುಭವಿಸುತ್ತಾರೆ ಇದು ಹೊರಗಿನವರಿಗೆ ನೋವು ತಿಳಿಯುವದಿಲ್ಲ ನೌಕರರ ಕುಟುಂಬಸ್ಥರಿಗೆ ನೋವು ಅರ್ಥವಾಗುತ್ತದೆ ನಾನು ಕೂಡಾ ಒಬ್ಬ ಸರಕಾರಿ ಅಧಿಕಾರಿಯ ಮಗ ಹೀಗಾಗಿ ನನಗೆ ಸರಕಾರಿ ಅಧಿಕಾರಿಗಳು ಅನುಭವಿಸುವ ನೋವು ಗೊತ್ತು ಎಂದು ಸ್ಮರಿಸಿಕೊಂಡ ಅವರು ಸರಕಾರಿ ನೌಕರರಿಗೆ ಎರಡು ಸಲ ಸಾವು ಬರುತ್ತದೆ ಒಮ್ಮೆ ತಮ್ಮ ಹುದ್ದೆಯಿಂದ ನಿವೃತ್ತಿಗೊಂಡ ನಂತರ ಮೊದಲಿದ್ದ ಗೌರವ ಕಡಿಮೆಯಾದಾಗ ಹಾಗೂ ಮತ್ತೊಮ್ಮೆ ಸಾವನ್ನಪ್ಪಿದಾಗ ಎಂದು ತಂದೆಯವರು ಹೇಳುತ್ತಿದ್ದರು ಎಂದು ನೆನಪಿಸಿಕೊಂಡ ಅವರು ನಿವೃತ್ತಿಗೊಂಡ ಹಿರಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸಮಾಜಕ್ಕೆ ಇನ್ನೂ ಅನೇಕ ವರ್ಷಗಳವರೆಗೆ ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.

1ಲಕ್ಷ ರೂ ದೇಣಿಗೆ : ದರಬಾರ ಶಾಲೆಯ ಆವರಣದಲ್ಲಿರುವ ನಿವೃತ್ತ ಸರಕಾರಿ ನೌಕರರ ಭವನವನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ತಂದೆಯವರ ಹೆಸರಿನಲ್ಲಿ 1ಲಕ್ಷ ರೂ ದೇಣಿಗೆ ನೀಡುವುದಾಗಿ ಶಾಸಕ ರಾಜುಗೌಡ ಘೋಷಿಸಿದರು ಅಲ್ಲದೆ ನಿಮ್ಮ ಆಶೀರ್ವಾದದಿಂದ ನಾಲ್ಕನೇ ಬಾರಿಗೆ ಶಾಸಕನಾಗಿ ಆರಿಸಿಬಂದರೆ ನಿವೃತ್ತ ನೌಕರರ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಿ ಕಟ್ಟಡ ನಿರ್ಮಿಸಿಕೊಡುವುದಾಗಿ ಅವರು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಶಿವಪ್ಪ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು, ನಿವೃತ್ತ ಎಸ್.ಪಿ. ಸಿ.ಎನ್.ಭಂಡಾರೆ, ಪ್ರಮುಖರಾದ ರಾಜಾ ಹನುಮಪ್ಪ ನಾಯಕ ತಾತಾ, ಉದ್ದಿಮೆದಾರ ಕಿಶೋರಚಂದ ಜೈನ, ಕೆವೈ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಪ್ರಾಧ್ಯಾಪಕ ಡಾ.ರಾಘವೇಂದ್ರ ಗುಡಗುಂಟಿ, ನಂದಕಸಂಘದ ಉಪಾಧ್ಯಕ್ಷ ರಾಜಾ ಅಮರಪ್ಪ ರಾಜ, ಗದ್ದೆಪ್ಪ ರೋಡಲಬಂಡಿ, ಬಸವಂತ್ರಾಯ ಪಾಟೀಲ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಹಿರಿಯ ಸದಸ್ಯರಾದ ಕಿಶನರಾವ ಕುಲಕರ್ಣಿ, ಶಾಮಸಿಂಗ್, ರಾಚಯ್ಯಸ್ವಾಮಿ ಸ್ಥಾವರಮಠ, ಅಬ್ದುಲ್ ಖಾಸಿಂ, ಚನ್ನಬಸಯ್ಯ ಹೂಗಾರ, ಗೋವಿಂದರಾವ ಕುಲಕರ್ಣಿ ಸೂಗುರು ಹಾಗೂ ಕಾಮಪ್ಪ ಕುದರಿ ಇವರನ್ನು ಸನ್ಮಾನಿಸಲಾಯಿತು, ಸಂಘದ ಪ್ರ.ಕಾರ್ಯದರ್ಶಿ ಹಣಮಂತ ಪೂಜಾರಿ ಸ್ವಾಗತಿಸಿದರು ಪ್ರಭುದೇವ ಕಲ್ಲೂರಮಠ ವರದಿ ವಾಚಿಸಿದರು ಸೋಮರೆಡ್ಡಿ ಮಂಗಿಹಾಳ ನಿರೂಪಿಸಿದರು ರಾಮಕೋಟೆಪ್ಪ ಯಳಮೇಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here