ಗಂಗಾವತಿವತಿಯಲ್ಲಿ ಜನರ ಸಹಾಯಕ್ಕೆ ವಿನೋತನ “ವಾಲ್‌ ಆಫ್‌ ಕೈಂಡ್‌ ನೆಸ್ “

0
111

ಮರಿಗೌಡ ಬಾದರದಿನ್ನಿ

ಗಂಗಾವತಿ: ಬಡವರು, ನಿರ್ಗತಿಕರ ನೆರವಿಗೆ ಮುಂದಾಗಿರುವ ಇಲ್ಲಿನ ಗೆಳೆಯರ ಬಳಗ‌, ‘ವಾಲ್‌ ಆಫ್‌ ಕೈಂಡ್‌ನೆಸ್‌’ ಮೂಲಕ ಸಹಾಯಹಸ್ತ ಚಾಚಿದೆ.

ನಗರದ ಕೋರ್ಟ‌ ಹತ್ತಿರ ‘ ವಾಲ್‌ ಆಫ್‌ ಕೈಂಡ್‌ ನೆಸ್ ’ ಹೆಸರಿನಲ್ಲಿ ಬಾಕ್ಸ್‌ ರೂಪದ ಸೆಲ್ಫ್‌ಗಳನ್ನು ನಿರ್ಮಿಸಿದೆ. ಅದರಲ್ಲಿ ಯಾರು ಬೇಕಾದರೂ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ದೈನಂದಿನ ಉಪಯೋಗದ ವಸ್ತುಗಳನ್ನು ಇಟ್ಟು ಹೋಗಬಹುದು.

Contact Your\'s Advertisement; 9902492681

ಈ ವಿನೂತನ ಕೆಲಸ ಆರಂಭಿಸಿದ್ದು, ಪ್ರಾರಂಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು ಹಳೆಯ ಬಟ್ಟೆ, ಪಾತ್ರೆ ಸಾಮಾನು ಸೇರಿದಂತೆ ಇತರೆ ವಸ್ತುಗಳನ್ನು ಬಳಸದೆ ಮನೆಯ ಒಂದು ಕೋಣೆಯಲ್ಲಿ ಹಾಗೆಯೇ ಇಟ್ಟಿರುತ್ತಾರೆ. ಅವುಗಳು ಅಲ್ಲೇ ಧೂಳು ತಿನ್ನುತ್ತ ಹಾಳಾಗುತ್ತಿರುತ್ತವೆ. ಮತ್ತೆ ಕೆಲವರು, ಬಹಳ ಕಡಿಮೆ ಬೆಲೆಗೆ ಗುಜರಿಗೆ ಹಾಕುತ್ತಾರೆ. ಹೀಗೆ ಮಾಡುವ ಬದಲು ಅವುಗಳನ್ನು ‘ವಾಲ್‌ ಆಫ್‌ ಕೈಂಡ್‌ನೆಸ್‌’ ಪೆಟ್ಟಿಗೆಯಲ್ಲಿ ಹಾಕಿ ಹೋದರೆ, ಬಡವರು, ನಿರ್ಗತಿಕರು ಹಾಗೂ ಅನಾಥಾಶ್ರಮದಲ್ಲಿ ಇರುವವರಿಗೆ ಅನುಕೂಲವಾಗುವುದಲ್ಲದೆ ಅವರಿಗೆ ನೆರವಿನ ಹಸ್ತ ಚಾಚಿದಂತಾಗುತ್ತದೆ. ಎಲ್ಲ ದಿನ ಯಾರು ಬೇಕಾದರೂ ಬಂದು ವಸ್ತುಗಳನ್ನು ಇಟ್ಟು ಹೋಗಬಹುದು. ಭಿಕ್ಷುಕರು ನಿರ್ಗತಿಕರು ಸೇರಿದಂತೆ ಯಾರುಬೇಕಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.

ಸ್ವಾತಂತ್ರ್ಯೋತ್ಸವ ದಿನ ಅಧಿಕೃತವಾಗಿ ಪೋಲಿಸ್ ಉಪವಿಭಾಗದ ಅಧೀಕ್ಷಕರು ಡಾ.ಚಂದ್ರಶೇಖರ ರವರು ಚಾಲನೆ ನೀಡಿದರು. ಶ್ರೀಶೈಲ ಪಟ್ಟಣಶೆಟ್ಟಿ, ಡಾ.ಶಿವಕುಮಾರ ಮಾಲಿಪಾಟೀಲ್,ಬಸವರಾಜ ಕೆ ಅಧ್ಯಕ್ಷರು ಬಸವಕೇಂದ್ರ, ಗ್ರಂಥಪಾಲಕ ರಮೇಶ ಗಬ್ಬೂರು, ಶಿಕ್ಷಕ ಮೈಲಾರಪ್ಪ ಬೂದಿಹಾಳ, ಮಂಜುನಾಥ ಗುಡ್ಲಾನೂರ , ಎಸ್ ಬಿ ಗೊಂಡಬಾಳ ತಾಲೂಕ ಕಸಾಪ ಅಧ್ಯಕ್ಷರು , ದಶರಥ ವರದಿಗಾರ, ಹಾಗೂ ವಾಲ್‌ ಆಫ್‌ ಕೈಂಡ್‌ ನೆಸ್ ಗೆಳೆಯರು ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here