ಯಾದಗಿರಿ: ದೇಶಕ್ಕಾಗಿ ತಮ್ಮ ಪ್ರಾಣವನ್ನೆ ತ್ಯಾಗ ಮಾಡಿದ ಸ್ವಾತಂತ್ರ ಹೋರಾಟಗಾರರನ್ನು ಪ್ರತಿನಿತ್ಯ ಸ್ಮರಿಸಬೇಕು ಎಂದು ಬಾಲಾಜಿ ಶಿಕ್ಷಣ ಸಂಸ್ಥೆಯ ಅದ್ಯಕ್ಷೆ ಹಾಗೂ ಮಾಜಿ ಸಿಂಡಿಕೇಟ್ ಸದಸ್ಯೆ ಡಾ. ಜಯಶ್ರೀ ರಘುನಾಥರಡ್ಡಿ ಪಾಟೀಲ್ ಹೇಳಿದರು.
ನಗರದ ಬಾಲಾಜಿ ಪದವಿ ಮಹಾವಿದ್ಯಾಲಯಲಯದಲ್ಲಿ ೭೩ನೇಯ ಸ್ವಾತಂತ್ರತೋತ್ಸವದ ದ್ವಜಾರೋಹಣ ಮಾಡಿ ಅವರು ಮಾತನಾಡಿದರು. ಇಂದಿನ ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಭವ್ಯವಾದಾದ ಭಾರತದ ಸಂಸ್ಕೃತಿ ಹಾಗೂ ಪರಂಪರೆಯನ್ನು ಮರೆಯುತ್ತಿರುವದು ವಿಷಾದನಿಯ.ಅದಕ್ಕಾಗಿ ಶಿಕ್ಷಕರು ಹಾಗು ಉಪನ್ಯಾಸಕರು ವರ್ಗಕೋಣೆಯಲ್ಲಿ ಆಗಾಗ ದೇಶದ ಸಂಸ್ಕೃತಿ ಹಾಗೂ ಸ್ವಾತಂತ್ರ ಹೋರಾಟಗಾರರ ಬಗ್ಗೆ ಚರ್ಚಾಸ್ಪರ್ದೆ, ಭಾಷಣ ಸ್ಪರ್ದೆ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಂತ್ರತೋತ್ಸವದ ಅಂಗವಾಗಿ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಗರದ ಬಾಲಾಜಿ ಪದವಿ ಮಹಾವಿದ್ಯಾಲಯಲಯದಲ್ಲಿ ೭೩ನೇಯ ಸ್ವಾತಂತ್ರತೋತ್ಸವದ ಅಂಗವಾಗಿ ಆಯೊಜಿಸಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಾಲಾಜಿ ಶಿಕ್ಷಣ ಸಂಸ್ಥೆಯ ಅದ್ಯಕ್ಷೆ ಹಾಗೂ ಮಾಜಿ ಸಿಂಡಿಕೇಟ್ ಸದಸ್ಯೆ ಡಾ. ಜಯಶ್ರೀ ರಘುನಾಥರಡ್ಡಿ ಪಾಟೀಲ್ ಬಹುಮಾನಗಳನ್ನು ವತಿರಿಸಿದರು.
ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿಯಾದ ರಘುನಾಥರಡ್ಡಿ ಪಾಟೀಲ್, ಪ್ರಾಂಶುಪಾಲರಾದ ಭೀಮರಾಯ ಮಾನೇಗಾರ, ಪ್ರಾದ್ಯಾಪಕರಾದ ಬೀಮರಾಯ ಬೋಯಿನ್, ಶಿವರಾಜ, ರಾಮಕೃಷ್ಣ, ವಿಧ್ಯಾರ್ಥಿಗಳಾದ ಅಂಬ್ರೇಷ, ಶರಣಪ್ಪ, ರಘು, ಸೀಮಾ, ಸಂಗೀತಾ, ರವಿಚಂದ್ರ, ಭೀಮರಥ, ಭೀಮಾಬಾಯಿ, ಅಂಜನಾ, ಮಹಾದೇವಿ, ರುಬಿನಾಬೇಗಂ, ರೇಖಾ, ಹೊನ್ನಪ್ಪ, ಪ್ರಶಾಂತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.