ಕಲಬುರಗಿ: ಇಲ್ಲಿನ ಆಳಂದ ಹಜರತ್ ಲಾಡ್ಲೆ ಮಶಾಕ್ ದರ್ಗಾಕ್ಕೆ ಕಂದೂರಿ ನೆರವೇರಿಸಿ ಮನೆ ಹಿಂತಿರುವಾಗ ಜಿಟಗಾ ಹತ್ತಿರ 14 ಜನ ಅಸ್ವಸ್ಥರಾಗಿ ಆಸ್ಪತ್ರೆ ದಾಖಲಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಇಂದು ಬೆಳಿಗ್ಗೆ ಎಲ್ಲರೂ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿದಾರೆ.
ಚಡಚನ್ ತಾಲ್ಲೂಕಿನ ಲೋಣಿಯ ನಿವಾಸಿಗಳು ಎಂದು ತಿಳಿದುಬಂದಿದ್ದು, ನಿನ್ನೆ ಆಳಂದ ಪಟ್ಟಣದ ಪ್ರಸಿದ್ಧ ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ್ ದರ್ಗಾಕ್ಕೆ ಕಂದೂರಿ ನೈವೇದ್ಯ ನೀಡಲು ಬಂದಿದ್ದರು. ಮನೆಗೆ ವಾಸಪ್ ತೆರಳುವಾಗ ಜಿಟಗಾ ಹತ್ತಿರ 14 ಜನರಿಗೆ ವಾಂತಿಗಳು ಆರಂಭವಾಗಿ ಆಯಾತಪ್ಪುವ ಸ್ಥಿತಿಗೆ ತಲುಪುವ ಸನ್ನಿವೇಶ ನಿರ್ಮಾಣವಾಗಿತ್ತು.
ಜಿಟಗಾದಲ್ಲಿ ಚಿಕಿತ್ಸೆ ಸಿಗದೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ವಿಳಂಬ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಅಸ್ವಸ್ಥಗೊಂಡವರು ಚೆತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.