ರಸ್ತೆ ಅಪಘಾತ; ಕೋಚಿಂಗ್‌ ಕ್ಲಾಸ್‌ ಶಿಕ್ಷಕ ಸಾವು

0
28

ಕಲಬುರಗಿ: ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದ ಶಿಕ್ಷಕ ಓರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಫರಹತಾಬಾದ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅತನೂರ ಗ್ರಾಮದ ನಿವಾಸಿ ಸಾತಪ್ಪ ಜಮಾದಾರ (36) ಮೃತ ಬೈಕ್ ಸವಾರ. ಗ್ರಾಮದಲ್ಲಿ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದರು. ಕೆಲಸಕ್ಕಾಗಿ ಕಲಬುರಗಿಗೆ ಬೈಕ್‌ ಮೇಲೆ ತೆರಳು ತ್ತಿದ್ದರು. ಹಡಗಿಲ ಹಾರುತಿ ಬಳಿ ಹಿಂದಿನಿಂದ ಬಂದ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿ ದ್ದಾರೆ.

Contact Your\'s Advertisement; 9902492681

ಮೃತ ಶಿಕ್ಷಕನಿಗೆ ಪತ್ನಿ, ಪುತ್ರ ಇದ್ದಾರೆ. ಈ ಕುರಿತು ಫರಹತಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here