ಸುರಪುರ: ತಾಲ್ಲೂಕಿನ ಕವಡಿಮಟ್ಟಿ ಗ್ರಾಮದಲ್ಲಿರುವ ಅಕ್ಷರ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ೭೩ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಉಂಟಾದ ಪ್ರವಾಹ ಪೀಡಿತರ ರಕ್ಷಣಾ ಕಾರ್ಯವನ್ನು ನಿಭಾಯಿಸಿದ ಕೇಂದ್ರ ರಕ್ಷಣಾ ಪಡೆಯ ಯೋಧರು ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯೋಧರಾದ ಸೈನಿಕ ವಸಂತ ಅವರು ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಭವಿಷ್ಯದ ನಿರ್ಮಾತೃಗಳಾಗಿದ್ದು ಈಗಿನಿಂದಲೇ ಮಕ್ಕಳು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು, ದೇಶಕ್ಕಾಗಿ ಹೋರಾಡಿದ ಮಹಾನ್ ನಾಯಕರು ಹಾಗೂ ಹೋರಾಟಗಾರರು ನಿಮಗೆ ಆದರ್ಶಪ್ರಾಯವಾಗಬೇಕು ಎಂದು ಹೇಳಿದರು, ದೇಶದ ರಕ್ಷಣೆಯಲ್ಲಿ ಹಾಗೂ ದೇಶದಲ್ಲಿ ಉಂಟಾಗುವ ಯಾವುದೇ ವಿಪತ್ತುಗಳಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಹೋರಾಡುತ್ತಾರೆ ಆ ಮೂಲಕ ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿರುತ್ತಾರೆ ಮುಂದೆ ಮಕ್ಕಳು ಕೂಡಾ ದೇಶ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಎಲ್ಲಾ ಯೋಧರನ್ನು ಸನ್ಮಾನಿಸಲಾಯಿತು ಹಾಗೂ ಸಹೋದರ-ಸಹೋದರಿಯರ ಸಂಬಂಧವನ್ನು ಬಿಂಬಿಸುವ ರಕ್ಷಾ ಬಂಧನ ಹಬ್ಬದ ನಿಮಿತ್ತ ಯೋಧರಿಗೆ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬವನ್ನು ಕೂಡಾ ಆಚರಿಸಲಾಯಿತು, ಸಂಸ್ಥೆಯ ಆಡಳಿತ ಮಂಡಳಿಯವರಾದ ನರೇನ್ ಚೌದ್ರಿ, ಮಹೇಶ ಯಾದವ್, ಚರಣಕುಮಾರ ಚೌದ್ರಿ, ಜಗದೀಶರೆಡ್ಡಿ ಕವಡಿಮಟ್ಟಿ ಹಾಗೂ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.