ಬುಡಕಟ್ಟು ಕಲಾವಿಧರ ಮುಖ್ಯವಾಹಿನಿಗೆ ಬನ್ನಿ: ಗದ್ದುಗೆ

0
48

ಸುರಪುರ: ಗ್ರಾಮಗಳಿಂದ ಗ್ರಾಮಗಳಿಗೆ ಒಲಸೆ ಹೊಗುತ್ತಾ ನಿರ್ಜನ ಪ್ರದೇಶದಲ್ಲಿ ವಾಸಮಾಡುತ್ತಾ ಕಲೆಯನ್ನೆ ನಂಬಿ ಬದುಕು ಸಾಗಿಸುತ್ತಿರುವ ಬುಡಕಟ್ಟು ಕಲಾವಿಧರು ಮುಖ್ಯವಾಹಿನಿಗೆ ಬರುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ ಯಾದಗಿರಿ, ಜಾನಪದ ಕಲಾಲೋಕ ರಂಗಂಪೇಟ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಬುಡಕಟ್ಟು ದಿನಾಚಾರಣೆ ಹಾಗೂ ಬುಡಕಟ್ಟು ಕಲಾವಿಧರ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವ ಸಂಸ್ಥೆಯು ಅಗಸ್ಟ – ೯ ರಂದು ಬುಡಕಟ್ಟು ದಿನಾಚರಣೆಯನ್ನು ಘೋಷಿಸಿದ್ದು ವಿಶ್ವದೆಲ್ಲೆಡೆ ಅಲೇಮಾರಿ,ಆದಿವಾಸಿ ಮತ್ತು ಬುಡಕಟ್ಟು ಎಂದು ಈ ದಿನಾಚರಣೆಯನ್ನು ಆಚರಿಸುತ್ತಿದ್ದು ಈ ಭಾಗದಲ್ಲಿ ಮುಖ್ಯವಾಗಿ ಹಗಲುವೇಶ ಕಲಾವಿಧರು ಅತ್ಯಂತ ಹೆಚ್ಚು ಕಲೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ, ಸರಕಾರ ಮತ್ತು ಸಂಭಂಧಪಟ್ಟ ಇಲಾಖೆ ಈ ಕಲಾವಿಧರನ್ನು ಗುರಿತಿಸಬೇಕು ಎಂದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಅಲೆಮಾರಿ ಹಾಗೂ ಬುಡಕಟು ಕಲಾವಿಧರು ತಮ್ಮ ಕಲೆಯನ್ನೆ ವೃತ್ತಿಯನ್ನಾಗಿಸಿಕೊಂಡು ಹಲವು ತಲಮಾರುಗಳಿಂದ ಕಲೆಯನ್ನು ಬೆಳೆಸುತ್ತಿದ್ದು ಪಿಳಿಗೆಯಿಂದ ಪಿಳಿಗೆಗೆ ಕಲೆಯನ್ನು ಬೇಳೆಸಿದ್ದಾರೆ, ಇಂದು ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವುದರ ಜೋತೆಗೆ ತಮ್ಮ ಮಕಳಿಗೂ ಕೂಡ ಈ ಕಲೆಯನ್ನು ಧಾರೆ ಎರೆಯಬೇಕು ಎಂದು ಹೇಳಿದರು. ಕರ್ನಾಟಕ ಜಾನಪದ ಅಕಾಡೆಮಿಯ ಮೂಲಕ ಈ ಭಾಗದ ಕಲಾವಿಧರಿಗೆ ಹೆಚ್ಚು ಅವಕಾಶ ನೀಡಿದ್ದೆನೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿಯ ಸದಸ್ಯರಾದ ಭಿಮರಾಯ ಮಂಗಳೂರು ಮಾತನಾಡಿ ಕಲಾವಿಧರು ನಿರಂತರವಾಗಿ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿದ್ದು ಸರಕಾರ ಕಲಾವಿಧರಿಗೆ ಆರ್ಥಿಕ ಭದ್ರತ್ತೆ ಒದಗಿಸುವುದರ ಜೋತೆಗೆ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ನವನಿರ್ಮಾಣ ವೇದಿಕೆಯ ಅಧ್ಯಕ್ಷ ಶಿವರಾಜ ಕಲಿಕೇರಿ, ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಶಾಂತು ನಾಯಕ ಮಾತನಾಡಿದರು, ಲಕ್ಷ್ಮೀಪೂರ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಪೂಜ್ಯಶ್ರೀ ಬಸವಲಿಂಗಯ್ಯ ಸ್ವಾಮಿಗಳು ಸಾನಿಧ್ಯವಹಿಸಿ ಆಶಿರ್ವಚನ ನಿಡಿದರು. ಇದೆ ಸಂದರ್ಭದಲ್ಲಿ ಬುಡಕಟ್ಟು ಕಲಾವಿಧರಾದ ಚಂದಪ್ಪ ಶೆಳ್ಳಿಗಿ, ರಮೇಶ ಶಾಖಾಪುರ, ಬಸವರಾಜ ಆಲ್ದಾಳ, ಶರಣಪ್ಪ ಒಂಟೆತ್ತು, ಶಿವಪ್ಪ ಶಾಖಾಪೂರ, ಸಣ್ಣಮರೆಪ್ಪ ಕೊಮಾರಿ ಇವರುಗಳನ್ನು ಸನ್ಮಾನಿಸಲಾಯಿತು. ಬೀರೆಶ ಕುಮಾರ ದೇವತ್ಕಲ್ ನಿರೂಪಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಬಲಭೀಮಪಾಟಿಲ್ ಸ್ವಾಗತಿಸಿದರು, ರುದ್ರಪ್ಪ ಕೆಂಭಾವಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here