ಆಳಂದ : ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಿ ಇಲ್ಲದಿದ್ದರೆ ಅದಕ್ಕೆ ಅಧಿಕಾರಿಗಳೆ ಹೊಣೆಗಾರರು ಎಂದು ಶಾಸಕ ಬಿ.ಆರ್.ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಖಡಕ್ ಸೂಚಿಸಿದ್ದರು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮೊದಲ (ಕೆಡಿಸಿ) ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಶಾಲೆಗಳು ಆರಂಭವಾಗಿದ್ದು,ನೀರು ಒದಗಿಸಿ ಎಂದು ಶಿಕ್ಷಣ ಇಲಾಖೆಗೆ ಸೂಚಿಸಿದರು.
ವಿವಿಧ ಇಲಾಖೆ ಮಾಹಿತಿ ಪಡೆದುಕೊಂಡ ಶಾಸಕ,ಪಟ್ಟಣದಲ್ಲಿ ಎರಡು ದಿನಕ್ಕೆ ನೀರೂ ಬೀಡಿ ಎಂದು ಪುರಸಭೆ ಮುಖ್ಯಾಧಿಕಾರಿಕಾರಿಗೆ ಹೇಳಿದರು.ಅದಕ್ಕೆ ಮೂರು ದಿನಕ್ಕೆ ಬೀಡುಗಡೆ ಮಾಡಲು ಸಾಧ್ಯವಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.ಕೃಷಿ ಇಲಾಖೆ ಸಂಬಂಧಿಸಿದಂತೆ ಅಧಿಕಾರಿಯಿಂದ ಮಾಹಿತಿ ಪಡೆದು,ಸಹಾಯಕ ನಿರ್ದೇಶನರಿಗೆ ಸರ್ಕಾರಿ ಭಾಷೆ ಬೇಡ್,ವಾಸ್ತವ ಸ್ಥಿತಿ ಅವಲೋಕಿಸಿ ಎಂದರು.
ತಾಲ್ಲೂಕಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾದರೆ ಮಾಡಿ,ಇಲ್ಲದಿದ್ದರೆ ಜಾಗ ಖಾಲಿ ಮಾಡಿ ಎಂದು ಗುಡುಗಿದರು.
ಸಭೆಯಲ್ಲಿ ಅಧಿಕಾರಿಗಳು ಇಂಗ್ಲಿಷ್ ನಲ್ಲಿ ಇಲಾಖಾ ವರದಿ ತಂದಿದ್ದರು,ಅದಕ್ಕೆ ವಿರೋಧಿಸಿದ ಶಾಸಕ,ಆಡಳಿತ ಭಾಷೆ ಕನ್ನಡ,ಇಂಗ್ಲಿಷ್ ಯಾಕೆ.? ತರುತ್ತಿರಿ ಎಂದು.ಅಧಿಕಾರಿಗಳ ವಿರುದ್ಧ ಗರಂ ಆದರು. ಮುಂದಿನ ಸಭೆಯಲ್ಲಿ ಕನ್ನಡದಲ್ಲಿ ಇರಬೇಕು ಎಂದು ಸೂಚಿಸಿದರು.ಇದೇವೆಳೆಯಲ್ಲಿ ಜೇಸ್ಕಾಂ ಇಲಾಖೆ ಮಾಹಿತಿ ಪಡೆಯುವ ಸಂದರ್ಭದಲ್ಲಿ ವಿದ್ಯುತ್ ಕೈ ಕೊಟ್ಟು ಪ್ರಸಂಗ ನಡೆಯಿತು.ಮಾಹಿತಿ ಪಡೆದುಕೊಂಡ ನಂತರವೇ ವಿದ್ಯುತ್ ಬಂತು.
ಸಭೆಯಲ್ಲಿ ತಹಶಿಲ್ದಾರ ಪ್ರದೀಪಕುಮಾರ ಹಿರೇಮಠ, ವಿಲಾಸರಾಜ ಪ್ರಸನ್ನ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.