ಕಲಬುರಗಿಯಲ್ಲಿ 11 ಟನ್‌ ನಿಷೇಧಿತ ಪ್ಲಾಸ್ಟಿಕ್ ವಶ

0
18

ಕಲಬುರಗಿ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳ ತಂಡ ಶುಕ್ರವಾರ ಕಲಬುರಗಿ ಹೊರವಲಯದ ಕಪನೂರ ಕೈಗಾರಿಕಾ ಪ್ರದೇಶದಲ್ಲಿ ಎರಡು ಪ್ಲಾಸ್ಟಿಕ್ ತಯಾರಿಕೆ ಘಟಕಗಳ ಮೇಲೆ ದಾಳಿ ಮಾಡಿ 11 ಟನ್ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.

ಕಪನೂರ ಪ್ರದೇಶದ 2ನೇ ಹಂತದಲ್ಲಿನ ಮೊಹಮ್ಮದ್ ಗೌಸ್ ತಂದೆ ಮೊಹಮ್ಮದ್ ವಲಿಯುದ್ದಿನ್ ಇವರ ಘಟಕದಿಂದ 6 ಟನ್ ಮತ್ತು ರಘುನಾಥ ಮೆಹ್ತಾ ಮತ್ತು ಇಪ್ತೆಖಾರ ತಂದೆ ಯೂಸುಫ್ ಅಲಿ ಪ್ಲಾಟ್ ನಂ.210 ಇವರ ಘಟಕದಿಂದ 5 ಟನ್ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಪ್ಲಾಸ್ಟಿಕ್ ಗಳನ್ನು ಚಿತ್ತಾಪೂರ ತಾಲೂಕಿನ ಮೊಗಲಾ ಗ್ರಾಮದ ಮೆ.ಓರಿಯಂಟಲ್ ಸಿಮೆಂಟ್ ಲಿ. ಕಂಪನಿಗೆ ಕೋ-ಪ್ರೊಸೆಸಿಂಗ್ ಗೆ ಕಳುಹಿಸಲಾಗಿದೆ.

Contact Your\'s Advertisement; 9902492681

*ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮ:*

ಪರಿಸರ ಸಂರಕ್ಷಣೆ‌ ಕಾಯ್ದೆ ಉಲ್ಲಂಘಿಸಿ ಪ್ಲಾಸ್ಟಿಕ್ ತಯಾರಿಕೆಯಲ್ಲಿ ತೊಡಗಿದ್ದ ಈ ಎರಡು ಘಟಕಗಳ ಮೇಲೆ ಪರಿಸರ‌ ಸಂರಕ್ಷಣಾ ಕಾಯ್ದೆ-1986ರಡಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗಿದೆ ಎಂದು ಪ್ರಾಂತಿಯ ಕಚೇರಿಯ ಪರಿಸರ ಅಧಿಕಾರಿ ಸಿ.ಎನ್.ಮಂಜಪ್ಪ ತಿಳಿಸಿದ್ದಾರೆ.

ದಾಳೆ ವೇಳೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಆದಮ್ ಸಾಬ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here