ಕಲಬುರಗಿ; ಜೆಸ್ಕಾಂ ಕಂಪನಿಯ ಹಣವನ್ನು ದುರುಪಯೋಗ ಪಡಿಸಿಕೊಂಡು ದೀರ್ಘಾವಧಿಯಿಂದ ಅನಧೀಕೃತವಾಗಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಕಾಳಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಿರಿಯ ಸಹಾಯಕ ರವೀಂದ್ರ ತಂದೆ ಶರಣಪ್ಪ ಇವರನ್ನು ನಿಗಮದ ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿದೆ ಎಂದು ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಇಂಜಿನಿಯರರು (ವಿ) ಅವರು ತಿಳಿಸಿದ್ದಾರೆ.
ಸದರಿ ನೌಕರರನ್ನು ಅ.ಜ್ಞಾ.ಪ. ಸಂ. 19617-21 ದಿನಾಂಕ: 02.03.2010 ರನ್ವಯ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-2ರ ಕಾರ್ಯನಿರ್ವಾಹಕ ಅಭಿಯಂತರರು ಈ ಹಿಂದೆ ಸೇವೆಯಿಂದ ಅಮಾನತ್ತು ಮಾಡಿರುತ್ತಾರೆ. ಸದರಿ ನೌಕರರು ದಿನಾಂಕ: 02.03.2010 ರಿಂದ 17.03.2023 ರವರೆಗೆ ಕರ್ತವ್ಯಕ್ಕೆ ಅನಧೀಕೃತವಾಗಿ ಗೈರು ಹಾಜರಾಗಿರುತ್ತಾರೆ.
ಸದರಿ ನೌಕರರು ಹಲವು ಬಾರಿ ಸರಕಾರಿ/ ಅರೆ-ಸರಕಾರಿ ಮರುಕರೆ ಪತ್ರದ ಮೂಲಕ ಹಾಗೂ ದಿನಪತ್ರಿಕೆಗಳಲ್ಲಿಯು ಕೂಡಾ ಸದರಿ ವಿಷಯವನ್ನು ಪ್ರಕಟಿಸಿ, ಸದರಿ ಕಚೇರಿಗೆ ಖುದ್ದಾಗಿ ಬಂದು ಲಿಖಿತ ರೂಪದಲ್ಲಿ ಹೇಳಿಕೆಯನ್ನು ಸಲ್ಲಿಸಲು ಸೂಚಿಸಿದ್ದರೂ ಸಹ ಕರ್ತವ್ಯಕ್ಕೆ ಹಾಜರಾಗದೇ ಹಾಗೂ ಯಾವುದೇ ಸೂಕ್ತ ಸಮಜಾಯಿಸಿ ಹೇಳಿಕೆ ಸಲ್ಲಿಸಿರುವುದಿಲ್ಲ.
ಆದ್ದರಿಂದ ಕವಿಪ್ರನಿನಿಯ ನಿಗಮದ ಬಿ.ಇ.ಎಸ್.ಆರ್.ಅಧ್ಯಾಯ-8, ಸೆಕ್ಷನ್-ಸಿ, ಸಬ್-ಸೆಕ್ಷನ್-ಓ ನಿಯಮ-147ರ ಅನ್ವಯ, ಉಲ್ಲೇಖಿತ ಕಚೇರಿಯ ಸಂಖ್ಯೆ: ಅಇಂ(ವಿ)/ಗು/ಉಲೆನಿ/ಲೆಅ/ಸಲೆಅ/ಹಿಸ-2/2022-23/8566-72 ದಿನಾಂಕ:-17.03.2023ರ ಆದೇಶದನ್ವಯ ಕಾಳಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಕಿರಿಯ ಸಹಾಯಕ ರವೀಂದ್ರ ತಂದೆ ಶರಣಪ್ಪ ಇವರನ್ನು ಕವಿಪ್ರನಿನಿ/ ಗುವಿಸಕಂನಿಯ ನಿಗಮದ ಸೇವೆಯಿಂದ ವಜಾಗೊಳಿಸಿ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.