ಕಲಬುರಗಿ: ರೋಟರಿ ಕ್ಲಬ್ ಗುಲ್ಬರ್ಗ ಉತ್ತರ ವಲಯದ ವ ವತಿಯಿಂದ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ವೈದ್ಯರ ದಿನಾಚರಣೆ ಮತ್ತು ಚಾರ್ಟೆಡ್ ಅಕೌಂಟೆಂಟ್ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಕ್ಯಾಂಟೀನ್ಗೆ ಒಂದು ತಿಂಗಳ ಆಹಾರ ಧಾನ್ಯಗಳನ್ನು ಕೊಡಲಾಯಿತು. ಅದೇ ರೀತಿ 25 ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಆಸ್ಪತ್ರೆಯ ಪ್ರಭಾರಿಯ ಅಧಿಕಾರಿಗಳಾದ ಡಾ. ಗುರುರಾಜ್ ದೇಶಪಾಂಡೆ ಮತ್ತು ಡಾ. ವಸಂತ ಹರಸುರ ಈ ಆಸ್ಪತ್ರೆಯ ಇತಿಹಾಸ ಮತ್ತು ಸಾಧನೆಗಳನ್ನು ತಿಳಿಸಿದರು ರೋಟರಿ ಕ್ಲಬ್ ಗವರ್ನರ್ ಆದ ಮಾಣಿಕ್ ಪವಾರ್ ಅವರು ಮುಂದೆಯೂ ಇದೇ ರೀತಿ ಈ ಆಸ್ಪತ್ರೆಗೆ ನಮ್ಮ ರೋಟರಿ ಕ್ಲಬ್ಬಿನಿಂದ ಸಹಾಯವನ್ನು ಮಾಡಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ಖ್ಯಾತ ಚಾರ್ಟೆಡ್ ಅಕೌಂಟೆಂಟ್ಗಳಾದ ಆನಂದ್ ಪಲ್ಲೋದ್ ಅಮಿತ್ ಲೋ ಯಾರನ್ನು ಸನ್ಮಾನಿಸಲಾಯಿತು. ಅದೇ ರೀತಿ ವೈದ್ಯರಾದ ಡಾ. ಸಿದ್ದೇಶ್ ಡಾ. ಅಮರಪ್ಪ ಜಂಪಾ ಡಾ. ಗುರುರಾಜೇಶ್ ಪಾಂಡೆ ಡಾ. ವಸಂತ್ ಹರ್ಸೂರ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಕಾರ್ಯದರ್ಶಿ ನೌಶಾದ್ ಇರಾನಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಧ್ಯಕ್ಷರಾದ ಶ್ರೀರಾಮ್ ಶಾನ್ಬೋಗ್ ಸ್ವಾಗತಿಸಿದರು. ಆನಂದ್ ದಂಡೋತಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಕ್ಲಬ್ ನ ಗವರ್ನರ್ ಮಾಣಿಕ್ ಪವಾರ್, ಅಧ್ಯಕ್ಷರಾದ ರಾಮ್ ಶಾನುಭೋಗ, ಕಾರ್ಯದರ್ಶಿ ನೌಶಾಧ ಇರಾನಿ, ಖಜಾಂಚಿ ಆನಂದ್ ದಂಡೋತಿ ಮಾರ್ಗದರ್ಶಕ ಬಸವರಾಜ್ ಖಂಡೇರಾವ್, ಕ್ಲಬ್ನ ತರಬೇತುದಾರ ದ್ವಾರಕಾ ಪ್ರಸಾದ್ ದಾಯಮ್ಮ, ದೇವೇಂದ್ರ ಸಿಂಗ್ ಚೌಹಾಣ್, ಸುಹಾಸ್ ಕಣಗೇ ,ದಿನೇಶ್ ಪಾಟೀಲ್, ವೈಜನಾಥ್ ಪಾಟೀಲ್, ಸಿ.ಕೆ ಹಿರೇಮಠ, ಆನಂದ್ ಪಲ್ಲೋದ್, ಅಮಿತ್ಲೋಯ ,ಸಿದ್ದೇಶ್ ,ಅಭಿಜಿತ್ ಪಡಶೆಟ್ಟಿ ಉಪಸ್ಥಿತರಿದ್ದರು