ಜನಸಾಮಾನ್ಯರ ಬಜೆಟ್- ನಾಡಿನ ಪ್ರಗತಿ ಪೂರಕ: ಶಾಸಕ ಡಾ. ಅಜಯ್ ಸಿಂಗ್

0
19

ಕಲಬುರಗಿ: ಸಂಪೂರ್ಣ ಬಹುಮತÀದೊಂದಿಗೆ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ಚೊಚ್ಚಿಲ ಬಜೆಟ್‍ನಲ್ಲಿ ನಾಡಿನ ಏಳು ಕೋಟಿ ಕನ್ನಡಿಗರೂ ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿ ಆಗಬೇಕು ಎಂಬ ಸದಾಶಯ ಬಿಂಬಿತವಾಗಿದೆ. ಸರ್ವರನ್ನೂ ಒಳಗೊಂಡ, ಸರ್ವತೋಮುಖ ಪ್ರಗತಿಯ ಕರ್ನಾಟಕ ಅಭಿವೃದ್ಧಿ ಬಯಸುವಂತಹ ಮಾದರಿ ಬಜೆಟ್ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ್ದಾರೆಂದು ಮಾಜಿ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರೆಂಟಿಗಳಿಗೆ ಅನುದಾನ ಒದಗಿಸಿz್ದÉೀವೆ. ಕಲ್ಯಾಣ ನಾಡಿನ ಪ್ರಗತಿಗೆ ಪೂರಕವಾಗಿರುವ ಕೆಕೆಆರ್‍ಡಿಬಿಗೆ ವಾರ್ಷಿಕ 5 ಸಾವಿರ ಕೋಟಿ ರುಪಾಯಿ ಅನುದಾನ ಮೀಸಲಿಡುವ ಮೂಲಕ ಸುವ ಮೂಲಕ ನುಡಿದಂತೆ ನಡೆದಿz್ದÉೀವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಂಕಲ್ಪ ಕಾಂಗ್ರೆಸ್ ಸರ್ಕಾರದ್ದಾಗಿದೆ. ಈ ಗುರಿ ತಲುಪುವ ದಾರಿಯಲ್ಲಿನ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಅನ್ನು ನಾಡಿನ ಜನತೆಗೆ ಅರ್ಪಿಸಿz್ದÉೀವೆ, ಇದೊಂದು ಜನಸಾಮಾನ್ಯರ ಬಜೆಟ್ ಆಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

Contact Your\'s Advertisement; 9902492681

ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ನಾಡಿನ ಪ್ರತಿ ಮನೆಯವರೂ 4 ರಿಂದ 5 ಸಾವಿರ ರುಪಾಯಿ ಹೊಂದಲಿದ್ದಾರೆ. ಬಡವರಿಗೆ ಈ ನೆರವು ವರದಾನವಾಗಲಿದೆ. ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ಶಾಹಿಮಹೆಲ್‍ಗಳ ಕಾಮಗಾರಿಗಳಿಗೆ ಹಣ ಮೀಸಲಿಡಲಾಗಿದೆ. ಕೆಕೆಆರ್‍ಡಿಬಿ ಅನುದಾನ ಹೆಚ್ಚಿದ್ದರಿಂದ ಈ ಬಾಗದಲ್ಲಿ ಪ್ರಗತಿಯ ಫಸಲು ಬಂಪರ್ ಬರಲಿದೆ. ಅದು ಮುಂದೆ ತಲಾ ಆದಾಯ ಹೆಚ್ಚಳವಾಗಿ ಪರಿವರ್ತನೆ ಆಗಲಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

2017- 18 ರಲ್ಲಿ ರಾಜ್ಯದ ಸಾಲದ ಹೊರೆ 2. 45 ಲಕ್ಷ ಕೋಟಿ ರುಪಾಯಿ ಇತ್ತು. 2022- 23 ರಲ್ಲಿ ಅದು 5 ಲಕ್ಷ 16 ಸಾವಿರ ಕೋಟಿ ರು ಗೆ ಹೆಚ್ಚಿದೆ. ಈ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯನವರು ಸಾಲದ ಹೊರೆ ಹೆಚ್ಚದಂತೆ ಹಾಗೂ ಜನರಿಗೆ ಸವಲತ್ತು ದೊರಕುವಂತೆ ಚಾಕಚಕ್ಯತೆ ಪ್ರದಶಿರ್Àಸುವ ಮೂಲಕ ಜನಪರ, ಬಡವರ ಪರವಾದಂತಹ ಬಜೆಟ್ ಮಂಡಿಸಿದ್ದಾರೆಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here