ತಾಲೂಕಿನಾದ್ಯಂತ ಆಗಸ್ಟ್ 7 ರಿಂದ 12ರ ವರೆಗೆ ಇಂದ್ರಧನುಷ್ ಲಸಿಕೆ ಅಭಿಯಾನ

0
18

ಸುರಪುರ: ಇಂದ್ರಧನುಷ್ ಲಸಿಕೆ ಅಭಿಯಾನದ ಅಂಗವಾಗಿ ನಗರದ ತಗಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ, ಇಂದ್ರಧನುಷ್ ಲಸಿಕೆ ಅಭಿಯಾನ ಮಕ್ಕಳಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ತುಂಬಾ ಮುಖ್ಯವಾಗಿದ್ದು ಇದರ ಯಶಸ್ಸಿಗೆ ಎಲ್ಲರು ಸಹಕರಿಸುವಂತೆ ತಿಳಿಸಿದರು.

ಎಲ್ಲಾ ಗ್ರಾಮ ಪಂಚಾಯತಿ ಸಿಬ್ಬಂದಿಗಳು,ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು,ಆಶಾ ಕಾರ್ಯಕರ್ತೆಯರು,ಶಾಲಾ ಶಿಕ್ಷಕರು ಹಾಗೂ ಮಕ್ಕಳು ಈ ಅಭಿಯಾನದ ಯಶಸ್ಸಿಗಾಗಿ ಆಗಸ್ಟ್ 5 ಮತ್ತು 6 ರಂದು ಎರಡು ದಿನಗಳ ಕಾಲ ಆಯಾ ಗ್ರಾಮಗಳಲ್ಲಿ ಪ್ರಭಾತ್ ಪೇರಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲು ಭಾಗವಹಿಸುವಂತೆ ತಿಳಿಸಿದರು.ಅಲ್ಲದೆ ಜೆಸ್ಕಾಂ ಇಲಾಖೆ ಆಗಸ್ಟ್ 7 ರಿಂದ 12ರ ವರೆಗೆ ದಿನದ 24 ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ತಿಳಿಸಿದರು.

Contact Your\'s Advertisement; 9902492681

ನಗರಸಭೆಯಿಂದ ವಾಹನಗಳ ಮೂಲಕ ಈ ಅಭಿಯಾನದ ಬಗ್ಗೆ ನಿತ್ಯವು ಪ್ರಚಾರ ಮಾಡುವಂತೆ ಸೂಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ ಮಾತನಾಡಿ,ಇಂದ್ರಧನುಷ್ ಅಭಿಯಾನ ಇದೇ ಆಗಸ್ಟ್ 7 ರಿಂದ 12ನೇ ತಾರೀಖಿನ ವರೆಗೆ ನಡೆಯಲಿದೆ.ಒಟ್ಟು 3 ತಿಂಗಳುಕಾಲ ಈ ಅಭಿಯಾನ ನಡೆಯಲಿದೆ. ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಒಟ್ಟು 16 ನಗರ,ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಅಭಿಯಾನ ನಡೆಯಲಿದೆ.

ಈಗಾಗಲೇ ಪ್ರತಿ ಗ್ರಾಮಗಳಲ್ಲಿ ಇರುವ ಲಸಿಕೆಯಿಂದ ಹೊರಗುಳಿದ ಮಕ್ಕಳ ಸರ್ವೇ ಮಾಡಲಾಗುತ್ತಿದೆ.ಇನ್ನೆರಡು ದಿನಗಳಲ್ಲಿ ಮಕ್ಕಳು ಎಷ್ಟಿದ್ದಾರೆ ಎನ್ನುವ ಮಾಹಿತಿ ದೊರೆಯಲಿದೆ,ಈ ಅಭಿಯಾನದ ಅಡಿಯಲ್ಲಿ 0 ದಿಂದ 1 ವರ್ಷ,1 ರಿಂದ 2 ವರ್ಷ ಹಾಗೂ 2 ರಿಂದ 6 ವರ್ಷಗಳ ವರೆಗಿನ ಮಕ್ಕಳಿಗೆ ಎಮ್.ಆರ್ ಲಸಿಕೆ ನೀಡಲಾಗುತ್ತದೆ,ಅಲ್ಲದೆ ಗರ್ಭಿಣಿ ಮಹಿಳೆಯರಿಗೆ ಟಿ.ಟಿ 1 ಮತ್ತು ಟಿ.ಟಿ 2 ಲಸಿಕೆ ನೀಡಲಾಗುತ್ತದೆ.ಈ ಅಭಿಯಾನ ದಿಂದ ಮಕ್ಕಳಿಗೆ ನೀಡುವ ಲಸಿಕೆಯಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗ್ರಾಮೀಣ ಭಾಗದಲ್ಲಿ ಕರೆಯುವ ಗೊಬ್ಬರ,ಒಟ್ಟು ಎನ್ನುವ ಚರ್ಮದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಹಾಯವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಪೂಜಾರಿ,ನಗರಸಭೆ ನೈರ್ಮಲ್ಯ ನಿರೀಕ್ಷಕ ಶಿವಪುತ್ರ,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ಗುರುದೇವಿ ಹಿರೇಮಠ ಸೇರಿದಂತೆ ಜೆಸ್ಕಾಂ ಇಲಾಖೆ,ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here