ಕನ್ನಡ ಬರಹ-ಪ್ರಬಂಧ ಪುರಸ್ಕಾರ 26 ರಂದು

0
32

ವಾಡಿ: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜು.26 ರಂದು ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ.

ಅಂದು ಬೆಳಗ್ಗೆ 10:30ಕ್ಕೆ ಸ್ಥಳೀಯ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಮಕ್ಕಳ ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಅಧ್ಯಕ್ಷತೆ ವಹಿಸುವರು.

Contact Your\'s Advertisement; 9902492681

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ, ಚಿತ್ತಾಪುರ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ, ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಭೀಮಶಾ ಜಿರೊಳ್ಳಿ, ಎಸಿಸಿಯ ಉತ್ಪಾದಕ ಉಪ ಪ್ರಬಂಧಕ ವೀರಭದ್ರಯ್ಯ ಬೆಲ್ಲದ್, ಇಂಗಳಗಿ ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಯಾಮೇರ, ಶಿಕ್ಷಣ ಪ್ರೇಮಿ ರಜನಿ ಪಾಟೀಲ, ಬರಹಗಾರ ಮಡಿವಾಳಪ್ಪ ಹೇರೂರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಕಸಾಪ ಗೌರವ ಕಾರ್ಯದರ್ಶಿ ಹರಿಶ್ಚಂದ್ರ ಕರಣಿ ತಿಳಿಸಿದ್ದಾರೆ.

ಪ್ರತಿಭಾ ಪುರಸ್ಕಾರ: ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕಸಾಪ ಏರ್ಪಡಿಸಿದ್ದ ಪ್ರಬಂಧ ಹಾಗೂ ಕನ್ನಡ ಶುದ್ಧ ಬರಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 60 ವಿದ್ಯಾರ್ಥಿಗಳಲ್ಲಿ ಎಂಟು ಜನ ವಿದ್ಯಾರ್ಥಿಗಳು ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.

ಪರಿಸರ ನಾಶದಿಂದಾಗುವ ದುಷ್ಪರಿಣಾಮ: ಯಲ್ಲಮ್ಮ ರಾಮಯ್ಯ, ಶ್ರೀಗುರು ಪ್ರೌಢ ಶಾಲೆ (ಪ್ರಥಮ). ಶೀತಲ ರಾಮಚಂದ್ರ, ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆ (ದ್ವಿತೀಯ). ವರ್ಷಿಣಿ ಬಸವರಾಜ, ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ದಿವ್ಯಾ ಸಂತೋಷ, ಡಾ.ಬಾಬಾಸಾಹೇಬ ಅಂಬೇಡ್ಕರ್ ಪ್ರೌಢ ಶಾಲೆ (ತೃತೀಯ). ಕನ್ನಡ ಶುದ್ಧ ಬರಹ: ಕೀರ್ತಿ ಬಸವರಾಜ, ಗಂಗಾಮಾತೆ ಪ್ರೌಢ ಶಾಲೆ (ಪ್ರಥಮ). ಪಲ್ಲವಿ ವಿಜಯಕುಮಾರ, ಏಕಲವ್ಯ ಮಾದರಿ ವಸತಿ ಶಾಲೆ ಕೊಂಚೂರ (ದ್ವಿತೀಯ). ಕೃತಿಕಾ ಖಂಡೆಪ್ಪಾ, ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ಹಾಗೂ ಭಾಗ್ಯಶ್ರೀ ಈಶ್ವರಪ್ಪ, ಶ್ರೀಶೈಲ ಮಲ್ಲಿಕಾರ್ಜುನ ಪ್ರೌಢ ಶಾಲೆ (ತೃತೀಯ).

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here