ಈ ಭಾಗದವರೇ ಚಲನಚಿತ್ರ ನಿರ್ದೇಶನ ಮಾಡಲು ಖ್ಯಾತ ಸಂಗೀತ ಸಂಯೋಜಕ ವಿ.ಮನೋಹರ ಕರೆ

0
280

ಕಲಬುರಗಿ: ತಕ್ಷಣವೇ ಪ್ರತಿಫಲ ಸಿಗುವುದಿಲ್ಲ. ಕಲಾವಿದರಿಗೆ ಸಹನೆ ಮುಖ್ಯ ಎಂದು ಖ್ಯಾತ ಸಂಗೀತ ಸಂಯೋಜಕ ವಿ.ಮನೋಹರ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳವಾರ ಏರ್ಪಡಿಸಿದ ತಿಂಗಳ ಅತಿಥಿ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಷ್ಟ ಪಡಬೆಕು. ಸಾಧನೆಯ ಶಿಖರವನ್ನೇರಬೇಕಾದರೆ ಅವಮಾನಗಳನ್ನು ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ. ಮಹತ್ತರ ಗುರಿ, ಸಾಧಿಸುವ ಛಲ ಇರಬೇಕು. ಕಷ್ಟ ಅವಮಾನಗಳನ್ನು ಸ್ವೀಕರಿಸುತ್ತ ಮುನ್ನುಗ್ಗಿದಾಗ ಕೊನೆಗೊಂದು ದಿನ ಯಶಸ್ಸು ಸಿಗಲು ಸಾಧ್ಯ. ಈ ಭಾಗದವರೇ ಚಲನಚಿತ್ರ ನಿರ್ದೇಶನ ಮಾಡಿ, ಈ ಭಾಗದ ಕಲಾವಿದರು ಅಭಿನಯಿಸಬೇಕು, ಅಂದಾಗ ಮಾತ್ರ ಈ ಪ್ರದೇಶದ ಕಲಾವಿದರಿಗೆ ಅವಕಾಶ ಸಿಗಲು ಸಾಧ್ಯ. ಈ ಭಾಗದ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಬೇಕು. ಕನ್ನಡ ಚಲನಚಿತ್ರ ರಂಗದವರು ಬೆಂಗಳೂರಿನವರೇ ಮುಖ್ಯ ಎಂದು ಭಾವಿಸಿಕೊಂಡಿದ್ದಾರೆ. ಬಾವಿಯೊಳಗಿನ ಕಪ್ಪೆಯಂತೆ ಬದುಕುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಲೆ, ಸಂಗೀತ, ಸಾಹಿತ್ಯಕ್ಕೆ ಕೊರತೆಯಿಲ್ಲ. ಕಲ್ಯಾಣ ನಾಡಿನ ನೆಲ ಸರ್ವ ಸಂಪತ್ತಿನಿಂದ ಕೂಡಿದ ಸಂಪತ್‍ಭರಿತವಾಗಿದೆ. ಈ ಭಾಗದ ಕಲಾವಿದರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಕೊರಗು ಕಾಡುತ್ತಿದೆ. ಸಂಗೀತ ಸಂಯೋಜಕ ವಿ ಮನೋಹರ ಹಾಗೂ ಚಿತ್ರ ನಿರ್ದೇಶಕ ಮಂಜುನಾಥ ಪಾಂಡವಪುರ ಅವರು ಈ ಭಾಗದಲ್ಲಿ ಚಲನಚಿತ್ರದ ಶೂಟಿಂಗ್ ನಡೆಸಲು ಮುಂದಾಗಿದ್ದು, ಈ ಭಾಗಕ್ಕೆ ಸಾಂಸ್ಕøತಿಕ ನ್ಯಾಯ ಕೊಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಜಿಲ್ಲಾ ಕಸಾಪ ದಿಂದ ಜಿಲ್ಲೆಯಾದ್ಯಂತ ಸಾಂಸ್ಕøತಿಕ ವಾತಾವರಣ ಮೂಡಿಸುವಲ್ಲಿ ಶ್ರಮಿಸುತ್ತಿದೆ ಎಂದರು.

ಚಿತ್ರ ನಿರ್ದೇಶಕ ಮಂಜುನಾಥ ಪಾಂಡವಪುರ, ಪತ್ರಕರ್ತ ಹಣಮಂತರಾವ ಭೈರಾಮಡಗಿ, ಆಕಾಶವಾಣಿ ಕೇಂದ್ರ ನಿವೃತ್ತ ಅಧಿಕಾರಿ ಡಾ. ಸದಾನಂದ ಪೆರ್ಲ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಪದಾಧಿಕಾರಿಗಳಾದ ಶಕುಂತಲಾ ಪಾಟೀಲ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ ರಾವೂರ, ರವೀಂದ್ರಕುಮಾರ ಭಂಟನಳ್ಳಿ, ವಿನೋದ ಜೇನವೇರಿ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ, ಕಸಾಪ ದಕ್ಷಿಣ ವಲಯ ಅಧ್ಯಕ್ಷ ಶಾಮಸುಂದರ ಕುಲಕರ್ಣಿ, ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ಕಲಾವಿದ ವಿಶ್ವನಾಥ ತೊಟ್ನಳ್ಳಿ, ರೇವಣಸಿದ್ದಪ್ಪ ಜೀವಣಗಿ, ವಿವೇಕಾನಂದ ಟೆಂಗಳಿ, ಶಿವಲಿಂಗಪ್ಪ ಅಷ್ಟಗಿ, ಚಂದ್ರಶೇಖರ ಮ್ಯಾಗೇರಿ, ಸಿದ್ಧರಾಮ ಹಂಚನಾಳ, ಸೂರ್ಯಕಾಂತ ಸೊನ್ನದ, ಶ್ರೀಕಾಂತ ಪಾಟೀಲ ದಿಕ್ಸಂಗಿ, ನಾಗರಾಜ ಜಮದರಖಾನಿ, ಡಾ. ಬಾಬುರಾವ ಶೇರಿಕಾರ, ಪ್ರಭವ ಪಟ್ಟಣಕರ್, ಮಂಜುನಾಥ ಕಂಬಾಳಿಮಠ, ಪದ್ಮಾವತಿ ನಾಯಕ, ಜ್ಯೋತಿ ಕೋಟನೂರ, ರೇಣುಕಾ ಹೆಳವರ್, ಬಸ್ವಂತರಾಯ ಕೋಳ್ಕೂರ, ಕವಿತಾ ಪಾಟೀಲ ಮಂದೇವಾಲ, ಓಂಪ್ರಕಾಶ ವಸ್ತ್ರದ್, ಆನಂದ ತೆಗನೂರ ಸೇರಿ ಅನೇಕರು ಭಾಗವಹಿಸಿದ್ದರು.

ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಆಶಯದಂತೆ ಕೋಟಿ ಸದಸ್ಯತ್ವದ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ಪ್ರತಿದಿನ ಕನ್ನಡ ಭವನದಲ್ಲಿ ಸದಸ್ಯತ್ವ ಅಭಿಯಾನ ನಡೆಯಲಿದ್ದು, ಕವಿಗಳು, ಲೇಖಕರು, ವಿವಿಧ ಕಲಾವಿದರು ಸೇರಿ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವ ಮೂಲಕ ಪರಿಷತ್ತಿಗೆ ಬಲ ತುಂಬಬೇಕು. – ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಅಧ್ಯಕ್ಷ, ಜಿಲ್ಲಾ ಕಸಾಪ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here