ಸುರಪುರ: ನಗರದ ರಂಗಂಪೇಟೆಯ ಬಸವಪ್ರಭು ಸಮರ್ಥ ತರಬೇತಿ ಕೇಂದ್ರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನ ಸಹಯೋಗದೊಂದಿಗೆ ಸಾಹಿತ್ಯ ವೇದಿಕೆ ಉದ್ಘಾಟನೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಮಾತನಾಡಿ, ಸಾಹಿತ್ಯದ ವ್ಯಾಪ್ತಿ ಅತ್ಯಂತ ವಿಸ್ತಾರವಾಗಿದ್ದು, ಅಧ್ಯಾಯನ ಮಾಡಿದಂತೆಲ್ಲಾ ಜ್ಞಾನ ವಿಸ್ತಾರವಾಗುತ್ತಾ ಹೊಗುತ್ತದೆ.ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದ ಮನ್ನಣೆ ಇದ್ದು, ಆದಿ ಕವಿ ಪಂಪನಿಂದ ಅನೇಕ ಜನ ಸಾಹಿತ್ಯ ಲೋಕವನ್ನು ಕಟ್ಟಿ ಬೆಳೆಸಿದ್ದಾರೆ. ನವ್ಯ, ನವೋದಯ, ಬಂಡಾಯ, ದಲಿತ, ಶಿಶು ಸೇರಿದಂತೆ ಅನೇಕ ಪ್ರಕಾರಗಳನೊಳಗೊಂಡು ಸಾಹಿತ್ಯ ಬೆಳೆದು ಬಂದಿದೆ, ಇಂದಿನ ಯುವ ಜನ ಮತ್ತು ವಿದ್ಯಾರ್ಥಿ ಸಮುದಾಯ ಸಾಹಿತ್ಯದತ್ತ ಹೆಚ್ಚು ಒಲವು ತೊರಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಗುರುಪ್ರಸಾದ ವೈದ್ಯ ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಲಭೀಮ ಪಾಟೀಲ್, ಶ್ರೀಕಾಂತ ರತ್ತಾಳ ಸಂವಾದ ನಡೆಸಿದರು, ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಸಿದ್ದಣಗೌಡ ಹೆಬ್ಬಾಳ, ಅಂಬ್ರೇಶ ಕುಂಬಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಹಣಮಂತ್ರಾಯ ದೇವತ್ಕಲ್ ನಿರೂಪಿಸಿದರು, ಅಂಬ್ರೇಶ ಮುಷ್ಟಳ್ಳಿ ಸ್ವಾಗತಿಸಿದರು, ಪರಶುರಾಮ ಲೋಳಕರ ವಂದಿಸಿದರು, ಕಾರ್ಯಕ್ರಮಲ್ಲಿ ಅನೇಕ ಜನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.