ಸುರಪುರ: ವಿವಿಧೆಡೆ 77ನೇ ಸ್ವಾತಂತ್ರ್ಯ ದಿನಾಚರಣೆ

0
18

ಸುರಪುರ: ನಗರದ ವಿವಿಧ ಕಡೆಗಳಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ನಗರಸಭೆಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭಾಗವಹಿಸಿ ಧ್ವಜಾರೋಹಣ ನೆರವೇರಿಸಿದರು.

ನಂತರ ನಗರಸಭೆ ಕಾರ್ಯಾಲಯದ ಮುಂದೆ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್ ಅವರು ಧ್ವಜಾರೋಹಣ ನೆರವೇರಿಸಿದರು.ನಗರಸಭೆಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Contact Your\'s Advertisement; 9902492681

ನಗರ ಆಸ್ಪತ್ರೆ ಆವರಣದಲ್ಲಿನ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕದ ಬಳಿಯಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಧ್ವಜಾರೋಹಣ ನೆರವೇರಿಸಿದರು,ಶಾಸಕ ರಾಜಾ ವೆಂಕಟಪ್ಪ ನಾಯಕ,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ರಾಜಾ ವಾಸುದೇವ ನಾಯಕ,ರಾಜಾ ಲಕ್ಷ್ಮೀನಾರಾಯಣ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಗರದ ಬಸ್ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ಸಂಚಾರಿ ನಿಯಂತ್ರಕ ದ್ಯಾವಪ್ಪ ಧ್ವಜಾರೋಹಣ ನೆರವೇರಿಸಿದರು,ಸಂಚಾರಿ ನಿಯಂತ್ರಕರಾದ ಮಹಿಬೂಬ,ಬಾಲನಾಥ ಚವ್ಹಾಣ,ನಾಗಣ್ಣ,ಹಿರಿಯ ಚಾಲಕ ಮೂಡ್ಲಪ್ಪ,ಬಸವರಾಜ,ಶಿವಕುಮಾರ,ತಿರುಪತಿ ಸೇರಿದಂತೆ ಅನೇಕ ಸಿಬ್ಬಂದಿಗಳು ಭಾಗವಹಿಸಿದ್ದರು.

ನಗರದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಇಓ ಬಸವರಾಜ ಸಜ್ಜನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಸಹಾಯಕ ನಿರ್ದೇಶಕ ರವಿಚಂದ್ರ ರೆಡ್ಡಿ,ಸಾಮಾಜಿಕ ಪರಿಶೋಧಕರು,ತಾಂತ್ರಿಕ ಸಂಯೋಜಕರು, ಪ್ರೌಢಶಾಲಾ ಶಿಕ್ಷಕರು,ಮಕ್ಕಳು ಸೇರಿದಂತೆ,ಐಇಸಿ ಸಂಯೋಜಕರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ನಗರದ ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಡಾ:ಬಿ.ಆರ್ ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೀಮಣ್ಣ ಬಿಲ್ಲವ್ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲ ಶರಣಬಸವ ಅನಸೂರ,ಮೈಲಾರಲಿಂಗೇಶ್ವರ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಮಲ್ಲಿಕಾರ್ಜುನ ಕುಲಕರ್ಣಿ ಸೇರಿದಂತೆ ಎಲ್ಲಾ ಶಿಕ್ಷಕರು,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಜಾಲಿಬೆಂಚಿ ಗ್ರಾಮದಲ್ಲಿ ಅಮೃತ ಸರೋವರ ಅಭಿಯಾನದ ಅಡಿಯಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಪೇಠ ಅಮ್ಮಾಪುರ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಸಿದ್ದಪ್ಪ ಧ್ವಜಾರೋಹಣ ನೆರವೇರಿಸಿದರು.ತಾ.ಪಂ ಇಓ ಬಸವರಾಜ ಸಜ್ಜನ್ ಭಾಗವಹಿಸಿ ಕೆರೆ ಕಾಮಗಾರಿಯ ಕುರಿತು ಶಿಲಾ ಫಲಕ ಉದ್ಘಾಟಿಸಿದರು,ಕಾರ್ಯಕ್ರಮದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ರವಿಚಂದ್ರ ರೆಡ್ಡಿ,ಮುಖಂಡ ರಾಜಾ ನರಸಿಂಹ ನಾಯಕ,ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು,ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು,ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here