ಕಲಬುರಗಿ: ಅಮರ್ಜಾ ಆಣೆಕಟ್ಟಿನಲ್ಲಿ ಮುಳುಗಿ ಯುವಕ ಓರ್ವ ಮೃತಪಟ್ಟ ಘಟನೆ ಮಂಗಳವಾರ ಸಂಜೆ ಆಳಂದ ತಾಲ್ಲೂಕಿನಲ್ಲಿ ನಡೆಸಿದೆ.
ಆಳಂದ ಪಟ್ಟಣ ಹಬಿಯೂ ರಸ್ತೆಯ ಅಂಬೇಡ್ಕರ್ ಕಾಲೋನಿಯ ನಿವಾಸಿ ಸಮೀರ್ ಅಯುಬ್ ಜಮಾದಾರ್(29) ಮೃತಪಟ್ಟ ಯುವಕ ಎಂದು ಗುರುತ್ತಿಸಲಾಗಿದೆ. ಇಂದು ಸಮೀರ್ ಸೇರಿ ನಾಲ್ವರು ಆಮರ್ಜಾ ಆಣೆಕಟ್ಟಿಗೆ ನೀರು ವೀಕ್ಷಿಸಲು ತೆರಳಿದರು. ಕಾಲು ಜಾರಿ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮಾಹಿತಿ ಪಡೆದ ರಕ್ಷಣಾ ಪಡೆಯ ಸಿಬ್ಬಂದಿಗಳು ಎರಡು ಗಂಟೆಗಳ ನಂತರ ಮೃತ ಯುವಕ ಶವವನ್ನು ಹೊರೆಗೆ ತೆಗೆದು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.