ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಕೇಂದ್ರದ ಇ.ಡಿ.ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ನಿವಾಸದಲ್ಲಿ ಬಂಧಿಸಿದ್ದಾರೆ.
ಕಣ್ಮರೆಯಾಗಿದ್ದ 24 ಗಂಟೆ ಬಳಿಕ ಇಂದು ಸಂಜೆ ಎಐಸಿಸಿ ಪ್ರಧಾನ ಕಚೇರಿಗೆ ಆಗಮಿಸಿದ್ದ ಪಿ.ಚಿದಂಬರಂ ಸುದ್ದಿಗೋಷ್ಠಿ ನಡೆಸಿ, ಹಗರಣದಲ್ಲಿ ನನ್ನ ಹಾಗೂ ನನ್ನ ಕುಟುಂಬದ ತಪ್ಪು ಏನೂ ಇಲ್ಲ ಎಂದು ಹೇಳಿದ್ದರು. ಈ ವೇಳೆ ಮಾಜಿ ಸಚಿವರನ್ನು ಬಂಧಿಸಲು ಇ.ಡಿ.ಹಾಗೂ ಸಿಬಿಐ ಅಧಿಕಾರಿಗಳು ಕೂಡ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದರು. ಆದರೆ ಚಿದಂಬರಂ ಅಲ್ಲಿಂದ ತೆರಳುತ್ತಲೇ ಗೇಟ್ ಮುಚ್ಚಿದ್ದ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರಿಗಳನ್ನು ಒಳಕ್ಕೆ ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.
Delhi: A Central Bureau of Investigation (CBI) official jumps the gate of P Chidambaram's residence to get inside. CBI has issued a Look-Out Notice against him. pic.twitter.com/t6jp6L1y4h
— ANI (@ANI) August 21, 2019
ಬಳಿಕ ಚಿದಂಬರಂ ಅವರು ಕಾಂಗ್ರೆಸ್ ಕಚೇರಿಯಿಂದ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದರು, ಅವರ ಬೆನ್ನ ಹಿಂದೆಯೇ ಸಿಬಿಐ ಅಧಿಕಾರಿಗಳ ಎರಡು ತಂಡ ಕೂಡ ಅಲ್ಲಿಗೆ ತಲುಪಿತು. ಆದರೆ ಅಲ್ಲಿ ಕೂಡ ಅಧಿಕಾರಿಗಳನ್ನು ಒಳಗೆ ಬಿಡದೆ ಗೇಟ್ ಮುಚ್ಚಲಾಯಿತು. ಹಾಗಾಗಿ ಇಬ್ಬರು ಅಧಿಕಾರಿಗಳು ಕಾಂಪೌಂಡ್ ಹಾರಿ ಒಳಗೆ ಹೋಗಿ ತಾವೇ ಗೇಟ್ ತೆರೆದರು ಎನ್ನಲಾಗಿದೆ.
Modi's Govt is using the ED, CBI & sections of a spineless media to character assassinate Mr Chidambaram.
I strongly condemn this disgraceful misuse of power.
— Rahul Gandhi (@RahulGandhi) August 21, 2019
ಚಿದಂಬರಂ ಅವರ ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಂಧನದಿಂದ ರಕ್ಷಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದ ಪಿ. ಕಣ್ಮರೆಯಾಗಿದ್ದರು (ನಾಪತ್ತೆ) ಜಾಮೀನು ಅರ್ಜಿ ವಜಾಗೊಂಡ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ.
Delhi: P Chidambaram likely to be produced before the CBI Rouse Avenue Court, tomorrow. (file pic) pic.twitter.com/bcFD2TW7aN
— ANI (@ANI) August 21, 2019
ಚಿದಂಬರಂ ಬಂಧನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೇಂದ್ರದ ಅಧಿಕಾರಿಗಳನ್ನು ದುರ್ಬಳಕ್ಕೆ ಮಾಡಿಕೊಳ್ಳಲಾಗಿದೆ, ಎಂದು ನೇರವಾಗಿ ಆರೋಪ ಮಾಡುತ್ತಿದ್ದು, ಚಿದಂಬರಂ ಬಂಧನವನ್ನು ಖಂಡಿಸಿದೆ.