ಸತ್ಪುರುಷ ಶರಣಬಸವ ಲೀಲಾಪುರಷ

0
66

ಮಹಾದಾಸೋಹಿ ಶರಣಬಸವೇಶ್ವರರ ಲೀಲೆಗಳು ಇಂದಿಗೂ ನಡೆಯುತ್ತಲೆ ಇದ್ದು ಅವರು ಲೀಲಾಪುರುಷರಾಗಿದ್ದಾರೆ ಎಂದು ಮುಕ್ತಾಂಬಿಕಾ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪ್ರೊ. ಜಗದೇವಿ ಕೋಲಕುಂದಾ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಬುಧವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಶರಣರ ಮಹಿಮೆಯನ್ನು ಕೆಲ ಹುಡುಗರು ಒರೆಗ್ಹಚ್ಚಿ ನೋಡಬಯಸುತ್ತಾರೆ. ಹಾರಸರಡಗಿ ಊರಿನ ಬ್ರಾಹ್ಮಣ ಹುಡುಗನೊಬ್ಬ ಗೆಳೆಯನೊಬ್ಬನಿಗೆ ಕರೆದು ಆತನಿಗೆ ಸೀರೆಯುಡಿಸಿ ಶರಣರಲ್ಲಿ ಕರೆದು ತರುತ್ತಾನದಲ್ಲದೆ ಶರಣರಿಗೆ ಹೇಳುತ್ತಾನೆ. ’ ಈಕೆ ನನ್ನ ಹೆಂಡತಿ ಈಕೆಗೆ ಮಕ್ಕಳಿಲ್ಲ’ ಎನ್ನುತ್ತಾನೆ. ಆಗ ಶರಣರು ’ ಒಳ್ಳೆಯದಾಗುತ್ತದೆಯಪ್ಪಾ ವರ್ಷದೊಳಗೆ ಮಗನಿಗೆ ಹಡಿಯುತ್ತಾಳೆ’ ಎನ್ನುತ್ತಾರೆ. ಆ ಹುಡುಗರು ಹೊರಗೆ ಬರುವಾಗ ನಗುತ್ತಿರುತ್ತಾರೆ.

Contact Your\'s Advertisement; 9902492681

ನಗುವಾಗ ಸೀರೆಯ ಸೇರಗು ಜಾರುತ್ತದೆ. ನಗುವ ಗೆಳೆಯರು ತಣ್ಣಗಾಗುತ್ತಾರೆ. ಏಕೆಂದರೆ ನಿಜವಾಗಿಯೂ ಆ ಹುಡುಗ ಹೆಣ್ಣೇ ಆಗಿರುತ್ತಾನೆ. ಮೊಲೆಗಳು ಕಾಣುತ್ತವೆ. ಇಬ್ಬರು ಅಳುತ್ತಾ ಶರಣರಲ್ಲಿಗೆ ಬಂದು ಸಾಷ್ಟಾಂಗ ಹಾಕುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ. ಶರಣರು ಹೆಣ್ಣಾದ ಹುಡುಗನ ಮೇಲೆ ಕೈಯಿಟ್ಟಿದೇ ತಡ ಮತ್ತೇ ಮೊದಲಿನಂತೆ ಗಂಡಾಗುತ್ತಾನೆ. ಶರಣರು ’ ಸಜ್ಜನರ ಸಂಗ ಮಾಡಬೇಕು ದುರ್ಜನರ ಸಂಗ ದುರ್ನಾತು ತಂದಾತು’ ಎಂದು ಹೇಳಿ ಕಳುಹಿಸುತ್ತಾರೆ. ಕಲಬುರಗಿಯ ಮುಸ್ಲಿಂ ಮಹಿಳೆಯೊಬ್ಬಳು ಶರಣಬಸವರನ್ನು ಪರಮಾತ್ಮನೆಂದು ಪೂಜಿಸುತ್ತಿದ್ದಳು. ಅತೆ ಮಾವರಿಗೆ ಇದು ಸರಿ ಕಾಣಲಿಲ್ಲ. ’ ಅಲ್ಲಾ ದೊಡ್ಡವನು ಅವನಿಗೆ ನೆನೆ, ಇವನೀಗೆಕೆ? ಎಂದು ಬಯ್ಯುತ್ತಿದ್ದರು. ಮಗ ಹೆಂಡತಿಗೆ ಬಡಗಿಯಿಂದ ಜೋರಾಗಿ ಹೊಡೆದುಬಿಟ್ಟ ತಲೆಯೊಳಗೆ ದೊಡ್ಡ ತೂತ್ತು ಬಿತ್ತು. ಆದರೆ ತೂತಿನಿಂದ ರಕ್ತ ಬರಲಿಲ್ಲ ಪತ್ತರಿ ದಳಗಳು ಬರತೊಡಗಿದವು. ಮನೆ ಮಂದಿ ಗಾಬರಿ ಆಕೆ ಸೊಸೆ, ಹೆಂಡತಿ ಎಂಬುದು ಮರೆತು ಸಾಷ್ಟಾಂಗ ಹಾಕುತ್ತಾರೆ. ನನಗೆ ಬೇಡ ಶರಣರಿಗೆ ನಮಸ್ಕರಿಸಿ ಎಂದು ಹೇಳಿ ಕಳುಹಿಸುತ್ತಾಳೆ. ಶರಣರಲ್ಲಿ ಬಂದು ತಪ್ಪನು ಒಪ್ಪಿಕೊಳ್ಳುತ್ತಾರೆ.

ಎಲ್ಲಾ ಜಾತಿಯ ಜನರು ಶರಣರ ಭಕ್ತರು. ಮುಸ್ಲಿಂ ಹೈದರ ಎನ್ನುವವ ಅವರ ಅಪ್ಪಟ ಭಕ್ತ. ಎಲ್ಲವನ್ನು ಅವರು ಹೇಳಿದಂತೆ ಮಾಡುತ್ತಿದ್ದ. ಆದರೆ ಕುರಿ ಕಡಿಯುವುದನ್ನು ಬಿಟ್ಟಿರಲಿಲ್ಲ. ಹೇಗಾದರೂ ಮಾಡಿ ಆತನಿಂದ ಆ ಕೆಲಸ ಬಿಡಿಸಬೇಕೆಂದು ಶರಣರು ಕಾಯುತ್ತಿದ್ದರು. ಒಂದು ದಿನ ಆತ ಭಕ್ತಿಯಿಂದ ಶರಣರನ್ನು ತನ್ನ ಮನೆಗೆ ಬರಲು ಕೇಳಿಕೊಳ್ಳುತ್ತಾನೆ. ಒಪ್ಪಿದ ಶರಣರು ಒಂದು ದಿನ ಅವನ ಮನೆಗೆ ಹೊರಡುತ್ತಾರೆ. ಹೈದರ ತಿಳಿಯದೆ ಪಕ್ವಾನ್ನವನ್ನು ಶರಣರಿಗೆ ಮಾಡಿಸಬೇಕೆಂದು ಕುರಿಯೊಂದನ್ನು ತಂದು ಕೊಯ್ಯುತ್ತಾನೆ. ಇದನ್ನು ನೋಡಿದ ಅವನ ಮಕ್ಕಳು ನಾವು ಹೀಗೆ ಆಟ ಆಡೋಣವೆಂದು ನಿರ್ಧರಿಸಿ. ತಮ್ಮ ಹೇಳುತ್ತಾನೆ ’ ನಾನು ಕುರಿಯಾಗುವೆ ಅಪ್ಪನು ಕುರಿ ತಲೆ ಕೊಯ್ದಂತೆ ನನ್ನ ತಲೆ ನೀನು ಕೊಯ್ಯಬೇಕು ಎಂದು ಹೇಳುತ್ತಾನೆ.

ಆಗ ಅಣ್ಣ ಅವರಪ್ಪ ಕಡಿದ ಖಡ್ಗದಿಂದ ತಮ್ಮನ ತಲೆ ಕೊಯ್ಯುತ್ತಾನೆ. ಅಣ್ಣ ಓಡಿ ಹೋಗಿ ಅಪ್ಪನನ್ನು ತೋರಿಸುತ್ತಾನೆ. ತಂದೆ ತಾಯಿ ದುಃಖಿಸುತ್ತಾರೆ. ಶರಣರು ಬರುವ ಹೊತ್ತಾಯಿತು ಎಂದು ಹೆಣವನ್ನು ಮುಚ್ಚಿಡುತ್ತಾರೆ. ದುಃಖವನ್ನು ತಡೆ ಹಿಡಿದು ಶರಣರನ್ನು ಬರ ಮಾಡಿಕೊಳ್ಳುತ್ತಾರೆ. ಆಗ ಶರಣರು ಮಕ್ಕಳನ್ನು ಕರೆಯಿರಿ ಎಂದಾಗ ಅವನ ಹೆಂಡತಿ ಅಳಲು ಪ್ರಾರಂಭಿಸುತ್ತಾಳೆ. ಶರಣರು ಕಿರಿಯ ಹುಡುಗನ ಹೆಸರಿಟ್ಟು ಕರೆದಾಗ ಹುಡುಗ ಓಡಿ ಬರುತ್ತಾನೆ. ಇದನ್ನು ನೋಡಿದ ಜನರು ಭಕ್ತಿಯಿಂದ ನಮಿಸುತ್ತಾರೆ. ಹೀಗೆ ಶರಣರ ಲೀಲೆಗಳು ನಡೆಯುತ್ತಿವೆ ಎಂದು ಹೇಳಿದರು.

 ಪ್ರೊ. ಜಗದೇವಿ ಕೋಲಕುಂದಾ, ಸಹ ಪ್ರಾಧ್ಯಾಪಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here