ಕಾಂಪೌಂಡ್​ ಹಾರಿ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಚಿದಂಬರಂ ಬಂಧನ: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ

0
85

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಕೇಂದ್ರದ ಇ.ಡಿ.ಹಾಗೂ ಸಿಬಿಐ ಅಧಿಕಾರಿಗಳು ಚಿದಂಬರಂ ನಿವಾಸದಲ್ಲಿ ಬಂಧಿಸಿದ್ದಾರೆ.

ಕಣ್ಮರೆಯಾಗಿದ್ದ 24 ಗಂಟೆ ಬಳಿಕ ಇಂದು ಸಂಜೆ ಎಐಸಿಸಿ ಪ್ರಧಾನ ಕಚೇರಿಗೆ ಆಗಮಿಸಿದ್ದ ಪಿ.ಚಿದಂಬರಂ ಸುದ್ದಿಗೋಷ್ಠಿ ನಡೆಸಿ, ಹಗರಣದಲ್ಲಿ ನನ್ನ ಹಾಗೂ ನನ್ನ ಕುಟುಂಬದ ತಪ್ಪು ಏನೂ ಇಲ್ಲ ಎಂದು ಹೇಳಿದ್ದರು. ಈ ವೇಳೆ ಮಾಜಿ ಸಚಿವರನ್ನು ಬಂಧಿಸಲು ಇ.ಡಿ.ಹಾಗೂ ಸಿಬಿಐ ಅಧಿಕಾರಿಗಳು ಕೂಡ ಕಾಂಗ್ರೆಸ್​ ಕಚೇರಿಗೆ ಆಗಮಿಸಿದ್ದರು. ಆದರೆ ಚಿದಂಬರಂ ಅಲ್ಲಿಂದ ತೆರಳುತ್ತಲೇ ಗೇಟ್​ ಮುಚ್ಚಿದ್ದ ಕಾಂಗ್ರೆಸ್​ ಕಾರ್ಯಕರ್ತರು ಅಧಿಕಾರಿಗಳನ್ನು ಒಳಕ್ಕೆ ಬಿಟ್ಟಿರಲಿಲ್ಲ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ಬಳಿಕ ಚಿದಂಬರಂ ಅವರು ಕಾಂಗ್ರೆಸ್​ ಕಚೇರಿಯಿಂದ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದರು, ಅವರ ಬೆನ್ನ ಹಿಂದೆಯೇ ಸಿಬಿಐ ಅಧಿಕಾರಿಗಳ ಎರಡು ತಂಡ ಕೂಡ ಅಲ್ಲಿಗೆ ತಲುಪಿತು. ಆದರೆ ಅಲ್ಲಿ ಕೂಡ ಅಧಿಕಾರಿಗಳನ್ನು ಒಳಗೆ ಬಿಡದೆ ಗೇಟ್​ ಮುಚ್ಚಲಾಯಿತು. ಹಾಗಾಗಿ ಇಬ್ಬರು ಅಧಿಕಾರಿಗಳು ಕಾಂಪೌಂಡ್​ ಹಾರಿ ಒಳಗೆ ಹೋಗಿ ತಾವೇ ಗೇಟ್​ ತೆರೆದರು ಎನ್ನಲಾಗಿದೆ.

ಚಿದಂಬರಂ ಅವರ  ಹೈಕೋರ್ಟ್​ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಬಂಧನದಿಂದ ರಕ್ಷಿಸುವಂತೆ ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಿದ್ದ ಪಿ. ಕಣ್ಮರೆಯಾಗಿದ್ದರು (ನಾಪತ್ತೆ) ಜಾಮೀನು ಅರ್ಜಿ ವಜಾಗೊಂಡ ಬಳಿಕ ಅವರನ್ನು ವಶಕ್ಕೆ ಪಡೆಯಲಾಗಿದೆ.

ಚಿದಂಬರಂ ಬಂಧನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಕೇಂದ್ರದ ಅಧಿಕಾರಿಗಳನ್ನು ದುರ್ಬಳಕ್ಕೆ ಮಾಡಿಕೊಳ್ಳಲಾಗಿದೆ, ಎಂದು ನೇರವಾಗಿ ಆರೋಪ ಮಾಡುತ್ತಿದ್ದು, ಚಿದಂಬರಂ ಬಂಧನವನ್ನು ಖಂಡಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here