ಮನುಷ್ಯ ಮಾಡಿದ ಪುಣ್ಯದ ಕೆಲಸಗಳೇ ಅವನ್ನನ್ನು ದೊಡ್ಡವನಾಗಿ ಮಾಡುತ್ತವೆ-ಚರಂತೇಶ್ವರ ಸ್ವಾಮಿಗಳು

0
30

ಶಹಾಬಾದ: ಮನುಷ್ಯ ಬದುಕಿರುವಾಗ ಅವನು ಮಾಡಿದ ಪುಣ್ಯದ ಕೆಲಸಗಳೇ ಅವನ್ನನ್ನು ದೊಡ್ಡವನಾಗಿ ಮಾಡುತ್ತದೆ ಎನ್ನುವುದಕ್ಕೆ ಬಸವರಾಜ ಮದ್ರಿಕಿ ಅವರೇ ಸಾಕ್ಷಿ ಎಂದು ತೊನಸನಹಳ್ಳಿ(ಎಸ್) ಗ್ರಾಮದ ರೇವಣಸಿದ್ಧ ಚರಂತೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಸಮಾಜ ಸೇವಕ ಬಸವರಾಜ ಮದ್ರಿಕಿ ಹಾಗೂ ಬಿಜೆಪಿ ಮುಖಂಡ ಅವರ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಬಳಗದ ವತಿಯಿಂದ ಬಡ ಮಕ್ಕಳಿಗೆ ಆಯೋಜಿಸಲಾದ ನೋಟ್‍ಬುಕ್, ಪೆನ್ನು, ಪೆನ್ಸಿಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಮದ್ರಿಕಿ ಅವರು ಎಲ್ಲಾ ಸಮಾಜದವರೊಂದಿಗೆ ಬೆರೆಯುವ ಉತ್ತಮ ಮತ್ತು ಸರಳ, ಸಜ್ಜನಿಕೆ ಯುವಕ. ಎಲ್ಲರ ಕಷ್ಟದಲ್ಲಿ ಪಾಲ್ಗೊಳ್ಳುವ ವ್ಯಕ್ತಿ. ತನ್ನ ಹುಟ್ಟು ಹಬ್ಬವನ್ನು ತಮ್ಮ ಸಮಾಜದವರೊಂದಿಗೆ ಆಚರಿಸಿಕೊಳ್ಳದೇ ನಗರದ ರಾಮಘಡ ಆಶ್ರಯ ಕಾಲೋನಿಯ ಸರಕಾರಿ ಪ್ರಾಥಮಿಕ ಶಾಲೆಯ ಬಡ ಮಕ್ಕಳ ಜತೆ ಆಚರಿಸಿಕೊಳ್ಳುತ್ತಿದ್ದಾರೆ.ಹುಟ್ಟು ಹಬ್ಬ ನೆಪ ಮಾತ್ರ. ಈ ಸಂದರ್ಭದಲ್ಲಿ ದುಂದು ವೆಚ್ಚ ಮಾಡದೇ, ಅದನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೋಟ್‍ಬುಕ್, ಪೆನ್ನು, ಪೆನ್ಸಿಲ್ ವಿತರಣೆ ಮಾಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ ಎಂದರು.

ಬದುಕಿನಲ್ಲಿ ನಾವು ಮಾಡುವ ಉತ್ತಮ ಕೆಲಸಗಳು ನಮ್ಮನ್ನು ಕೈಹಿಡಿಯುತ್ತವೆ ಎಂದು ಹೇಳಿದರು.

ತೊನಸನಹಳ್ಳಿ (ಎಸ್)ನ ಕೊಟ್ಟೂರೇಶ್ವರ ಶರಣರು ಮಾತನಾಡಿ, ಹುಟ್ಟು ಆಕಸ್ಮಿಕ ಮತ್ತು ಸಾವು ನಿಶ್ಚಿತ.ಆದರೆ ಈ ಹುಟ್ಟು ಹಾಗೂ ಸಾವಿನ ಮಧ್ಯದ ಜೀವನ ಮಾತ್ರ ಸುಂದರವಾಗಿರಬೇಕು.ಎಲ್ಲರೂ ಮೆಚ್ಚುವಂತಾಗಬೇಕು. ಮನುಷ್ಯ ಸತ್ತ ವ್ಯಕ್ತಿಯ ಶರೀರವನ್ನು ಮನೆಯಿಂದ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ, ಅವನ ಜತೆ ಅವನು ಬಳಸಿದ ಬಟ್ಟೆ,ಹೊದಿಕೆ,ಕನ್ನಡಕ ಇವುಗಳನ್ನು ಮನೆಯಿಂದ ಹೊರಗಡೆ ಹಾಕುತ್ತಾರೆ.ಆದರೆ ಅವನು ಗಳಿಸಿದ ಆಸ್ತಿ,ಬಂಗಾರ, ದುಡ್ಡು ಯಾವುದು ಹೊರಗಡೆ ಹಾಕುವುದಿಲ್ಲ.ಅಲ್ಲದೇ ಶರೀರವನ್ನು ಅಂತ್ಯಸಂಸ್ಕಾರ ಮಾಡಿದ ಮೇಲೆ ಅಲ್ಲಿ ಯಾರೂ ನಿಲ್ಲುವುದಿಲ್ಲ.ಸತ್ತ ನಂತರ ವ್ಯಕ್ತಿಗೆ ಬೆಲೆ ಇರುವುದಿಲ್ಲ ಎನ್ನುವುದಕ್ಕೆ ಇದಕ್ಕಿಂತ ಉದಾಹರಣ ಬೇಕಿಲ್ಲ.ಆದರೆ ಬೆಲೆ ಇರುವುದು ಮಾತ್ರ ನಾವು ಮಾಡಿದ ಪುಣ್ಯದ ಕಾರ್ಯಗಳಿಗೆ ಮಾತ್ರ ಎಂದು ಮನಗಾಣಬೇಕೆಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಶಂಕರ ಸೋಮ್ಯಾಜಿ ಮಾತನಾಡಿ,ಬಸವರಾಜ ಮದ್ರಿಕಿ ಅವರ ನಡೆ-ನುಡಿ, ಮೃದು ವಚನ, ಗುರು ಹಿರಿಯನ್ನು ಕಾಣುವ ಭಾವ, ಕಿರಿಯರನ್ನು ಕಾಣುವ ನೋಟ ಅವನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.ಅವರು ಪಡೆದ ಸಂಸ್ಕಾರ ಎಲ್ಲರೊಂದಿಗೆ ಹಂಚಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ತೊಡಬೇಕೆಂದು ತಿಳಿಸಿದರು.

ಕಸಾಪ ತಾಲೂಕಾಧ್ಯಕ್ಷ ಶರಣಬಸಪ್ಪ ಕೋಬಾಳ,ಬಸವರಾಜ ನಾಯಿಕಲ್,ರಾಮಣ್ಣ ಇಬ್ರಾಹಿಂಪೂರ, ಬಸವರಾಜ ಮಯೂರ,ಪರಶುರಾಮ ಮುತ್ತಗಿಕರ್,ವಿಜಯಕುಮಾರ ಕಂಠಿಕರ್, ವಿಫುಲ್ ಸೇರಿದಂತೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here