ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ- ದೇವೆಂದ್ರ ರೆಡ್ಡಿ

0
63

ಶಹಾಬಾದ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ ಎಂದು ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರ ರೆಡ್ಡಿ ಹೇಳಿದರು.

ಅವರು ಶುಕ್ರವಾರ ನಗರದ ಬಿವಿಎಮ್ ಶಾಲಾ ಮೈದಾನದಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕ್ರೀಡಾಕೂಟ ಆಯೋಜಿಸಿರುವುದರಿಂದ ಮಕ್ಕಳಲ್ಲಿ ಉತ್ಸಾಹ ಕಂಡುಬರುತ್ತಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ. ಸೋಲು ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ. ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಶಿಕ್ಷಣದ ಜತೆಗೆ ಕ್ರೀಡೆ ಅಗತ್ಯ. ಉತ್ತಮ ಆರೋಗ್ಯವಿರುವ ದೇಹದಲ್ಲಿ ಆರೋಗ್ಯಕರ ಮನಸ್ಸು ಇರುತ್ತದೆ. ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸಿ. ತೀರ್ಪುಗಾರರು ನೀಡುವ ತೀರ್ಪು ಗೌರವಿಸಿ. ಎರಡು ದಿನ ಸಂಭ್ರಮದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧಕರಾಗಿ ಶಾಲೆಗಳಿಗೆ ತೆರಳಿ’ ಎಂದು ಕಿವಿಮಾತು ಹೇಳಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಮಲ್ಲಿನಾಥ ರಾವೂರ ಮಾತನಾಡಿ, ಸೋತವರು ಗೆದ್ದವರನ್ನು ಅಭಿನಂದಿಸಿ, ಗೆದ್ದವರು ಸೋತವರನ್ನು ಆಲಂಗಿಸಿ ಕ್ರೀಡಾ ಮನೋಭಾವದಿಂದ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ, ತೀರ್ಪುಗಾರರು ನೀಡುವ ತೀರ್ಪು ಗೌರವಿಸಿ. ಅಲ್ಲದೇ ತೀರ್ಪುಗಾರರು ಪಾರದರ್ಶಕತೆಯನ್ನು ಮೈಗೂಡಿಸಿಕೊಳ್ಳಿ.ಎಲ್ಲಾ ಶಾಲೆಯ ಮಕ್ಕಳನ್ನು ಸಮಾನವಾಗಿ ಕಾಣಿ ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ ಗುರುರಾಜ ಸಂಗಾವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರಸಭೆಯ ಪೌರಾಯುಕ್ತೆ ಪಂಕಜಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಈರಣ್ಣ ಕೆಂಭಾವಿ,ಪ್ರಾ.ಶಾ.ಶಿ.ಸಂಘದ ತಾಲೂಕಾಧ್ಯಕ್ಷ ಶಿವಪುತ್ರ ಕರಣಿಕ್, ಬಿಆರ್‍ಪಿ ಅಶ್ವಿನಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಚಿದಾನಂದ ಕುಡ್ಡನ್,ಗ್ರೇಡ್-1 ದೈ.ಶಿ.ಸಂ ತಾಲೂಕಾಧ್ಯಕ್ಷೆ ವಿಜಯಲಕ್ಷ್ಮಿಅನುದಾನಿತ ದೈ.ಶಿ.ಸಂ.ರಾ.ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್,ಕ್ರೀಡಾಕೂಟದ ಸಂಯೋಜಕರಾದ ಬನ್ನಪ್ಪ ಸೈದಾಪೂರ, ನಿವೃತ್ತ ದೈಹಿಕ ಶಿಕ್ಷಕರಾದ ಹೆಚ್.ವಾಯ್.ರಡ್ಡೇರ್, ಸಿಆರ್‍ಸಿಗಳು ಹಾಗೂ ಎಲ್ಲಾ ಶಾಲೆಯ ದೈಹಿಕ ಶಿಕ್ಷಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here