ಸತೀಶ ಜಾರಕಿಹೊಳಿ ಅಭಿಮಾನಿಗಳ ವೈಚಾರಿಕ ಬಸವ ಪಂಚಮಿ ಆಚರಣೆ

0
20

ಸುರಪುರ:ನಗರದ ವಿವಿಧ ಕಡೆಗಳಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗ ಹಾಗೂ ರವಿ ಪಾಟೀಲ್ ಪೌಂಡೇಶನ್ ವತಿಯಿಂದ ನಗರದಲ್ಲಿ ವೈಚಾರಿಕ ಬಸವ ಪಂಚಮಿ ಕಾರ್ಯಕ್ರಮ ನಡೆಸಲಾಯಿತು.

ಬಳಗದ ಮುಖಂಡರಾದ ರಾಮು ನಾಯಕ ಅರಳಹಳ್ಳಿ ಕಾರ್ಯಕ್ರಮದ ಕುರಿತು ಮಾತನಾಡಿ,ಸಚಿವರಾದ ಸತೀಶ ಜಾರಕಿಹೊಳಿಯವರು ಜನರಲ್ಲಿನ ಮೌಢ್ಯತೆಯನ್ನು ದೂರಮಾಡಲು ಸದಾಕಾಲ ಕಾರ್ಯನಿರ್ವಹಿಸುತ್ತಾರೆ,ಅವರನ್ನು ಸ್ಪೂರ್ಥಿಯಾಗಿಟ್ಟುಕೊಂಡಿರುವ ಸುರಪುರ ತಾಲೂಕಿನ ಸತೀಶ ಜಾರಕಿಹೊಳಿ ಅಭಿಮಾನಿ ಬಳಗ ಮತ್ತು ಸಮಾಜ ಸೇವಕ ರವಿ ಪಾಟೀಲ್ ರಾಯಚೂರ ಪೌಂಡೇಶನ್ ವತಿಯಿಂದ ಇಂದು ನಗರದ ತಾಲುಕು ಆಸ್ಪತ್ರೆಯಲ್ಲಿನ ರೋಗಿಗಳಿಗೆ ಮತ್ತು ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ವಿತರಣೆ ಮಾಡಲಾಗಿದೆ.ಅಲ್ಲದೆ ನಗರದಲ್ಲಿನ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಹಾಲು ವಿತರಣೆ ಮಾಡಿ ವೈಚಾರಿಕತೆಯ ಬಸವ ಪಂಚಮಿ ಆಚರಿಸಲಾಗುತ್ತಿದೆ.ಯಾಕೆಂದರೆ ಬಸವಣ್ಣನವರು ಕಲ್ಲ ನಾಗರ ಕಂಡರೆ ಹಾಲು ಎರೆಯುವರು,ದಿಟದ ನಾಗರ ಕಂಡರೆ ಕೊಲ್ಲು ಎಂಬುವರಯ್ಯ ಎಂದು ಮೌಢ್ಯತೆಯನ್ನು ಎತ್ತಿ ತೋರಿಸಿದ್ದಾರೆ.

Contact Your\'s Advertisement; 9902492681

ಬಸವಣ್ಣನವರ ಈ ವಚನವೇ ನಮಗೆ ಸ್ಪೂರ್ಥಿಯಾಗಬೇಕು,ಕಲ್ಲು ನಾಗರದ ಮೇಲೆ ಹಾಲು ಸುರಿದು ಹಾಳು ಮಾಡುವ ಬದಲು ಅದೇ ಹಾಲನ್ನು ಮಕ್ಕಳಿಗೆ ಕುಡಿಸಿದಲ್ಲಿ ಅವರಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಿದೆ,ಎಲ್ಲರು ಈ ನಿಟ್ಟಿನಲ್ಲಿ ಚಿಂತನೆ ಮಾಡಬೇಕು ಎಂದು ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಯಿತು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಪಾಟೀಲ್,ನ್ಯಾಯವಾದಿ ಯಲ್ಲಪ್ಪ ಹುಲಿಕಲ್ ಅವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಮುಖಂಡರಾದ ಮಾನು ನಾಯಕ ಕಲಬುರ್ಗಿ,ಶ್ರೀಕಾಂತ ನಾಯಕ,ಪ್ರಶಾಂತ ದೊಡ್ಮನಿ,ಅಮೋಘ ಪಂಚಾಂಗಮಠ,ಸುಪ್ರೀತ್ ಭಂಡಾರೆ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here