ಮಕ್ಕಳಿಗೆ ಹಾಲು ನೀಡಿ ಬಸವ ಪಂಚಮಿ ಹಬ್ಬ ಆಚರಣೆ

0
28

ಶಹಾಬಾದ: ನಾಗರ ಪಂಚಮಿಯ ಸಡಗರದಲ್ಲಿ ಇಂದಿಗೂ ಕೂಡ ಕಲ್ಲು ನಾಗರ ಮೂರ್ತಿಗೆ, ಹುತ್ತಕ್ಕೆ ಹಾಲು ಎರೆಯುವ ಪದ್ಧತಿ ರೂಢಿಯಲ್ಲಿದೆ. ಆದರೆ ಇಲ್ಲಿನ ಬಸವ ಸಮಿತಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಅರ್ಥಪೂರ್ಣ ನಾಗರ ಪಂಚಮಿ ಬದಲಿಗೆ ಸೋಮವಾರ ಬಸವ ಪಂಚಮಿ ಹಬ್ಬವಾಗಿ ಆಚರಿಸಿ ಗಮನ ಸೆಳೆದರು.

ತಾಲೂಕಿನ ಭಂಕೂರ ಗ್ರಾಮದ ಶಾಂತನಗರದ ಬಸವ ಸಮಿತಿ ಶಾಲೆಯಲ್ಲಿ ಬಸವ ಪಂಚಮಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರವನಕಾರರಾದ ಶರಣೆ ಗಿರಿಜಕ್ಕ ಧರ್ಮರೆಡ್ಡಿ ಅವರು ಮಾತನಾಡಿ, ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲಿಗೆ ಅಲ್ಲಿ ಹಾಜರಿದ್ದ ಹತ್ತಾರು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ನಾಗರ ಪಂಚಮಿ ಆಚರಣೆಗೆ ವೈಚಾರಿಕೆಯ ಸ್ಪರ್ಶ ನೀಡಿದರು.

Contact Your\'s Advertisement; 9902492681

ನಮ್ಮ ದೇಶದಲ್ಲಿ ಪೌಷ್ಟಿಕ ಆಹಾರದ ಕೊರತೆಯಿಂದ ಪ್ರತಿ 15 ನಿಮಿಷಕ್ಕೆ ಒಂದರಂತೆ ಮಗು ಅಸುನೀಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಪೌಷ್ಟಿಕ ಆಹಾರದ ಕೊರತೆಯಿಂದ ಬಾಣಂತಿಯರು ಕೂಡ ಬಳಲುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ನಾಗರ ಪಂಚಮಿಯ ನೆಪದಲ್ಲಿ ಕಲ್ಲು ನಾಗರ ಮೂರ್ತಿಗೆ, ಹುತ್ತಕ್ಕೆ ಸತ್ವಭರಿತ ಪೌಷ್ಟಿಕ ಆಹಾರವಾದ ಹಾಲನ್ನು ಎರೆಯುವ ಮೂಲಕ ಹಾಳು ಮಾಡಲಾಗುತ್ತಿದೆ. ಹಾಲು ಮಣ್ಣು ಪಾಲಾಗುವುದರಿಂದ ಏನೂ ಪ್ರಯೋಜನವಿಲ್ಲ. ಪೌಷ್ಟಿಕಾಂಶಗಳುಳ್ಳ ಹಾಲನ್ನು ಮಕ್ಕಳಿಗೆ ಕುಡಿಯಲು ನೀಡುವ ಮೂಲಕ ಪ್ರತಿಯೊಬ್ಬರೂ ಬಸವ ಪಂಚಮಿಯನ್ನು ಆಚರಿಸಲು ಸಂಕಲ್ಪಿಸಬೇಕಿದೆ ಎಂದರು.ಬಸವ ಸಮಿತಿ ಮಾಜಿ ಅಧ್ಯಕ್ಷ ಅಮೃತ ಮಾನಕರ್ ಮಾತನಾಡಿ,ಹಾವು ಹಾಲು ಕುಡಿಯೋದಿಲ್ಲ ಎಂಬ ಸತ್ಯವನ್ನು ತಿಳಿದುಕೊಳ್ಳಬೇಕು. ಹಬ್ಬದ ಆಚರಣೆಯಲ್ಲಿ ಮೂಢನಂಬಿಕೆಗೆ ಮಾರು ಹೋಗುತ್ತಿದ್ದೇವೆ. ಮೌಢ್ಯವನ್ನು ತೊರೆದು ವೈಚಾರಿಕೆಯನ್ನು ನಾವೀಗ ಅಳವಡಿಸಿಕೊಳ್ಳುವ ಅಗತ್ಯವಿದ್ದು, ಬಸವಣ್ಣನವರ ಸದಾಶಯದಂತೆ ಮೂಢನಂಬಿಕೆ-ಕಂದಾಚಾರ ತೊಲಗಿಸುವ ಸಂದೇಶ ನೀಡುವ ನಿಟ್ಟಿನಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಸೇರಿದಂತೆ ಸಮಿತಿಯ ಸರ್ವ ಪದಾಧಿಕಾರಿಗಳು, ಮುಖ್ಯಗುರುಗಳು ಹಾಗೂ ಶಾಲಾ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here