ಪಿಎಂ ಸ್ವ-ನಿಧಿಯಿಂದ ವ್ಯಾಪಾರಿಗಳ ಸಬಲೀಕರಣ; ಡಾ.ಭಗವತ್ ಕೃಷ್ಣರಾವ್ ಕರದ್

0
16

ಬೆಂಗಳೂರು; ದೇಶದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಕಸಬನ್ನು ನಡೆಸಲು ಪ್ರಧಾನಮಂತ್ರಿ ಸ್ವ- ನಿಧಿ ಯೋಜನೆಯಡಿ ರೂ. 10,000 ವರೆಗೆ ಶೇ. 7 ರಷ್ಟು ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು, ಇದರಿಂದ ಲಕ್ಷಾಂತರ ಜನ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕೃಷ್ಣರಾವ್ ಕರದ್ ಅವರು ತಿಳಿಸಿದರು.

ಅವರು ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾದ 7 ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಪುದುಚೆರಿ) ಒಂದು ದಿನದ ವಲಯ ಸಮಾವೇಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು.

Contact Your\'s Advertisement; 9902492681

ಕೋವಿಡ್ ಸಂಕಷ್ಟದಿಂದ ಆರ್ಥಿಕ ಸಂಕಷ್ಟಕ್ಕ ಒಳಗಾದ ಬೀದಿ ಬದಿ ವ್ಯಾಪಾರಿಗಳ ಪುನಶ್ಚೇತನಕ್ಕೆ ಆರ್ಥಿಕ, ವಸತಿ ಹಾಗೂ ನಗರಾಭಿವೃದ್ಧಿ ಮಂತ್ರಾಲಯಗಳು ಕೈಜೋಡಿಸಿ ಈ ಪಿಎಂ ಸ್ವ -ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ತಲುಪುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಜೂನ್ 2020 ರಲ್ಲಿ ಪ್ರಾರಂಭಗೊಂಡ ಈ ಯೋಜನೆಯಡಿ ಬಡತನದ ಕುಟುಂಬಗಳು ಮಧ್ಯಮ ವರ್ಗದ ಕುಟುಂಬಗಳಾಗಿ ಮಾರ್ಪಾಡುಗೊಳ್ಳುವ ಅವಕಾಶವಿದೆ. ಈ ಯೋಜನೆಯಡಿ ಪ್ರತಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲದ ರೂಪದಲ್ಲಿ ಬ್ಯಾಂಕ್ ಮೂಲಕ ದೊರೆಯುವುದಲ್ಲದೆ, ಸರ್ಕಾರ ಇದಕ್ಕೆ ತಗಲುವ ಶೇ. 7 ರಷ್ಟು ಬಡ್ಡಿ ಪಾವತಿಸುತ್ತದೆ. ಇನ್ನುಳಿದ ಬಾಕಿ ಬಡ್ಡಿಯನ್ನು ವ್ಯಾಪರಿಗಳು ಬರಿಸಬೇಕಾಗುತ್ತದೆ. ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಸಹಾಯಧನವನ್ನು ಸಹ ನೀಡಲಾಗುತ್ತದೆ ಎಂದರು.

ಪಿಎಂ ಸ್ವ-ನಿಧಿ ಯೋಜನೆಯಡಿ ಬಂದ ಅರ್ಜಿಗಳನ್ನು ಯಾವ ಬ್ಯಾಂಕುಗಳೂ ತಿರಸ್ಕರಿಸುವಂತಿಲ್ಲ. ಈವರಗೆ ದೇಶದಲ್ಲಿ ಒಟ್ಟು 51 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿಯಲ್ಲಿ ಸಾಲ ನೀಡುವ ಗುರಿ ಹೊಂದಿದ್ದು, ಇದರಲ್ಲಿ 39 ಲಕ್ಷ ಜನರು ಸಾಲ ಪಡೆದುಕೊಂಡಿದ್ದಾರೆ. ವ್ಯಾಪಾರಿಗಳು ಜನ್-ಧನ್ ಖಾತೆ ತೆಗೆದು ಅದಕ್ಕೆ ಆಧಾರ್ ಜೋಡಣೆ ಮಾಡಿರಬೇಕು. ನಂತರ ನಗರ ಸ್ಥಳೀಯ ಸಂಸ್ಥೆಗಳ ಜೊತೆಗೆ ನೋಂದಣಿಯಾಗಿರಬೇಕು.

ಕರ್ನಾಟಕದಲ್ಲಿ 4.40 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಡಿ ಸಾಲ ನೀಡುವ ಗುರಿ ಹೊಂದಿದ್ದು, 3,20,000 ಜನರಿಗೆ ಸಾಲ ನೀಡಿ ಶೇ. 68 ರಷ್ಟು ಸಾಧನೆ ಮಾಡಲಾಗಿದೆ. ಕೇರಳ ಈ ಯೋಜನೆಯಲ್ಲಿ ಶೇ.21 ಸಾಧನೆ ಮಾಡಿ ಕೊನೆಯ ಸ್ಥಾನದಲ್ಲಿದೆ. ದೇಶದಲ್ಲಿ ಇದೇ ಡಿಸೆಂಬರ್ ವೇಳೆಗೆ 50 ಲಕ್ಷ ಜನರಿಗೆ ಈ ಯೋಜನೆಯಡಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 43 ಲಕ್ಷ ಜನರಿಗೆ ಸಾಲ ನೀಡಲಾಗಿದೆ. ಭಾರತದ ಆರ್ಥಿಕ ಸ್ಥಾನ ವಿಶ್ವದಲ್ಲಿ 5 ರಿಂದ 3 ಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕರಾದ ಡಾ. ರಾಗಪ್ರಿಯ.ಆರ್ ಅವರು ಡಾ.ರಾಗಪ್ರಿಯ ಆರ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಹುಲ್ ಕಪೂರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here