ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

0
44

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14 ರಂದು ನಡೆಯುವ ಜಿಲ್ಲಾ ಮಟ್ಟದ ಧಮ್ಮಕ್ರಾಂತಿ ಉತ್ಸವ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕೆಂದು ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.

ಅವರು ನಗರದ ಭೌದ್ಧ ವಿಹಾರದಲ್ಲಿ 68 ನೇ ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗುವ ಧಮ್ಮಕ್ರಾಂತಿ ಉತ್ಸವ ಆಚರಣೆ ನಿಮಿತ್ತ ಶಹಾಬಾದ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಸಾಕಷ್ಟು ಪ್ರಯತ್ನಗಳ ನಡುವೆಯೂ ಬೌದ್ಧರು ಎಂದು ಜಾತಿ ಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ,
ಸನ್ನತಿ (ಕನಗನಹಳ್ಳಿ) ಕರ್ನಾಟಕ ಬೌದ್ಧರ ಪವಿತ್ರ ಸ್ಥಳ ಹೆಸರಿಗೆ ಮಾತ್ರ ಎಂಬಂತೆ ಸನ್ನತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಸರ್ಕಾರ ಈ ಐತಿಹಾಸಿಕ ಕ್ಷೇತ್ರದ ಬಗ್ಗೆ ನಿರ್ಲಕ್ಷ ತೋರುತ್ತಿರುವುದು ವಿμÁಧನೀಯ ಎಂದರು.

ಧಮ್ಮಕ್ರಾಂತಿ ಉತ್ಸವ ಆಚರಣೆ ಅದ್ದೂರಿಯಾಗಿ ಪಾಲ್ಗೊಳ್ಳಲು ಜಾಗೃತಿ ಮೂಡಿಸುವ ಮತ್ತು ಬೌದ್ಧ ಧರ್ಮವನ್ನು ಹೆಚ್ಚು ಹೆಚ್ಚು ಸಂಘಟಿತ ಮಾಡಬೇಕಿದೆ. ಅದರ ಅಂಗವಾಗಿ ಕಲಬುರಗಿಯಲ್ಲಿ ಎಲ್ಲಾ ದಲಿತ ಆಚರಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಭಾರತೀಯ ಬೌದ್ಧ ಮಹಾಸಭಾದ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ ಮಾತನಾಡಿ, ಅಕ್ಟೋಬರ್ 13 ರಂದು ಕಲಾತ್ಮಕ ನಾಟಕ ಹಾಗೂ ಸಾಂಸ್ಕಂತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.14 ರಂದು ಧಮ್ಮದೀಕ್ಷಾ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗುವುದು. ಬೌದ್ದ ಭಂತೇಜಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ದಿ ಜೀವಿಗಳು 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.

ಜಿಲ್ಲೆಯ ಎಲ್ಲಾ ದಲಿತ ಸಮನ್ವಯ ಸಮಿತಿ ಮುಖಂಡರು ಹಿರಿಯ ಮುಖಂಡ ವಿಠಲ್ ದೊಡ್ಡಮನಿ ಅವರ ನೇತೃತ್ವದಲ್ಲಿ ಒಗ್ಗೂಡಿ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ. ಧಮ್ಮ ಒಂದು ಆಚರಣೆಯಾಗಿದೆ. ಅದನ್ನು ಮೊದಲು ತಿಳಿಯಬೇಕು. ಬದುಕಿನ ಶಾಂತಿಯ ಮಾರ್ಗ ಅನುಸರಿಸುವ ವ್ಯಕ್ತಿಗಳು ಶಿಬಿರಕ್ಕೆ ಬಂದು ತಿಳಿಯಬಹುದಾಗಿದೆ. ಶಿಬಿರದಲ್ಲಿ ಧ್ಯಾನ, ತಿಳುವಳಿಕೆ, ಚರ್ಚೆ, ಸಂವಾದಗಳು ಹಾಗೂ ನಂಬಿಕೆಗಳ ಕುರಿತು ಮಾತುಕತೆ ನಡೆಯಲಿದೆ ಎಂದರು.ಬೌದ್ಧ ಜೀವನದ ಮೌಲ್ಯ ಸ್ವಾತಂತ್ರ್ಯ ಸಮಾನತೆ ಮತ್ತು ಬಂಧುತ್ವ ವಿಷಯದ ಮೇಲೆ ಬೆಳಕು ಚೆಲ್ಲಲಿದ್ದಾರೆ ಎಂದರು.

ಈ ಸಭೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ದಿಗಂಬರ ಬೆಳಮಗಿ, ಎಸ್ ಎಸ್ ತಾವಡೆ, ಸಂತೋಷ ಮೇಲಿನಮನಿ, ದಿನೇಶ ದೊಡ್ಡಮನಿ, ಪ್ರಕಾಶ ಔರಾದ್ಕರ, ದೇವೆಂದ್ರ ಸಿನ್ನೂರ್, ರಾಜು ಕೊರಳಿ, ಅಶೋಕ ವೀರನಾಯಕ, ಬಸವರಾಜ ಮಯೂರ, ಕೃಷ್ಣಪ್ಪ ಕರಣಿಕ, ಅಲ್ಲಮಪ್ರಭು ಮಸ್ಕಿ, ಶಿವಶಾಲ ಪಟ್ಟಣಕರ, ಹರಿಶ್ಚಂದ್ರ ಕೋಬಾಳಕರ, ಮಲ್ಲಿಕಾರ್ಜುನ ಕಟ್ಟಿಮನಿ,ಪ್ರವೀಣ ರಾಜನ್, ಪುನೀತ ಹಳ್ಳಿ, ಮೋಹನ ಹಳ್ಳಿ, ರಾಜು ನಾಟೆಕರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here