ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.
ಅವರು ಮುತ್ತಗಾ ಗ್ರಾಮದಲ್ಲಿ 85 ಲಕ್ಷ ರೂ. ವೆಚ್ಚದ ಅನುದಾನದ ಜೆಜೆಎಂ ಕಾಮಗಾರಿಯ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಪೂರೈಸುವ ಈ ಯೋಜನೆಯ ಉದ್ದೇಶವಾಗಿದೆ. ಮನೆ ಮನೆಗೆ ಪೈಪ್‍ಲೈನ್ ಮೂಲಕ ಸಮರ್ಪಕ ನೀರೊದಗಿಸುವ ಕೆಲಸವಾಗಬೇಕು. ಹೀಗಾಗಿ ಈ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಿದರೆ ಗ್ರಾಮದ ಯಾರೊಬ್ಬರ ಮನೆಗೂ ನೀರಿನ ಅಭಾವ ಇರುವುದಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಆದಷ್ಟು ಬೇಗ ಮತ್ತು ಗುಣಮಟ್ಟವಾಗಿ ಮುಗಿಸಿಕೊಡಬೇಕೆಂದು ಕಿವಿ ಮಾತು ಹೇಳಿದರು.
ಭಂಕೂರ ಗ್ರಾಪಂ ಅಧ್ಯಕ್ಷ ಶರಣಬಸಪ್ಪ ಧನ್ನಾ ಭೂಮಿ ಪೂಜೆ ನೇರವೇರಿಸಿ ಮಾತನಾಡಿ, ಮುತ್ತಗಾ ಗ್ರಾಮಕ್ಕೆ 85 ಲಕ್ಷ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಚಾಲನೆ ಕೈಗೊಂಡಿದ್ದು, ಆದ್ಷಟು ಬೇಗನೆ ಮನೆ ಮನೆಗೆ ನಳಗಳ ಮೂಲಕ ನೀರು ತಲುಪಲಿದೆ. ಈ ಯೋಜನೆಯನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಮುತ್ತಗಾ ಗ್ರಾಮದ ಮುಖಂಡರಾದ ಬಸವರಾಜ ಮಾಲಿಪಾಟೀಲ, ಶಂಕ್ರೆಪ್ಪ ಪಂಚಾಳ, ಶರಬಣ್ಣ ಮಾವೂರ,ಗ್ರಾಪಂ ಸದಸ್ಯರಾದ ಕೆಂಚಪ್ಪ ಪೂಜಾರಿ,ಮಲ್ಲಿಕಾರ್ಜುನ ನಾಲವಾರ, ದೇವಣ್ಣ ಹಳ್ಳಿ, ಜಗನ್ನಾಥ, ಮಹೇಂದ್ರ ಕೋರಿ, ಲಾಳೇ ಪಟೇಲ್,ನೂರಖಾನ್,ತಿಪ್ಪಣ್ಣ ಮುಡಬೂಳ,ಶರಣಪ್ಪ ಜಡಿಗಿ,ಮಲ್ಲಣ್ಣ ತಳವಾರ,ಶಿವಕುಮಾರ ನಾಟೇಕಾರ,ವಿಜಯಕುಮಾರ ಕೆಂಚಗೊಂಡ,ರಾಹುಲ್ ಜಿರಕಲ್,ಮಲ್ಲೇಶಿ ಜಿರಕಲ್, ಗುಂಡಪ್ಪ ಬಾಗೋಡಿ, ಅನೇಕರು ಇದ್ದರು.