ಹರಿದು ಚಿಂದಿಯಾಗಿರುವ ತಾಲೂಕಿನ ರಸ್ತೆಗಳು; ಸಾರ್ವಜನಿಕರ ಸಂಕಟಮಯ ಪ್ರಯಾಣ

0
24
ಹರಿದು ಚಿಂದಿಯಾಗಿರುವ ತಾಲೂಕಿನ ರಸ್ತೆಗಳು

ವಾಹನ ಸವಾರರಿಗೆ ಎಲ್ಲಿಲ್ಲದ ತೊಂದರೆ /ಕೋಟಿಗಟ್ಟಲೇ ಖರ್ಚಾದರೂ ಪ್ರಯೋಜನವಿಲ್ಲ

  • ಕರುಣೇಶ ಪಾಟೀಲ

ಶಹಾಬಾದ:ಹರಿದು ಚಿಂದಿಯಾಗಿರುವ ರಸ್ತೆ, ಎಲ್ಲಿ ನೋಡಿದರಲ್ಲಿ ತಗ್ಗು ಗುಂಡಿಗಳು, ಇಲ್ಲಿನ ಬಹುತೇಖ ರಸ್ತೆಗÀಳಲ್ಲಿ ಸಂಚರಿಸುವ ಜನರಿಗೆ ಎಲ್ಲಿಲ್ಲದ ಸಂಕಟ.ಇದು ನಗರದಿಂದ ಜೇವರ್ಗಿ ರಸ್ತೆ, ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ನಗರದ ವಾಡಿ ಕ್ರಾಸ್‍ನಿಂದ ನಗರದೊಳಗೆ ಪ್ರವೇಶಿಸುವ ತಾಲೂಕಾ ಶಹಾಬಾದನ ರಸ್ತೆಯ ದುಸ್ಥಿತಿ.

ಸರಕಾರಿ ನೌಕರರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ವಾಹನ ಚಾಲಕರು ಈ ರಸ್ತೆಯ ಮೇಲೆ ಹೊರಡು ಸಮಯದಲ್ಲಿ ದಿನನಿತ್ಯ ಜನಪ್ರತಿನಿಧಿಗಳಿಗೆ ಶಪಿಸದೇ ಇರಲಾರರು.ಕಾರಣ ಅಷ್ಟೊಂದು ಹದಗೆಟ್ಟಿದೆ. ಕೂಡಲೇ ರಸ್ತೆ ಮಾಡಬೇಕಾದ ಅನಿವಾರ್ಯವಿದೆ. – ಬಸವರಾಜ ಮಯೂರ ನಾಗರಿಕ.

ನಗರದೊಳಗೆ ಪ್ರವೇಶ ಮಾಡಿದರೂ, ನಗರದಿಂದ ಹೊರ ಹೋದರೂ ಹದಗೆಟ್ಟ ರಸ್ತೆಗಳ ದರ್ಶನ ಜತೆಗೆ ಕೆಟ್ಟ ಅನುಭವ ಉಂಟಾಗುತ್ತಿದೆ.ತಗ್ಗು ಗುಂಡಿಯಲ್ಲಿ ಬಿದ್ದು ಅದೆಷ್ಟೋ ಜನರು ಆಸ್ಪತ್ರೆಗೆ ಒಳಗಾಗಿದ್ದಾರೆ. ಧೂಳಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಆದರೂ ಜನರ ಸಂಕಷ್ಟಕ್ಕೆ ಯಾರು ಸ್ಪಂದಿಸುತ್ತಿಲ್ಲ. ಶಾಸಕರೇ ದಯಮಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿ. -ಮಹ್ಮದ್ ಅಜರ್ ಜೆಡಿಎಸ್ ಯುವ ಅಧ್ಯಕ್ಷ.

ತಾಲೂಕಿನಿಂದ ಹೊರಗಡೆ ಯಾವುದೇ ರಸ್ತೆಯಿಂದ ಹೊರಡುವ ಜನರಿಗೆ ಹದಗೆಟ್ಟ ರಸ್ತೆಗಳ ದರ್ಶನ ಆಗದೇ ಇರಲಾರದು.ಹದಗೆಟ್ಟ ಇಲ್ಲಿನ ರಸ್ತೆಗಳು ವರ್ಷದ ಎಲ್ಲಾ ದಿನಗಳಲ್ಲಿ ಇದೇ ಸ್ಥಿತಿಯಲ್ಲಿರುತ್ತವೆ. ಮಳೆಬಂದರೆ ಕೆಸರು ಮತ್ತು ಉಳಿದ ಸಮಯದಲ್ಲಿ ಧೂಳಿನಿಂದ ಸಾರ್ವಜನಿಕರು ಸಂಕಟ ಪಡುತ್ತಿದ್ದಾರೆ. ಈ ರಸ್ತೆಯ ದುರಸ್ತಿ ಯಾವಾಗ? ಎಂಬುದೆ ನರಕಯಾತನೇ ಅನುಭವಿಸುತ್ತಿರುವ ಪ್ರಯಾಣಿಕರ ಯಕ್ಷ ಪ್ರಶ್ನೆಯಾಗಿದೆ.

Contact Your\'s Advertisement; 9902492681

ಜನಸ್ನೇಹಿಯಾಗಿರಬೇಕಾದ ರಸ್ತೆಗಳು ಮಾತ್ರ ಹದಗೆಟ್ಟಿವೆ. ರಸ್ತೆಗಳಿಗಾಗಿ ಸರ್ಕಾರ ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುವ ಹಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಅದರೊಳಗೆ ಪ್ರಯಾಣಿಸುವ ಪ್ರಯಾಣಿಕರು ಜಟಕಾ ಬಂಡಿಯೊಳಗೆ ಕುಂತ ಅನುಭವ ಆಗದೇ ಇರಲಾರದು. ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿನ ಜನರು ಪ್ರಯಾಣ ಬಯಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರೆ ಇಲ್ಲಿನ ರಸ್ತೆಗಳಲ್ಲಿ ತೆಗ್ಗು ಗುಂಡಿಗಳನ್ನು ಎಣಿಸಲು ಸಾಧ್ಯವಿಲ್ಲಷ್ಟರ ಮಟ್ಟಿಗೆ ಹಾಳಾಗಿದೆ.

ಸುಮಾರು 25 ರಿಂದ 40 ಟನ್ ಭಾರ ಹೊತ್ತ ಸಿಮೆಂಟ ಹಾಗೂ ಫರ್ಸಿ ಲಾರಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಅಲ್ಲದೆ ಒಬ್ಬರಿಗೊಬ್ಬರೂ ಗುರುತು ಸಿಗದ ಹಾಗೇ ಮುಖ, ಮೈಗೆ ಭಾರಿ ಪ್ರಮಾಣದ ಧೂಳು ಹತ್ತುವುದರಿಂದ ಜನರು ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಕಳಪೆ ಡಾಂಬರೀಕರಣದಿಂದ ರಸ್ತೆ ಕಿತ್ತು ಹೋಗಿ ದೊಡ್ಡ ದೊಡ್ಡ ತಗ್ಗು ದಿನ್ನೆಗಳು ನಿರ್ಮಾಣವಾಗಿದೆ. ಇದರಿಂದ ಜನರು ರಸ್ತೆಗಿಳಿಯಲು ತೊಂದರೆ ಪಡಬೇಕಾಗಿದೆ. ವಾಹನ ಸವಾರರು ಈ ಹದಗೆಟ್ಟ ರಸ್ತೆಯ ಸುಧಾರಣೆಗೆ ಮುಂದಾಗದ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸದ್ಯ ಈ ರಸ್ತೆಯಿಂದ ಹೋಗಬೇಕಾದರೆ ಉಯ್ಯಾಲೆ ಆಡಿದಂತಾಗುತ್ತದೆ. ಸುಲಭ ಹೆರಿಗೆಗೆ ಇಲ್ಲಿಗೆ ಬರಬೇಕಷ್ಟೆ ಎಂದು ಇಲ್ಲಿನ ಜನರು ಈ ರಸ್ತೆಯ ಕುರಿತು ವ್ಯಂಗವಾಗಿ ಮಾತನಾಡುತ್ತಾರೆ.

ಇದೇ ರಸ್ತೆಯ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ತಿರುಗಾಡಿದರೂ ಬಹುಶ: ಅವರಿಗೆ ಇದರ ಅನುಭವ ಬಂದಿರಲಕ್ಕಿಲ್ಲ. ಇವರು ಇದ್ದು ಏನು ಪ್ರಯೋಜನವಿಲ್ಲ ಎಂದು ಪ್ರಯಾಣಿಕರ ಅಂಬೋಣವಾಗಿದೆ.ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಿಲ್ಲ.ಜನರ ಗೋಳು ಕೇಳುತ್ತಿಲ್ಲ. ಈ ರಸ್ತೆಗಳ ಶಾಶ್ವತ ಸುಧಾರಣೆಗೆ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರ ನರಕಯಾತನೆ ತಪ್ಪಿಸಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here