ಸೆ.10ರಂದು ಪ್ರಕಾಶ ರೈ ಜೊತೆ ಸಂವಾದ

0
86

ಕಲಬುರಗಿ: ಇಲ್ಲಿನ ಕಲಬುರಗಿ ಆರ್ಟ್ ಥಿಯೇಟರ್, ಅಂತರಂಗ ಸಾಂಕೃತಿಕ ಸೇವಾ ಸಂಸ್ಥೆ, ರಂಗ ವೃತ್ತಿ ಕಲಾ ತಂಡ ಹಾಗೂ ಸೂರ್ಯನಗರ ಸಾಂಸ್ಕøತಿಕ ಸೇವಾ ಸಂಘಗಳÀ ಸಂಯುಕ್ತಾಶ್ರಯದ ಸೆ. 10ರಂದು ಸಂಜೆ 6 ಗಂಟೆಗೆ ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಸಾಂಸ್ಕೃತಿಕ ಅನುಸಂದಾನ ಕುರಿತು ಸಂವಾದ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸುನಿಲ್ ಮಾನಪಡೆ ಹೇಳಿದರು.

ಕರ್ನಾಟಕ ಹೆಸರಾಂತ ನಾಟಕ ನಿರ್ದೇಶಕ ಶ್ರೀಪಾದ ಭಟ್ಟ ರವರ ನಿರ್ದೇಶನದ ಗಾಯಗಳು ನಾಟಕ ಪ್ರದರ್ಶನಕ್ಕೆ ಚಿತ್ರನಟ, ಸಂಸ್ಕøತಿ ಚಿಂತಕ ಪ್ರಕಾಶ ರೈ ಅವರು ಉದ್ಘಾಟಿಸಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಸಂವಾದ ಕಾರ್ಯಕ್ರಮದಲ್ಲಿ ಬರಹಗಾರರಾದ ಮಹಾಂತೇಶ ನವಲಕಲ್ ಡಾ. ಅಪ್ಪಗೆರೆ ಸೋಮಶೇಖರ ಪೆÇ್ರ. ಶಿವಗಂಗಾ ರುಮ್ಮಾ, ಡಾ. ಕೆ. ಲಿಂಗಪ್ಪ, ಡಾ. ಆಜೀಮ್ ಪಾಶಾ, ಡಾ. ರಮೇಶ ಲಂಡನಕರ್, ಡಾ. ಶಿವರಂಜನ ಸತ್ಯಂಪೇಟೆ, ಡಾ. ಅನಿಲ ಟೆಂಗಳಿ, ಬಾಬುರಾವ ಯಡ್ರಾಮಿ ಭಾಗವಹಿಸಲಿದ್ದಾರೆ ಎಂದರು.

ಸುರೇಶ ಶರ್ಮಾ ಪೆÇ್ರ. ಈಶ್ವರ ಇಂಗನ್, ಶಂಭುಲಿಂಗ ಗುಂಡುಗುರ್ತಿ, ರಾಜಗೋಪಾಲ ರೆಡ್ಡಿ, ರಾಜಕುಮಾರ ಕಪನೂರ, ಡಾ. ಸುನಿಲ, ವಂಟಿ, ಲಿಂಗರಾಜ ತಾರಫೈಲ್, ಶಿವಾನಂದ ಹೊನಗುಂಟಿ, ಗೀತಾ ಭರಣಿ, ಪ್ರಕಾಶ ಅವರಾದಕರ್ ಉಪಸ್ಥಿತರಿರುವರು. ಸುನಿಲ ಮಾನವಡೆ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಎಸ್. ಬಿ. ಹರಿಕೃಷ್ಣ, ಮಲ್ಲಿಕಾರ್ಜುನ ದೊಡ್ಡಮನಿ, ರಾಜಕುಮಾರ ಎಸ್.ಕೆ., ಸಂತೋಷ ಮೇಲ್ಮನಿ ಇತರರಿದ್ದರು.

ಸಾಂಸ್ಕøತಿಕ ಕಾಳಜಿ: ಕಳೆದ 2 ದಶಕಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಈ 4 ರಂಗ ಸಂಸ್ಥೆಗಳು ವೃತ್ತಿ ರಂಗ ಕಲಾವಿದರಾಗಿ ಸಂಘಟಕರಾಗಿ ಶಾಲಾ, ರಂಗಭೂಮಿ, ಕಾಲೇಜು ರಂಗಭೂಮಿ, ಹವ್ಯಾಸಿ ರಂಗಭೂಮಿ, ರಾಜ್ಯ ಮಟ್ಟದ ರಂಗ ತರಬೇತಿ ಶಿಬಿರ, ಉಪನ್ಯಾಸ, ಕಿರುಚಿತ್ರ ಪ್ರದರ್ಶನ ನೀಡುತ್ತ ಕಲ್ಯಾಣ ಕರ್ನಾಟಕದ ತತ್ವಪದ, ಗೀಗೀ ಪದ, ಡೊಳ್ಳು ಕುಣಿತ, ಹಲಗೆ, ಹೋರಾಟ ಹೀಗೆ ಅನೇಕ ಜಾನಪದ ಕಲಾ ಪ್ರಕಾರಗಳು ಶಾಲಾ ಕಾಲೇಜು ಹಂತದಿಂದ ತರಬೇತಿ ನೀಡಿ ಸಾಂಸ್ಕೃತಿಕ ನೆಲೆ ಉಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here