ಆಧುನಿಕ ಜಗತ್ತಿನ ವಿಸ್ಮಯಗಳಾದ ಸ್ಮಾರ್ಟಫೋನ್: ಡಾ. ಬಲರಾಮ

0
53

ಕಲಬುರಗಿ: ಆಧುನಿಕ ಜಗತ್ತಿನ ವಿಸ್ಮಯಗಳಾದ ಸ್ಮಾರ್ಟಫೋನ್, ದೂರದರ್ಶನ, ಗಣಕಯಂತ್ರದಲ್ಲಿ ಆಗುತ್ತಿರುವ ಬದಲಾವಣೆಗೆ ವಸ್ತಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಯೇ ಮೂಲಕಾರಣ ಎಂದು ಬೆಂಗಳೂರಿನ ಐ.ಐ.ಎಸ್‌ಸಿ.ಯ ಸಂಶೋಧಕರಾದ ಡಾ. ಬಲರಾಮ ಸಾಹು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಸಿರಾಮಿಕ ಮತ್ತು ಸಿಮೇಂಟ್ ಟೆಕ್ನಾಲಜಿ ವಿಭಾಗವು ವಸ್ತುಗಳ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಇತ್ತಿಚಿನ ಬೆಳವಣಿಗೆಗಳು ಎಂಬ ವಿಷಯದ ಮೇಲೆ ನಡೆಯಿಸಿದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.  ಟೆಕ್ಯೂಪ್ 3 ಪ್ರಾಯೋಜಿಸಿದ ಈ ಒಂದು ದಿನದ ವಿಚಾರ ಸಂಕಿರಣವು ವಸ್ತುವಿಜ್ಞಾನದ ಬೆಳವಣಿಗೆ ಹಾಗೂ ಸಂಶೋಧನಾ ಚಟುವಟಿಕೆ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಿತು. ಭಾಗವಹಿಸಿದ ವಿವಿಧ ಸಂಶೋಧಕರ ವಿಚಾರ ವಿನಿಮಯಕ್ಕೆ ವೇದಿಕೆಯಾಗಿತ್ತು.

Contact Your\'s Advertisement; 9902492681

ಗೌರವ ಅತಿಥಿಗಳಾಗಿ ಆಗಮಿಸಿದ ಪೋರ್ತುಗಲ್ ರಾಷ್ಟ್ರದ ಬ್ರಾಗಮೂಲದ ಐಬೇರಿಯನ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಭಾರತೀಯ ಮೂಲದ ಡಾ. ಪುರಷೋತ್ತಮ ಜೋಶಿ ನ್ಯಾನೋ ಕಣಗಳು ಮತ್ತು ನ್ಯಾನೋ ವಸ್ತುಗಳ ಸಮಗ್ರ ಮಹತಿ ಒದಗಿಸಿದರು. ಉಂಗಾಡಾ ಮೂಲದ ವಿಜ್ಞಾನಿ ಇನ್-ಯಾ-ಲೋಟ್ ಜೂಡ್ ಟ್ಯಾಡಿಯೋ ಅವರು ಸ್ಮಾರ್ಟ ವಿಂಡೋ ವಸ್ತುಗಳ ಮೇಲೆ ತಮ್ಮ ಪ್ರಬಂಧವನ್ನು ಮಂಡಿಸಿ ನಮ್ಮ ಮಹಾವಿದ್ಯಾಲಯದ ಯುವ ಸಂಶೋಧಕರಿಗೆ ವಿವಿಧ ಸಂಶೋಧನಾ ಕ್ಷೇತ್ರದ ಮಾಹಿತಿ ಒದಗಿಸಿದರು.  ಐ.ಐ.ಟಿ. ಧಾರವಾಡದ ಸಹಪ್ರಾಧ್ಯಾಪಕರಾದ ಡಾ. ಶ್ರೀಕಾಂತ ಅವರು ಎಕ್ಸಪಿರಿಮೆಂಟಲ್ ಡೇಟಾ ಎನಲಿಸಿಸ್ ಬಗ್ಗೆ ತಮ್ಮ ಪ್ರಬಂಧವನ್ನು ಮಂಡಿಸಿದರು. ನಮ್ಮ ಮಹಾವಿದ್ಯಾಲಯದ ಹಳಯ ವಿದ್ಯಾರ್ಥಿ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಂಶೋಧಕರಾದ ಮಹಮ್ಮದ ಅಜ್ಞಾನ ಹಸನ್ ಇವರು ಬಾಹ್ಯಾಕಾಶ ಉಪಗ್ರಹದ ಉಷ್ಣತಾ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದರು.

ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಎಸ್. ಹೆಬ್ಬಾಳ ಅವರು ತಮ್ಮ ಅಧ್ಯಕ್ತೀಯ ಭಾಷಣದಲ್ಲಿ ಪಿ.ಡಿ.ಎ. ತಾಂತ್ರಿಕೆ ಮಹಾವಿದ್ಯಾಲಯದ ಇತ್ತಿಚಿಗೆ ನಡೆಯುತ್ತಿರುವ ಸಂಶೋಧನಾ ಅಭಿವೃದ್ಧಿಯ ಕಾರ್ಯಗಳ ವಿವರಣೆ ನೀಡಿ ಮಹವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ವಿವಿಧ ತಾಂತ್ರಿಕ ಯೋಜನೆಗಳನ್ನು ಅಯೋಜಿಸಿದ್ದು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಕಾರ್ಯದತ್ತ ಕೇಂದ್ರಿತವಾಗಿದ್ದು ಹೋಸ ಆವಿಷ್ಕಾರಗಳನ್ನು ಮಾಡಬೇಕೇಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಿರಾಮಿಕ ಮತ್ತು ಸಿಮೆಂಟ್ ಟೆಕ್ನಾಲಜಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಾಬುರಾವ ಸೇರಿಕಾರ ಅವರು ಅತಿಥಿ, ಗೌರವ ಅತಿಥಿಗಳಿಗೆ ಸ್ವಾಗತಿಸಿರು. ಮುಖ್ಯಸ್ಥರಾದ ಡಾ. ಅಮರೇಶ ಅವರು  ವಿಚಾರ ಸಂಕಿರಣದ ಬಗ್ಗೆ ತಮ್ಮ ಪ್ರಾಸ್ತಾವಿಕ ಭಾಷಣ ಮಂಡಿಸಿದರು. ವಿಭಾಗದ ಡಾ. ಶ್ರೀಧರ ಪಾಂಡೆ ವಿಚಾರ ಸಂಕಿರಣದ ಮಹತ್ವ ವಿವರಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪವನ ರಂಗದಾಳ ಅವರು ವಂದಿಸಿದರು. ಕಾರ್ಯಕ್ರಮವನ್ನು ಕು. ಭೂವನೇಶ್ವರಿ ಮತ್ತು ಕು. ನಿಖಿ ವೈದ್ಯ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಟಕ್ಯೂಪ್ ೩ ರ ಸಂಚಾಲಕರಾದ ಪ್ರೊ. ಶರಣ ಪಡಶೇಟ್ಟಿ, ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ನಾಗೇಂದ್ರ ಮಂಠಾಳೆ, ಆಡಳಿತ ಮಂಡಳಿ ಸದಸ್ಯರಾದ ಉದಯಕುಮಾರ ಎಸ್.ಚಿಂಚೋಳಿ, ಡಾ.ಶರಣಬಸಪ್ಪಾ ಕಾಮರೆಡ್ಡಿ ವೇದಿಕೆಯ ಮೇಲೆ ಉಪಸ್ಥತರಿದ್ದರು.

ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶ ಆರ. ಸಂಯೋಜಕರಾಗಿದ್ದು, ಡಾ. ಬಾಬುರಾವ ಸೇರಿಕಾರ ಮತ್ತು ಪವನ ರಂಗದಾಳ ಇವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. ವಿಭಾಗದ ಡಾ. ಜಾನ್ ಯು. ಕೆನಡಿ, ಡಾ.ಮಹಾದೇವಪ್ಪ ಗಾದಗೆ, ಡಾ. ಎಸ್.ಬಿ.ಪಾಟೀಲ, ಪ್ರೋ. ವಿರೇಶ ಮಲ್ಲಾಪೂರ, ಪ್ರೋ. ಗುಂಡು ಕೋಳಕೂರ, ಪ್ರೋ. ಹಂಸರಾಜ್ ಸಾಹು, ಮಲ್ಲಿಕಾರ್ಜುನ ಕುಮನೆ, ಶರಣು ಜಗತೆ, ಗುಲಬರ್ಗಾ ವಿಶ್ವವಿದ್ಯಾಲಯದ ಪ್ರೊ. ವಿ.ಎಸ್. ಜಾಲಿ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here