ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪಧೆ೯ಗೆ ಚಾಲನೆ

0
68

ಕಲಬುರಗಿ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬುಧವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪಧೆ೯ಗಳನ್ನು ಆಯೋಜಿಸಲಾಗಿತ್ತು.

100 ಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಲ್ಲೆಯ ಹಿರಿಯ ನಾಗರಿಕರು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನೆದರು. ಸದಾ ಒಂದಿಲ್ಲೊಂದು ಮಾನಸಿಕ ಒತ್ತಡ ಹಾಗೂ ಕಡೆಗಣನೆಯಿಂದ ಸಾಕಷ್ಟು ನೊಂದಿದ್ದ ಹಿರಿಯರು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು, ವಿಶೇಷವಾಗಿತ್ತು. ಕೆಲವರು ತಮ್ಮ ಮಕ್ಕಳು ಮೊಮ್ಮಕ್ಕೊಳೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ, ಕೆಲವರು ಏಕಾಂಗಿಯಾಗಿ ಕ್ರೀಡಾಕೂಟಕ್ಕೆ ಆಗಮಿಸಿದ್ದರು.

Contact Your\'s Advertisement; 9902492681

ಬಹುತೇಕರು ವೃದ್ಧಾಶ್ರಮಗಳಿಂದ ಆಗಮಿಸಿದ್ದರು. ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು ಈ ಸಂದಭ೯ದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಸಾದಿಕ್ ಹುಸೇನ್ ಖಾನ್ ರವರು ಆಧುನಿಕ ಜೀವನ ಶೈಲಿ, ತಲೆಮಾರುಗಳ ನಡುವಿನ ವ್ಯತ್ಯಾಸದಿಂದ ಹಿರಿಯರು ಮತ್ತು ಕಿರಿಯರ ನಡುವಿನ ಬಾಂಧವ್ಯ ಹದಗೆಡುತ್ತಿದೆ. ಜೀವನದ ಸಂಧ್ಯಾಕಾಲದಲ್ಲಿ ಹಿರಿಯ ನಾಗರಿಕರು ಒಂಟಿತನ, ಮಾನಸಿಕ ಒತ್ತಡ, ಆರ್ಥಿಕ ಮುಗ್ಗಟ್ಟು ಅನಾರೋಗ್ಯ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರಿಗೆ ಮಾನಸಿಕ ಚೈತನ್ಯ ನೀಡಲು ಸರಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಹಿರಿಯ ನಾಗರಿಕರ ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದರು.

1991ರಿಂದ ಅಕ್ಟೋಬರ್‌ 01ನ್ನು ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಹಿರಿಯ ನಾಗರಿಕರಲ್ಲಿ ಆತ್ಮ ಸ್ಥೈರ್ಯ ಪ್ರೋತ್ಸಾಹ ನೀಡುವ ಸಲುವಾಗಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪಧೆ೯ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಿರಿಯನಾಗರಿಕರಲ್ಲಿ ವಯೊಮಿತಿವಾರು ಪುರುಷ ಮತ್ತು ಮಹಿಳೆಯರಿಗೆ 100 ಮೀಟರ್‌ ನಡಿಗೆ, ಬಕೇಟ್ ನಲ್ಲಿ ರಿಂಗ್ ಎಸೆಯುವುದು, ಗಾಯನ ಸ್ಪಧೆ೯, ಏಕ ಪಾತ್ರಭಿನಯ, ಚಿತ್ರ ಕಲೆ ಈ ಎಲ್ಲಾ ಕ್ರೀಡೆಗಳಲ್ಲಿ 100ಕ್ಕೂ ಅಧಿಕ ಹಿರಿಯ ನಾಗರಿಕರು ಭಾಗವಹಿಸಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರುಪಣಾಧಿಕಾರಿ ಮುರುಗೇಶ್ ಗುಣಾರಿ , ಶಿವಶರಣಪ್ಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ , ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ನಾಗಣ್ಣ ಗಣಜಲಖೇಡ್, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಮತ್ತಿತರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here