ಕಲಬುರಗಿ: ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲು ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಡಿವೈಡರ್ ಗೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ಅಲಿ ಅಬ್ಬಾಸ್ ಮತ್ತು ಇರ್ಫಾನ್ ಮೃತ ವಿದ್ಯಾರ್ಥಿಗಳು. ಇಬ್ಬರು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ನಗರದ ಹೊರವಲಯದ ನಾಗನಳ್ಳಿ ರಸ್ತೆಯ ಓವರ್ ಬ್ರಡ್ಜ್ ಬಳಿ ಘಟನೆ ಸಂಭವಿಸಿದೆ.
ಅತಿವೇಗವಾಗಿ ಬೈಕ್ ಓಡಿಸಿ ನಿಯಂತ್ರಣ ತಪ್ಪಿರುವುದರಿಂದ ದುರ್ಘಟನೆ ನಡೆದಿದೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ನಗರದ ಟ್ರಾಫಿಕ್ ಒನ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.