ಭಾಷಾ ಕೌಶಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಮೇಳಗಳು ಸಹಕಾರಿ

0
21

ಸುರಪುರ: ನಗರದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ದರಬಾರದಲ್ಲಿಭಾಷೆ ಮತ್ತು ಗಣಿತ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಸೋಮರೆಡ್ಡಿ ಮಂಗಿಹಾಳ್ ಭಾಷಾ ಕೌಶಲಗಳನ್ನು ಅಭಿವೃದ್ಧಿಪಡಿಸಲು ಮೇಳಗಳು ಸಹಕಾರಿಯಾಗಿವೆ. ಶಾಲಾ ಮಕ್ಕಳು ಮೇಳಗಳಿಂದ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಭಾಷಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದರು.

Contact Your\'s Advertisement; 9902492681

ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಸಂಪನ್ಮೂಲ ವ್ಯಕ್ತಿ ಅನ್ವರ್ ಜಮಾದಾರ್ ಮಾತನಾಡುತ್ತಾ ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳು ಹಾಗೂ ಶಿಕ್ಷಕರು ಕ್ರಿಯಾಶೀಲರಾಗಿ ಭಾಷೆ ಮತ್ತು ಗಣಿತದ ವಿವಿಧ ಚಟುವಟಿಕೆಗಳನ್ನು ತಾವು ಅರ್ಥೈಸಿಕೊಂಡು ಉಳಿದ ಮಕ್ಕಳಿಗೆ ಅರ್ಥವಿಸುವುದರ ಮೂಲಕ ತಮ್ಮ ಜ್ಞಾನ ವೃದ್ಧಿಸಿಕೊಳ್ಳುತ್ತಾರೆ ಎಂದರು.

ಅಕ್ಷರಗಳಿಂದ ಪದಗಳ ರಚನೆ ಕಥೆಗಳು ನಿತ್ಯ ಜೀವನದಲ್ಲಿ ಬಳಸಲ್ಪಡುವ ಇಂಗ್ಲಿಷ್ ಪದಗಳು ವ್ಯವಹಾರಿಕ ಗಣಿತ ಹೀಗೆ ಅನೇಕ ಚಟುವಟಿಕೆಗಳನ್ನು ಮಕ್ಕಳು ತುಂಬಾ ಚೆನ್ನಾಗಿ ಅಭಿವ್ಯಕ್ತಿಸಿದರು. ಮೇಳದಲ್ಲಿ ಸಿ ಆರ್ ಪಿ ಗಳಾದ ಶಿವಕುಮಾರ್ ಹಿರೇಮಠ ಶಿವಲೀಲಾ ಹಿರೇಮಠ ಶಿಕ್ಷಕರಾದ ಗೌರಮ್ಮ ಮೇಘ ಸರಸ್ವತಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಕೃಷ್ಣ ಬಿಜಾಸಪುರ, ಅನಿಲ್ ಔಶಾ,ಶರಣ್ಯ ಚಂದನ ಹಾಗೂ ಅತಿಥಿ ಶಿಕ್ಷಕರು ಶಾಲಾ ಮಕ್ಕಳು ಭಾಗವಹಿಸಿದ್ದರು ವೆಂಕಟೇಶ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here