ಸ್ವಹಿತ ಮರೆತು, ಪರಹಿತ ಕಾಪಾಡುವನೇ ಶ್ರೇಷ್ಠ ಲೇಖಕ; ಶಾಸಕ ಅಲ್ಲಮಪ್ರಭು ಪಾಟೀಲ

0
29

ಕಲಬುರಗಿ; ಉತ್ತಮವಾದ ಲೇಖಕರು ತನ್ನತನ ಅರಿತು, ಸ್ವಹಿತ ಮರೆತು, ಸಾಹಿತ್ಯ ಲೋಕದ ಸರದಾರರಾಗಿ ಜೀವಂತವಾಗಿ ನಮ್ಮ ಜೊತೆ ಶಾಶ್ವತವಾಗಿ ಉಳಿಯುತ್ತಾರೆ ಅಂತವರ ಸಾಲಿಗೆ ಪ್ರೊ. ಹೆಂಬಾಡಿ ಯವರು ಸೇರುತ್ತಾರೆ ಎಂದು ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಹೇಳಿದರು.

ಮಂಗಳವಾರ ನಗರದ ರಾಜಾಪುರ ಬಡಾವಣೆಯಲ್ಲಿ ಡಾ. ರಾಜಕುಮಾರ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಾಹಿತಿ ಪ್ರೊ. ಶಂಕರಲಿಂಗ ಹೆಂಬಾಡಿ ಅವರ ಪ್ರಥಮ ಸ್ಮರಣೋತ್ಸವ ನಿಮಿತ್ಯ ಪ್ರಶಸ್ತಿ ಪ್ರದಾನ ಹಾಗೂ  ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಮನುಷ್ಯನಿಗೆ ಹುಟ್ಟು ಸಹಜ, ಸಾವು ಅನಿವಾರ್ಯ ಅದರ ಮಧ್ಯದಲ್ಲಿ ಉತ್ತಮವಾದ ಕಾರ್ಯ ಮಾಡಿ ಶಾಶ್ವತವಾಗಿ ಉಳಿಯುವಂತಾಗಬೇಕೆಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಆಯೋಜಕರಾದ  ಸಾಹಿತ್ಯ ಹಾಗೂ ಸಂಸ್ಕೃತ ಸಂಘದ ಅಧ್ಯಕ್ಷರಾದ ರಮೇಶ ಯಾಳಗಿ ಮಾತನಾಡುತ್ತಾ ಬದುಕಿದರೆ ದೀಪದಂತೆ ಬದುಕಬೇಕು, ದೀಪವು ಬಡವ-ಶ್ರೀಮಂತ, ಜಾತಿ- ಧರ್ಮವೆಂದು ತಾರತಮ್ಯ ಮಾಡದೆ ತನ್ನನ್ನು ತಾನು ಸುಟ್ಟಿಕೊಂಡು ಪರರಿಗೆ ಬೆಳಕು ನೀಡುತ್ತದೆ. ಅದೇ ರೀತಿ ಪ್ರೊ. ಶಂಕರ ಲಿಂಗ ಹೆಂಬಾಡಿ ಅವರು ಬದುಕಿ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರೊಬ್ಬ ವ್ಯಕ್ತಿಯಾಗದೆ ನಮ್ಮೆಲ್ಲರಿಗೂ ಶಕ್ತಿಯಾಗಿದ್ದಾರೆಂದು   ಹೇಳಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ ತೇಗಲತಿಪ್ಪಿ, ಶರಣಮ್ಮ ಜಿ ಹೆಂಬಾಡಿ, ಪ್ರಾಂಶುಪಾಲರಾದ ನೀಲಕಂಠ ಕಣ್ಣಿ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಎಂ ಬಿ ನಿಂಗಪ್ಪ, ಜನಪರ ಹೋರಾಟಗಾರ ಹಣಮಂತರಾಯ ಅಟ್ಟೂರ, ಮಾಜಿ ಮಹಾಪೌರರಾದ ರವೀಂದ್ರ ಸಿ. ಹುನ್ನಳ್ಳಿ, ಪ್ರಾಂಶುಪಾಲರಾದ ಡಾ. ರಾಜಶೇಖರ ಶಿರವಾಳಕರ, ಜಗದೀಶ ಸ್ವಾಮಿ ಆಗಮಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ವಿಜಯಕುಮಾರ ಕೆ ಗೋತಗಿ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಸುನಿಲಕುಮಾರ ವಂಟಿ ವಹಿಸಿದ್ದರು. ಇದೆ ಸಂದರ್ಭದಲ್ಲಿ ಮುದನೂರು ಗ್ರಾಮದ ಶಿಕ್ಷಕರಾದ ಈರಣ್ಣ ಪತ್ತಾರ ಹಾಗೂ ಶಾದಿಪುರದ ಗ್ರಾಮದ ಶಿಕ್ಷಕರಾದ ಸಾಬಣ್ಣ ದಂಡಿನವರ ಅವರಿಗೆ “ವಿದ್ಯಾಶಂಕರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಹಿರಿಯ ಸಾಹಿತಿಗಳಾದ ಡಾ. ಸಿದ್ದರಾಮ ಹೊನಕಲ್, ಕೋಲಾರದ  ಕವಿಗಳಾದ ಲಕ್ಕೂರ ಆನಂದ, ಡಾ. ಎಸ್ ಎಲ್ ಪಾಟೀಲ,  ಪ್ರೇಮಾ ಹೂಗಾರ, ಸುರೇಶ ದೇಶಪಾಂಡೆ, ವೈಜನಾಥ ಬಿ ಮಿತ್ರ ಸೇರಿದಂತೆ ಅನೇಕ ಕವಿಗಳು  ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯಲ್ಲಾಲಿಂಗ ದಂಡಿನ, ಸುಧಾರಾಣಿ ಡಿ ಕೆ, ವೀರೇಶ ಪಾಟೀಲ, ಅರುಣಕುಮಾರ ಬಿ, ಪ್ರಭವ ಪಟ್ಟಣಕರ, ಮಲ್ಲಿಕಾರ್ಜುನ ಹೆಂಬಾಡಿ,  ಶಿವರಾಜ ಬಸ್ತೆ, ಸಿದ್ದರಾಮ ಹಂಚಿನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here