ಸುರಪುರದ ವೇಣುಗೋಪಾಲಸ್ವಾಮಿ ಜಾತ್ರೆಯ ಅಂಗವಾಗಿ ಕುಸ್ತಿ ಪಂದ್ಯಗಳು ಜರುಗಿದವು

0
87

ಸುರಪುರ: ಶ್ರೀವೇಣುಗೊಪಾಲಸ್ವಾಮಿಯ ಐತಿಹಾಸಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ನೇತೃತ್ವದಲ್ಲಿ ಕುಸ್ತಿ ಪಂದ್ಯಾವಳಿಗಳು ಜರುಗಿದವು.
ಐತಿಹಾಸಿಕವಾದ ಜಾತ್ರೆಯಲ್ಲಿ ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕುಸ್ತಿ ಪಂದ್ಯಾಟಗಳು,ಈ ವರ್ಷವುಕೂಡ ನಡೆಸಲಾಯಿತು.

ಮೂರು ದಿನಗಳ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿಯೂ ಹೆಸರುವಾಸಿಯಾಗಿದೆ.ಅದರಂತೆ ಇಂದು ನಡೆದ ಪಂದ್ಯಾವಳಿಗಳು ಆರಂಭದಲ್ಲಿ ಚಿಕ್ಕ ಮಕ್ಕಳಿಂದ ಬಾಳೆ ಹಣ್ಣಿನ ಬಹುಮಾನದೊಂದಿಗೆ ಕುಸ್ತಿ ಪಂದ್ಯಾ ಆರಂಭಿಸಲಾಯಿತು.ನಂತರ ಐವತ್ತು,ನೂರು,ಐದನೂರು,ಸಾವಿರು ರೂಪಾಯಿಗಳ ಬಹುಮಾನದ ಕುಸ್ತಿಗಳು ನಡೆದವು.

Contact Your\'s Advertisement; 9902492681

ತಾಲ್ಲೂಕಿನ ವಾಗಣಗೇರಾ,ಬೊಮ್ಮನಹಳ್ಳಿ,ದೇವರಗೋನಾಲ,ಜಾಲಿಬೆಂಚಿ.ಅಮ್ಮಾಪುರ,ಸಿದ್ದಾಪುರ ಹೀಗೆ ಹಲವಾರು ಹಳ್ಳಿಗಳ ಹಾಗು ಅನೇಕ ತಾಲ್ಲೂಕು ಮತ್ತು ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ನೂರಾರು ಸಂಖ್ಯೆಯ ಕುಸ್ತಿ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರದರ್ಶನ ತೋರಿದರು.ಕೊನೆಯದಾಗಿ ಸಂಜೆಯ ವೇಳೆಗೆ ಬೆಳ್ಳಿ ಕಡಗದ ಕುಸ್ತಿ ನಡೆಸಿ ಗೆದ್ದ ಜಟ್ಟಿಗೆ ಬೆಳ್ಳಿ ಕಡಗ ತೊಡಿಸಿ,ಬಟ್ಟೆ ಆಯೆರಿ ಮಾಡಿ ಹೂಮಾಲೆ ಹಾಕಿ ಗೌರವಿಸಲಾಯಿತು.

ಅರಸು ಮನೆತನದ ರಾಜಾ ಲಕ್ಷ್ಮೀನಾರಾಯಣ ನಾಯಕ,ರಾಜಾ ವಾಸುದೇವ ನಾಯಕ,ರಾಜಾ ಹರ್ಷವರ್ಧನ ನಾಯಕ,ಶ್ರೀನಿವಾಸ ನಾಯಕ,ರಾಜಾ ಪಿಡ್ಡನಾಯಕ,ರಾಜಾ ಕೃಷ್ಣದೇವರಾಯ ನಾಯಕ ಸೇರಿದಂತೆ ಸಹಸ್ರಾರು ಜನ ಭಾಗವಹಿಸಿ ಪಂದ್ಯಾವಳಿಗಳ ವೀಕ್ಷಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here