ಪಿಂಚಣಿ ನೀಡುವಂತೆ ಆಗ್ರಹಿಸಿ ಪತ್ರ ಚಳುವಳಿ: ಚಂದಪ್ಪ ಯಾದವ್

0
65

ಸುರಪುರ: ರಾಜ್ಯದ ಅನುದಾನಿತ ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರಿಗೆ ಪಿಂಚಣಿ ನೀಡುವಂತೆ ಆಗ್ರಹಿಸಿ ಅಗಸ್ಟ ೨೮ ರಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ನೌಕರರು ಸುರಪುರದಲ್ಲಿ ಸಭೆ ಸೇರಿ ಪ್ರಧಾನ ಮಂತ್ರಿಗಳಿಗೆ ಹಾಗೂ ರಾಜ್ಯದ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಅಂಚೆಗೆ ಹಾಕುವ ಮೂಲಕ ವಿನೂತನ ಪ್ರತಿಭಟನೆ ನೆಡೆಸಲಾಗುವದು ಎಂದು ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಚಂದಪ್ಪ ಯಾದವ್ ತಿಳಿಸಿದ್ದಾರೆ.

೨೦೦೬ ಕ್ಕಿಂತಲೂ ಮೊದಲು ನೇಮಕಗೊಂಡ ಎಲ್ಲಾ ಅನುದಾನಿತ ನೌಕರರಿಗೆ ಪಿಂಚಣಿ ಯೋಜನೆ ಜಾರಿಯಲ್ಲಿದ್ದು , ೨೦೦೬ ಕ್ಕಿಂತಲೂ ಪೂರ್ವದಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ನೇಮಕ ಹೊಂದಿ ನಂತರ ಅನುದಾನಕ್ಕೆ ಒಳಪಟ್ಟ ಸಿಬಂದ್ದಿಗೆ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯಗಳಿಲ್ಲದೆ ನೌಕರರಿಗೆ ತೊಂದರೆ ಆಗಿದೆ ಎಂದರು . ೨೦೦೬ ರ ನಂತರ ನೇಮಕ ಹೊಂದಿದ ನೌಕರರಿಗೂ ಈ ಸೌಲಭ್ಯಗಳು ಇರುವದಿಲ್ಲ. ಪಿಂಚಣಿ ಬೇಡಿಕೆ ಈಡೇರಿಸುವಂತೆ ರಾಜ್ಯಾಧ್ಯಾಂತ ಅನೇಕ ಹೋರಾಟ ಮಾಡಿದರೂ ಸರಕಾರಗಳು ಸ್ಪಂದಿಸುತ್ತಿಲ್ಲ . ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ನಡೆದ ಹೋರಾಟದ ಸ್ಥಳಕ್ಕೆ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಬೆಂಬಲಿಸಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು ,ಪಿಂಚಣಿ ಬೇಡಿಕೆ ಈಡೇರಿಸುವಂತೆ ಪತ್ರದ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವದು ಎಂದರು.

Contact Your\'s Advertisement; 9902492681

ಅಗಸ್ಟ್ ೨೮ ರಂದು ನಡೆಯುವ ಪತ್ರ ಚಳುವಳಿಯಲ್ಲಿ ಯಾದಗಿರಿ ಶಾಹಪೂರ ಮತ್ತು ಸುರಪುರ ತಾಲೂಕಿನ ಎಲ್ಲಾ ಅನುದಾನಿತ ಶಾಲಾ ಕಾಲೇಜುಗಳ ನೌಕರರು ತಪ್ಪದೆ ಚಳುವಳಿಯಲ್ಲಿ ಭಾಗವಹಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here