ಬಿಆರ್‍ಸಿ ಕಚೇರಿಗೆ ಸಚಿವ ದರ್ಶನಾಪುರ ಭೇಟಿ:ಹೊರಗುತ್ತಿಗೆ ನೌಕರರ ಮನವಿ ಸಲ್ಲಿಕೆ

0
10

ಸುರಪುರ: ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶಿಕ್ಷಣ ಇಲಾಖೆಯ ಬಿಆರ್‍ಸಿ ಕಚೇರಿಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರ ಸಂಘದ ಮುಖಂಡರು ಸಚಿವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿ,ಸಾರ್ವಜನಿಕ ಶಿಕ್ಷಣ ಇಲಾಖೆ ಕಲ್ಯಾಣ ಕರ್ನಾಟಕ ಹೊರ ಗುತ್ತಿಗೆ ನೌಕರರ ಸಂಘ ಯಾದಗಿರಿ ಜಿಲ್ಲಾ ವತಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮತ್ತು ತಾಲೂಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್, ಪ್ರೋಗ್ರಾಮರ್, ಲೆಕ್ಕಸಹಾಯಕ, ವಾಹನ ಚಾಲಕ ಮತ್ತು ಸಿಪಾಯಿ ವೇತನ ಅತೀ ಕಡಿಮೆ ಇದ್ದು ದಿನ ನಿತ್ಯದ ದವಸ ದಾನ್ಯಗಳ ಬೆಲೆ ಹೆಚ್ಚಳವಾದ ಕಾರಣದಿಂದ ತಿಂಗಳ ವೇತನ ಬದುಕಿಗೆ ಸಾಲುತ್ತಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆ ವೇತನವನ್ನು ಪರಿಷ್ಕೃತಗೊಳಿಸಿ ಹೆಚ್ಚಿಸಿರುವುದಿಲ್ಲ. ಸದರಿ ಇಲಾಖೆಯಲ್ಲಿ 10 ವರ್ಷ ಮತ್ತು 16 ವರ್ಷ ದಿಂದ ಕೆಲಸ ನಿರ್ವಹಿಸುತ್ತಿದ್ದು, ಸರಕಾರ ಯೋಜನೆಯಾದಂತಹ (ಡಿ.ಪಿ.ಇ.ಪಿ ಯೋಜನೆ) ಯಡಿಯಲ್ಲಿ ನಮ್ಮ ಸಿಬ್ಬಂದಿಯನ್ನು ಖಾಯಂಗೊಳಿಸಿ, ನಮಗೆ ಸೇವಾ ಭದ್ರತೆ, ವೈದ್ಯಕೀಯ ವೆಚ್ಚ, ಸರಕಾರಿ ಹುದ್ದೆಯಲ್ಲಿರುವಂತಹ ಸಿಬ್ಬಂದಿಗಳಿಗಿಂತ ರಾತ್ರಿ ಹಗಲು ಎನ್ನದೇ ಕೆಲಸ ನಿರ್ವಹಿಸುತ್ತಿದ್ದು ಸರಕಾರಿ ಅರೇ ಸರಕಾರಿ ಕೆಲಸ ಮಾಡುತ್ತಿರುವವರಿಗೆ ಸಮಾನ ವೇತನ ಎಂದು ಸುಪ್ರಿಂ ಕೋರ್ಟ ಆದೇಶ ನೀಡಿದರೂ ಸಹ ನಮಗೆ ಸರಿಸಮಾನ ವೇತನ ನೀಡುತ್ತಿಲ್ಲ ಈ ವಿಷಯವನ್ನು ಮಾನ್ಯರಾದ ತಾವುಗಳು ಗಂಭೀರವಾಗಿ ಗಣನಿಗೆ ತೆಗೆದುಕೊಂಡು ನಮಗೆ ಬರಬೇಕಾದ ಸೌಲಭ್ಯವನ್ನು ಹಾಗೂ ತಿಂಗಳ ವೇತನ ಹೆಚ್ಚಳ ಮಾಡಬೇಕು ನಮ್ಮ ಮನೆಯಲ್ಲಿರುವ ಕುಟುಂಬದವರಿಗೆ ಸಂತೋಷದಿಂದ ದವಸದಾನ್ಯಗಳು, ಮಕ್ಕಳ ಉನ್ನತ ವ್ಯಾಸಂಗಕ್ಕೆ ಹಾಗೂ ಇನ್ನಿತರ ಸಂಸಾರಿಕ ಖರ್ಚನ್ನು ನಿಬಾಯಿಸಲು ತಿಂಗಳ ಸಂಬಳ ಹೆಚ್ಚಳ ಮಾಡಬೇಕು ಪ್ರತೀ ನೌಕರರ ವೇತನದಲ್ಲಿ ಪ್ರತೀ ತಿಂಗಳು ಜಿ.ಎಸ್.ಟಿ ಅಂತ ಸುಮಾರು 3000/- ರೂಗಳಂತೆ ಕಡಿತಗೊಳ್ಳುತ್ತಿದೆ. ಇದನ್ನು ರದ್ದುಗೊಳಿಸಬೇಕು. ಮುಂದಿನ ದಿನಗಳಲ್ಲಿ ಎನ್.ಜಿ.ಓ ಮೂಲಕ ವೇತನ ಮಾಡುವುದನ್ನು ರದ್ದುಗೊಳಿಸಿ ನೇರವಾಗಿ ಇಲಾಖೆ ಮೂಲಕವೇ ನಮ್ಮೆಲ್ಲ ಸಿಬ್ಬಂದಿಗಳಿಗೆ ವೇತನ ನೀಡುವ ವ್ಯವಸ್ಥೆ ಮಾಡಬೇಕು. ಹಾಗೂ ದುಬಾರಿಯ ಈ ಜಗತ್ತಿನಲ್ಲಿ ನಮ್ಮ ಕುಟುಂಬಗಳು ನೆಮ್ಮದಿಯಿಂದ ಬದುಕು ಸಾಗಿಸಲು ವೇತನವನ್ನು ಹೆಚ್ಚಳ ಮಾಡಬೇಕೆಂದು ಈ ಮೂಲಕ ಕಳಕಳಿಯಿಂದ ವಿನಂತಿ ಪೂರ್ವಕವಾಗಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ,ತಮ್ಮ ಮನವಿ ಆಲಿಸಿದ್ದೇನೆ ಮುಖ್ಯಮಂತ್ರಿಗಳು ಮನವಿಯನ್ನು ಪರಿಶೀಲಿಸಿ ಸಂಬಂಧಪಟ್ಟ ರಾಜ್ಯ ಹಂತದ ಅಧಿಕಾರಿಗಳಲ್ಲಿ ಚರ್ಚಿಸಿ ನಿಮಗೆ ಆದ ಸಮಸ್ಯಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು. ಮನವಿ ಸಲ್ಲಿಸುವ ವೇಳೆ ಜಿಲ್ಲಾ ಗೌರವಾಧ್ಯಕ್ಷರು ದೇವಿಂದ್ರಪ , ಜಿಲ್ಲಾಧ್ಯಕ್ಷರು ಶರಣಪ್ಪ ಕರಡಿ, ಅಬ್ದುಲ್ ಅಜೀಜ್ ಉಪಾಧ್ಯಕ್ಷರು ಪರಶುರಾಮ ಜಿಲ್ಲಾ ಉಪಾಧ್ಯಕ್ಷರು, ನಾಗರತ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಹಾಲಕ್ಷ್ಮೀ ಜಿಲ್ಲಾ ಖಜಾಂಚಿ, ಮೊಹಮದ್ ಅಲಿ ಸಂಘಟನ ಕಾರ್ಯದರ್ಶಿ ರವರು ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here