ಕವಡಿಮಟ್ಟಿ: ಕೃಷಿ ವಿಜ್ಞಾನ ಕೇಂದ್ರದ ಆಡಳಿತ ಭವನ ಕಟ್ಟಡ ಕಳಪೆ ಆರೋಪ

0
25

ಸುರಪುರ: ತಾಲೂಕಿನ ಕವಡಿಮಟ್ಟಿ ಬಳಿಯಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಇಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಡಳಿತ ಭವನ ಮತ್ತು ರೈತರ ವಸತಿ ನಿಲಯದ ಕಟ್ಟಡಗಳು ಕಳಪೆ ಕಾಮಗಾರಿಯಾಗಿವೆ ಎಂದು ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ ಆರೋಪಿಸಿದ್ದಾರೆ.

ರೈತರ ವಸತಿ ನಿಲಯದ ಹಾಗೂ ಆಡಳಿತ ಭವನ ಕಟ್ಟಡಗಳ ಗುಣಮಟ್ಟ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ಸಂಘಟನೆ ರೈತರೊಂದಿಗೆ ಪ್ರತಿಭಟನೆ ನಡೆಸಲಿದೆ-ವೆಂಕೋಬ ದೊರೆ ಶೋಪಹೋಸಂ ಒಕ್ಕೂಟದ ರಾಜ್ಯಾಧ್ಯಕ್ಷ.

ಸುಮಾರು ಒಂದು ಕಟ್ಟಡಕ್ಕೆ 80 ಲಕ್ಷ ಮತ್ತೊಂದು ಕಟ್ಟಡಕ್ಕೆ 70 ಲಕ್ಷ ರೂಪಾಯಿಗಳ ಅನುದಾನದಲ್ಲಿ ಕಟ್ಟಡ ನಿರ್ಮಿಸಲಾಗಿದೆ,ಇದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಅನೇಕ ಅಧಿಕಾರಿಗಳು ಆಗಮಿಸಿ ಉದ್ಘಾಟನೆ ಮಾಡಿದ್ದಾರೆ,ಆದರೆ ಉದ್ಘಾಟನೆ ಪೂರ್ವದಲ್ಲಿಯೇ ಈ ಕಟ್ಟಡ ಅನೇಕ ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಇದರ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಕಟ್ಟಡ ನಿರ್ಮಾಣ ಮಾಡಿರುವ ಗುತ್ತಿಗೆದಾರರು ಅಥವಾ ಸಂಬಂಧಿಸಿರುವ ಅಧಿಕಾರಿಗಳು ಇದರ ಹೊಣೆ ಹೊರಬೇಕಿದೆ.ಅಲ್ಲದೆ ಕೂಡಲೇ ಈ ಕಟ್ಟಡಗಳ ಗುಣಮಟ್ಟ ಪರಿಶೀಲನಾ ತಂಡದಿಂದ ಪರಿಶೀಲನೆ ಆಗಬೇಕಿದೆ,ಕಟ್ಟಡ ಕಳಪೆಯಾಗಿರುವುದು ಸಾಬೀತಾದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಮುಂದೆ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆಯಾಗಲಿದ್ದಾರೆ ಎಂದು ಪ್ರಶ್ನಿಸಿರುವ ಅವರು ಕೂಡಲೇ ಇದರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಕೇಂದ್ರದ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here