ಚಿತ್ತಾಪೂರ: ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಅ.18 ರಂದು ಬುಧವಾರ ಬೆಳಗ್ಗೆ 10:30ಕ್ಕೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಹಾಗೂ ಗೌರವಾಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ದಿ.10-10-2023 ಮಂಗಳವಾರ ರಾತ್ರಿ ಹಲಕರ್ಟಿ ಗ್ರಾಮದ ಗ್ರಾಮ ಪಂಚಾಯಿತ ಕಾರ್ಯಲಯದ ಎದುರುಗಡೆ ಕಟ್ಟೆಯ ಮೇಲಿರುವ ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಿಗರೇಟ್ ಅಥವಾ ಬೀಡಿಯಿಂದ ಮುಖಕ್ಕೆ ಸುಟ್ಟು ಅಪಮಾನ ಮತ್ತು ಅವಮಾನ ಮಾಡಿರುತ್ತಾರೆ.
ದೃಶಕೃತ್ಯವನ್ನು ವಿರೋಧಿಸಿ ತಕ್ಷಣವೇ ಹಲಕರ್ಟಿ ಗ್ರಾಮದಲ್ಲಿ ಪ್ರತಿಭಟನೆಯನ್ನು ಮಾಡಿ ಅಪರಾಧಿಗಳನ್ನು ಕೂಡಲೇ ಬಂದಿಸುವಂತೆ ಒತ್ತಾಯಿಸಿ ಮನವಿ ನೀಡಲಾಗಿರುತ್ತದೆ ಹಾಗೂ ಬುಧವಾರ 11 ರಂದು ವಾಡಿ ಪೆÇೀಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.ಇಲ್ಲಿಯವರೆಗೆ ಪೆÇೀಲಿಸ ಇಲಾಖೆ ಅಪರಾಧಿಗಳನ್ನು ಬಂದಿಸುವಲ್ಲಿ ವಿಫಲವಾಗಿರುತ್ತಾರೆ.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆಯ ತಾಲೂಕ ಘಟಕ ಚಿತ್ತಾಪೂರ ಹಾಗೂ ಶ್ರೀ ಬಸವಾಭಿಮಾನಿಗಳ ವತಿಯಿಂದ ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಶ್ರೀ ಶಿವಶರಣಪ್ಪ ಅಮರಾವತಿ ವೃತ್ತ (ಲಾಡ್ಜಿಂಗ್ ಕ್ರಾಸ್) ಮೂಲಕ ತಹಸೀಲ ಕಾರ್ಯಲಯದವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ ಹೊರಟು ನಂತರ ಮಾನ್ಯ ತಹಸೀಲ್ದಾರ ಮುಖಾಂತರ ರಾಜ್ಯ ಪಾಲರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಮೆರವಣಿಗೆಯಲ್ಲಿ ಸಮಾಜದ ಹಿರಿಯರು,ಮಹಾ ಸಭೆಯ ಪದಾಧಿಕಾರಿಗಳು, ಯುವಕರು ಮತ್ತು ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಗ್ರಾಮಗಳ ಮುಖಂಡರು, ಯುವಕರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.